ತೆಲಂಗಾಣ: ಮಾರ್ಚ್‌ಗೂ ಮುನ್ನವೇ ಭರ್ಜರಿ ಬಿಸಿಲು ಆರಂಭವಾಗಿದೆ. ಸೂರ್ಯ ಶಿಕಾರಿಯಿಂದ ತಪ್ಪಿಸಿಕೊಂಡು ತಣ್ಣಗೆ ಏನಾದರೂ ಕುಡಿಯಬೇಕು ಅನ್ನಿಸುತ್ತದೆ. ಕೆಲವರು ಈ ಸಮಯದಲ್ಲಿ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಮದ್ಯದ ಮೊರೆ ಹೋಗುತ್ತಾರೆ. ಅದ್ರಲ್ಲೂ ಬಿಯರ್ ಕುಡಿದರೆ ದೇಹ ತಂಪಾಗುತ್ತದೆ ಎಂಬ ಸುಳ್ಳು ನಂಬಿಕೆಯಿಂದ ಬೇಸಿಗೆಯಲ್ಲಿ ಅದನ್ನು ನೆಚ್ಚಿಕೊಳ್ಳುತ್ತಾರೆ. ಇಲ್ಲೊಬ್ಬ ವ್ಯಕ್ತಿ ಕೂಡಾ ಅದೇ ರೀತಿ ಯೋಚಿಸಿದ್ದಾನೆ.
ಜಗತ್ಯಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ವ್ಯಕ್ತಿಯೊಬ್ಬ ನೀಡಿದ ದೂರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಡಿಸಿ ಕಚೇರಿಯಲ್ಲಿ ‘ಪ್ರಜಾ ವಾಣಿ’ ಎಂಬ ಸಾರ್ವಜನಿಕರ ದೂರು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ, ವ್ಯಕ್ತಿಯೊಬ್ಬ ಸ್ಥಳೀಯ ಪಟ್ಟಣದ ವೈನ್ ಶಾಪ್ಗಳಲ್ಲಿ ಕಿಂಗ್ ಫಿಶರ್ ಬಿಯರ್ ಮಾರಾಟವಾಗುತ್ತಿಲ್ಲ ಎಂದು ದೂರು ನೀಡಿದ್ದಾನೆ.
ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್: ಪ್ರಯಾಗ್ರಾಜ್ನಲ್ಲಿ ಶೂಟೌಟ್, ಮತ್ತೊಬ್ಬ ಆರೋಪಿ ಎನ್ಕೌಂಟರ್
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕೌಟುಂಬಿಕ ಸೇರಿದಂತೆ ಇನ್ನಿತರ ಮೂಲಸೌಕರ್ಯ ಕೊರತೆ ದೂರುಗಳನ್ನು ಜಿಲ್ಲಾಧಿಕಾರಿ ಕೇಳುತ್ತಾರೆ. ಆದರೆ, ನಿನ್ನೆ ಡಿಸಿಗೆ ಬಂದ ದೂರು ವಿಚಿತ್ರವಾಗಿತ್ತು. ಜಗತ್ಯಾಲದ ಬೀರಂ ರಾಜೇಶ್ ಎಂಬ ಯುವಕ, ''ತಮ್ಮ ಆಯ್ಕೆಯ ಕಿಂಗ್ ಫಿಶರ್ ಬಿಯರ್ ಸಿಗುತ್ತಿಲ್ಲ'' ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎಸ್.ಲತಾ ಅವರಿಗೆ ದೂರು ನೀಡಿದ್ದಾನೆ.
ಇದನ್ನೂ ಓದಿ: ಟೈರ್ ಕಣಗಳಿಂದಲೂ ಮಾಲಿನ್ಯ: ಇದೆಷ್ಟು ಅಪಾಯಕಾರಿ ಗೊತ್ತೇ?
''ನಮ್ಮ ಸ್ಥಳೀಯ ಪ್ರದೇಶದಲ್ಲಿ ಮದ್ಯದ ಉದ್ಯಮಿಗಳು ಕಿಂಗ್ ಫಿಶರ್ ಬಿಯರ್ ಮಾರಾಟ ಮಾಡುತ್ತಿಲ್ಲ'' ಎಂದು ಯುವಕ ಕಲೆಕ್ಟರ್ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾನೆ. ನಮ್ಮ ಪಟ್ಟಣದ ಪ್ರದೇಶಗಳಾದ ಕೋರುಟಾಳ, ಧರ್ಮಪುರಿಯಲ್ಲಿ ಸಿಗುತ್ತದೆ. ಆದ್ರೆ, ಜಗತ್ಯಾಲದಲ್ಲಿ ಮಾತ್ರ ಸಿಗುತ್ತಿಲ್ಲ. ಇಲ್ಲಿನ ಬಹುತೇಕ ಗ್ರಾಮಗಳ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತದೆ. ಇದೇ ವೇಳೆ, ಅಗತ್ಯವಿರುವ ಬಿಯರ್ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾನೆ. ''ದಿನನಿತ್ಯ ಕುಡಿಯುವವರಿಗೆ ಯೂರಿಕ್ ಆಸಿಡ್ ಸಮಸ್ಯೆ ಕಾಡುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕು'' ಎನ್ನುವುದು ಆತನ ಅಳಲು.
ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್: ಪ್ರಯಾಗ್ರಾಜ್ನಲ್ಲಿ ಶೂಟೌಟ್, ಮತ್ತೊಬ್ಬ ಆರೋಪಿ ಎನ್ಕೌಂಟರ್