ಇಂದೋರ್( ಮಧ್ಯಪ್ರದೇಶ): 35 ವರ್ಷದ ಹೆಚ್ಐವಿ ಪೀಡಿತೆ ಮಹಿಳೆ ಕೋವಿಡ್ ನಿಂದ ಮೃತಪಟ್ಟಿರುವ ಘಟನೆ ಇಂದೋರ್ನಲ್ಲಿ ನಡೆದಿದೆ.
ಮೃತ ಮಹಿಳೆ ನ್ಯುಮೋನಿಯಾದಿಂದ ಬಳಲುತ್ತಿದ್ದು, ಜುಲೈ 16ಕ್ಕೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಚಿಕಿತ್ಸೆಗಾಗಿ ಸರ್ಕಾರಿ ಮನೋರಮ ರಾಜೆ ಕ್ಷಯರೋಗ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನು ನ್ಯುಮೋನಿಯಾಗೆ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿ ಮಹಿಳೆಗೆ ಕೊರೊನಾ ಸೊಂಕು ಇರುವುದು ದೃಢಪಟ್ಟಿದೆ. ಬಳಿಕ ಚಿಕಿತ್ಸೆ ಫಲಕಾರಿಯಾಗದೇ 27ಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುತ್ತಾರೆ. ಇನ್ನು ಮೃತ ಮಹಿಳೆ ಕೋವಿಡ್ನ ಎರಡು ಲಸಿಕೆಗಳನ್ನೂ ಪಡೆದಿದ್ದರಲ್ಲದೇ, ಹೆಚ್ಐವಿ ಪೀಡಿತೆ ಆಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಇಂದೋರ್ನಲ್ಲಿ ಕೋವಿಡ್ನಿಂದ ಮರಣ ಹೊಂದಿದವರ ಸಂಖ್ಯೆ 1,446ಕ್ಕೆ ತಲುಪಿದ್ದು, ಕಳೆದ 24 ಗಂಟೆಯಲ್ಲಿ 121 ಕೊವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ನೀವೂ ಮೊಟ್ಟೆ ತಿನ್ನುತ್ತೀರಾ? ಗುಣಮಟ್ಟದ ಮೊಟ್ಟೆಗಳಿಗೆ ಬಂದಿದೆ ಜಪಾನಿ ತಂತ್ರಜ್ಞಾನ!