ETV Bharat / bharat

ಇದ್ದಕ್ಕಿದ್ದಂತೆ 50 ಅಡಿ ಕೆಳಗೆ ಕುಸಿದ ಮನೆ.. ಕುಟುಂಬ ಪಾರು - ರಾಬರ್ಟ್‌ಸನ್ ಇಂಕ್ಲೈನ್ ಕಲ್ಲಿದ್ದಲು ಗಣಿ

ಮನೆಯೊಂದು 50 ಅಡಿ ಕೆಳಗೆ ಕುಸಿದಿರುವ ಘಟನೆ ಚಂದ್ರಾಪುರದ ಘುಗೂಸ್ ಪ್ರದೇಶದಲ್ಲಿ ನಡೆದಿದೆ. ಹಿಂದೆ ಈ ಪ್ರದೇಶದಲ್ಲಿ ರಾಬರ್ಟ್‌ಸನ್ ಇಂಕ್ಲೈನ್ ಕಲ್ಲಿದ್ದಲು ಗಣಿ ಇತ್ತು ಎನ್ನಲಾಗಿದೆ.

House suddenly collapsed
50 ಅಡಿ ಕೆಳಗೆ ಕುಸಿದ ಮನೆ
author img

By

Published : Aug 27, 2022, 9:30 AM IST

Updated : Aug 27, 2022, 10:02 AM IST

ಚಂದ್ರಾಪುರ(ಮಹಾರಾಷ್ಟ್ರ): ಮನೆಯೊಂದು 50 ಅಡಿ ಕೆಳಗೆ ಕುಸಿದಿರುವ ಘಟನೆ ಚಂದ್ರಾಪುರದ ಘುಗೂಸ್ ಪ್ರದೇಶದಲ್ಲಿ ನಡೆದಿದೆ. ಕುಟುಂಬ ಸದ್ಯಸ್ಯರು ಮನೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಒಂದು ಸಣ್ಣ ಹೊಂಡ ಬಿದ್ದಿತು. ಬಳಿಕ ವೇಗವಾಗಿ ಮಣ್ಣು ಕುಸಿಯಲಾರಂಭಿಸಿತು. ಏನೋ ಅನಾಹುತ ಸಂಭವಿಸಲಿದೆ ಎಂದು ತಿಳಿದ ಮನೆಯ ಸದಸ್ಯರು ಹೊರ ಬಂದಿದ್ದು, ಕ್ಷಣಾರ್ಧದಲ್ಲಿ ಮನೆ ನೆಲಕ್ಕುರುಳಿದೆ.

50 ಅಡಿ ಕೆಳಗೆ ಕುಸಿದ ಮನೆ..

ಈ ಪ್ರದೇಶದಲ್ಲಿ ಬ್ರಿಟಿಷರ ಕಾಲದಲ್ಲಿ ಕಲ್ಲಿದ್ದಲು ಗಣಿ ಇತ್ತು ಎನ್ನಲಾಗ್ತಿದೆ. ಇದೀಗ ಒಂದು ಮನೆ ನೆಲಕ್ಕುರುಳಿರುವುದರಿಂದ ಈ ಭಾಗದ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಇನ್ನೂ ಕೆಲವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ವರದಿಯಾಗಿದೆ.

ಬ್ರಿಟಿಷರ ಕಾಲದಲ್ಲಿ, ಘುಗೂಸ್​​ನಲ್ಲಿ ರಾಬರ್ಟ್‌ಸನ್ ಇಂಕ್ಲೈನ್ ಕಲ್ಲಿದ್ದಲು ಗಣಿ ಇತ್ತು. ತೆರೆದ ಹೊಂಡಗಳಿಂದ ಗಣಿಗಾರಿಕೆ ಮಾಡಲಾಗಿತ್ತು. ಆ ಸಮಯದಲ್ಲಿ ನಗರದ ವಿಸ್ತರಣೆ ಹೆಚ್ಚಾಗಿ ಗಣಿ ಬಳಿ ನಾಗರಿಕರು ಮನೆ ಕಟ್ಟಿಕೊಂಡಿದ್ದಾರೆ. ಸದ್ಯ ಇಡೀ ಘುಗೂಸ್ ನಗರವು ಭೂಗತ ಕಲ್ಲಿದ್ದಲು ಗಣಿ ಮೇಲೆ ನೆಲೆಗೊಂಡಿದೆ ಎನ್ನಲಾಗ್ತಿದೆ.

ಘಟನೆಯ ಬಳಿಕ ಅಮರಾಯಿ ವಾರ್ಡ್​ನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಮಾಹಿತಿ ಪಡೆದ ಶಾಸಕ ಕಿಶೋರ್ ಜಾರ್ಗೆವಾರ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಸದ್ಯ ಘಟನೆಯ ಅಧ್ಯಯನಕ್ಕೆ ಭೂ ಸಮೀಕ್ಷಾ ತಂಡ ಆಗಮಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ವಂಚನೆ ಪ್ರಕರಣ: ₹171.74 ಕೋಟಿ ದಂಡ ವಿಧಿಸಿದ ಸಿಬಿಐ ಕೋರ್ಟ್

Last Updated : Aug 27, 2022, 10:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.