ಆಗ್ರಾ (ಉ.ಪ್ರ): ಕೌನ್ ಬನೇಗಾ ಕರೋಡ್ಪತಿ ಸೀಸನ್ 13ರಲ್ಲಿ ಮಹಿಳೆಯೊಬ್ಬರು 1 ಕೋಟಿ ರೂಪಾಯಿ ತನ್ನದಾಗಿಸಿಕೊಂಡಿದ್ದಾರೆ. ಹಿಮಾನಿ ಬುಂದೇಲಾ ಎಂಬಾಕೆ 13ನೇ ಸೀಸನ್ನ ಮೊದಲ ಕೋಟ್ಯಧಿಪತಿಯಾಗಿದ್ದಾರೆ.
ಇಲ್ಲಿನ ಗುರು ಗೋವಿಂದ ನಗರದ ರಾಜಪುರ ಪ್ರದೇಶದ ಹಿಮಾನಿ, 1 ಕೋಟಿ ರೂ. ಗೆದ್ದಿರುವ ಸಂಭ್ರಮದಲ್ಲಿ ಇಡೀ ಗ್ರಾಮ ಹಬ್ಬದಂತೆ ಆಚರಿಸಿದೆ. ಹಿಮಾನಿ ಕುಟುಂಬಸ್ಥರು ಹಾಗೂ ಸ್ನೇಹಿತರು ಮನೆ ಬಳಿ ಜಮಾಯಿಸಿ ಆಕೆಗೆ ಹಾರ ಹಾಕಿ ಸಂಭ್ರಮಿಸಿದ್ದಾರೆ.
ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೇ ಕುಟುಂಬಸ್ಥರು, ಸ್ನೇಹಿತರು ಸಖತ್ ಸ್ಟೆಪ್ಸ್ ಹಾಕಿದ್ದಾರೆ. ನಿನ್ನೆ ರಾತ್ರಿ ಆಕೆಯ ಉಳಿದ ಎಪಿಸೋಡ್ಗಳು ಪ್ರಸಾರವಾಗಿದ್ದು, ಆಕೆ ಮನೆಯಲ್ಲೇ ಕುಳಿತು ತನ್ನ ಎಪಿಸೋಡ್ ನೋಡಿದ್ದಾಳೆ. 15 ಪ್ರಶ್ನೆಗೆ ಸರಿಯಾಗಿ ಉತ್ತರಿಸಿದ ಹಿಮಾನಿ 1 ಕೋಟಿ ರೂ. ಗೆದ್ದಕೊಂಡರು. ಆದರೆ 16ನೇ ಪ್ರಶ್ನೆಗೆ ಉತ್ತರಿಸದೇ ಆಟದಿಂದ ಹಿಂದೆ ಸರಿದರು.
16ನೇ ಪ್ರಶ್ನೆಯೂ 7 ಕೋಟಿ ರೂಪಾಯಿಗೆ ಕೇಳಲಾಗುತ್ತಿತ್ತು. ಒಂದು ವೇಳೆ ತಪ್ಪು ಉತ್ತರ ನೀಡಿದರೆ ಹಿಮಾನಿಗೆ ಕೇವಲ 3.20 ಲಕ್ಷ ರೂಪಾಯಿ ಮಾತ್ರ ಸಿಗುತ್ತಿತ್ತು. 16ನೇ ಪ್ರಶ್ನೆ ಡಾ.ಬಿಆರ್ ಅಂಬೇಡ್ಕರ್ ಲಂಡನ್ ವಿಶ್ವವಿದ್ಯಾಲಯದಲ್ಲಿ ಮಂಡಿಸಿದ್ದ ಸಂಶೋಧನಾ ಪ್ರಬಂಧದ ಹೆಸರೇನು ಎಂಬುದಾಗಿತ್ತು.
ಆದರೆ, ಹಿಮಾನಿ ಗೊಂದಲದಲ್ಲಿದ್ದ ಕಾರಣ ಆಕೆ ಆಟ ಮುಂದುವರಿಸಲಿಲ್ಲ. ಆಕೆ 50 ಲಕ್ಷದ ಪ್ರಶ್ನೆ ವೇಳೆಗೆ ಎಲ್ಲ ಲೈಫ್ಲೈನ್ಗಳನ್ನೂ ಕಳೆದುಕೊಂಡಿದ್ದರು.