ಶಿಮ್ಲಾ( ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿ ನಿರಂತರವಾಗಿ ಭೂ ಕುಸಿತಗಳು ವರದಿಯಾಗುತ್ತಲೇ ಇವೆ. ಉತ್ತರ ಭಾರತದ ರಾಜ್ಯಗಳಾದ ಹಿಮಾಚಲ ಪ್ರದೇಶ, ಉತ್ತರಾಖಂಡ,ಜಮ್ಮು ಕಾಶ್ಮೀರ ಹೀಗೆ ಹಲವು ರಾಜ್ಯಗಳಲ್ಲಿ ಭಾರಿ ಮಳೆ, ಹಾಗೂ ಪ್ರವಾಹಕ್ಕೆ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತಗಳು ವರದಿಯಾಗುತ್ತಲೇ ಇವೆ.
-
#WATCH | Himachal Pradesh: Manglad-Bagvat road was closed after a landslide in the Kinnu area of Rampur subdivision in Shimla district yesterday.
— ANI (@ANI) August 6, 2023 " class="align-text-top noRightClick twitterSection" data="
(Video confirmed by Police) pic.twitter.com/ul10GPJvcK
">#WATCH | Himachal Pradesh: Manglad-Bagvat road was closed after a landslide in the Kinnu area of Rampur subdivision in Shimla district yesterday.
— ANI (@ANI) August 6, 2023
(Video confirmed by Police) pic.twitter.com/ul10GPJvcK#WATCH | Himachal Pradesh: Manglad-Bagvat road was closed after a landslide in the Kinnu area of Rampur subdivision in Shimla district yesterday.
— ANI (@ANI) August 6, 2023
(Video confirmed by Police) pic.twitter.com/ul10GPJvcK
ಜಮ್ಮು ಕಾಶ್ಮೀರದಲ್ಲಿ ಆದ ದೊಡ್ಡ ಭೂ ಕುಸಿತದ ನಂತರ ಹಿಮಾಚಲ ಪ್ರದೇಶದ ರಾಂಪುರ ಉಪವಿಭಾಗದ ಕಿನ್ನು ಪ್ರದೇಶದಲ್ಲಿ ಭಾರಿ ಪ್ರಮಾಣದ ಭೂ ಕುಸಿತ ಉಂಟಾಗಿದೆ. ಈ ಪರಿಣಾಮ ಮಂಗ್ಲಾದ್- ಬಗ್ವತ್ ರಸ್ತೆಯನ್ನು ಭಾನುವಾರ ಮುಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರಿ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದ್ದು, ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ರಾಂಪುರ ಉಪವಿಭಾಗದ ಕಿನ್ನು ಪ್ರದೇಶದಲ್ಲಿ ಭೂಕುಸಿತದ ವಿಡಿಯೋ ಕ್ಲಿಪ್ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಭೂ ಕುಸಿತ ಸಂಭವಿಸಿದ ಪ್ರದೇಶದಲ್ಲಿ ಬಂಡೆಗಳು ಕಣಿವೆಗೆ ಬೀಳುತ್ತಿರುವುದನ್ನು ಕಾಣಬಹುದಾಗಿದೆ. ಸ್ಥಳೀಯರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ದೃಶ್ಯಗಳನ್ನು ಲೈವ್ ಆಗಿ ರೆಕಾರ್ಡ್ ಮಾಡಿದ್ದಾರೆ. ಶಿಮ್ಲಾ ಜಿಲ್ಲೆಯ ರಾಮ್‌ಪುರ ಉಪವಿಭಾಗದ ಕಿನ್ನು ಪ್ರದೇಶದಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ದಿಢೀರ್ ಭೂಕುಸಿತದ ಹಿನ್ನೆಲೆ ರಸ್ತೆ ಸಂಪರ್ಕ ಬಂದ್ ಆಗಿದ್ದು, ಅಲ್ಲಿಗೆ ರಕ್ಷಣಾ ಪಡೆಗಳು ಧಾವಿಸಿವೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ರಾಂಬನ್ನಲ್ಲಿ ಗುಡ್ಡ ಕುಸಿತ: ಭಾನುವಾರ ಜಮ್ಮು - ಕಾಶ್ಮೀರದ ರಾಂಬನ್ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡಕುಸಿತ ಉಂಟಾಗಿತ್ತು. ಗುಡ್ಡ ಕುಸಿತದ ಪರಿಣಾಮ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಸ್ಥಗಿತಗೊಂಡಿದೆ. ಇದಕ್ಕಿದ್ದಂತೆ ದೊಡ್ಡ ಗುಡ್ಡವೇ ಪಟ ಪಟಾ ಅಂತ ಕುಸಿಯುತ್ತಿರುವ ದೃಶ್ಯಗಳನ್ನು ಜನರು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
ಭಾನುವಾರ ಬೆಳಗಿನ ಜಾವ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗುಡ್ಡ ಕುಸಿದು ಬಿದ್ದಿತ್ತು. ಇದರಿಂದ ಮಣ್ಣು, ಕಲ್ಲು ರಸ್ತೆಯ ಮೇಲೆ ಹರಡಿದೆ. ಇದರಿಂದಾಗಿ ರಸ್ತೆ ಸಂಪೂರ್ಣವಾಗಿ ಮುಚ್ಚಿ ಹೋಗಿದ್ದು, ಸಂಚಾರಕ್ಕೆ ತೊಂದರೆ ಆಗಿದೆ.
ಈ ಹಿಂದೆ ಅಂದರೆ ಜುಲೈ 19 ರಂದು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ಭಾರೀ ಮಳೆಯಿಂದಾಗಿ ಗುಡ್ಡದ ಕಲ್ಲುಗಳು ಮತ್ತು ಮಣ್ಣು ಸರಿದು ರಸ್ತೆ ತುಂಬಾ ತುಂಬಿಕೊಂಡಿತ್ತು. ತೆರವು ಕಾರ್ಯಾಚರಣೆಯ ಬಳಿಕ ರಸ್ತೆ ಸಂಚಾರ ಆರಂಭವಾಗಿತ್ತು. ಇದೀಗ ಮತ್ತೆ ಗುಡ್ಡ ಕುಸಿದಿದೆ. ಯಾವುದೇ ಹಾನಿ ಸಂಭವಿಸಿಲ್ಲ. ಜನರು ಈ ಮಾರ್ಗವಾಗಿ ಸಂಚಾರವನ್ನು ತಪ್ಪಿಸಬೇಕು. ತೆರವು ಕಾರ್ಯಾಚರಣೆ ಮುಗಿದ ಬಳಿಕ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು.