ಹೈದರಾಬಾದ್(ತೆಲಂಗಾಣ): ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ವಿವಿಐಪಿ ವ್ಯಕ್ತಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ತೆರಳುವಾಗ ಝೀರೋ ಟ್ರಾಫಿಕ್ ವ್ಯವಸ್ಥೆ ನಿರ್ಮಾಣ ಮಾಡುವುದು ಸಾಮಾನ್ಯ. ಆದರೆ, ಇದು ಕೆಲವೊಮ್ಮೆ ಜನಸಾಮಾನ್ಯರ ಮೇಲೆ ಇನ್ನಿಲ್ಲದ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಸದ್ಯ ಅಂತಹ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಸಮಾವೇಶಕ್ಕೆ ತೆರಳಲು ಹೋಗುತ್ತಿದ್ದ ವೇಳೆ ಜನಸಾಮಾನ್ಯರು, ವಾಹನ ಸವಾರರು ಗಂಟೆಗೂ ಹೆಚ್ಚು ಕಾಲ ತೊಂದರೆ ಅನುಭವಿಸಿದ್ದಾರೆ.
ಹೈದರಾಬಾದ್-ವಿಜಯವಾಡ ರಾಷ್ಟ್ರೀಯ ಹೆದ್ದಾರಿ ಮೂಲಕ ಕೆಸಿಆರ್ ಮುನುಗೋಡುದಲ್ಲಿ ಆಯೋಜನೆಗೊಂಡಿದ್ದ ಪ್ರಜಾದೀಪ ಸಮಾವೇಶಕ್ಕೆ ತೆರಳುತ್ತಿದ್ದರು. ಈ ವೇಳೆ ಪೊಲೀಸರು ಟ್ರಾಫಿಕ್ ನಿಯಂತ್ರಣ ಮಾಡಿದ್ದಾರೆ. ಸಿಎಂ ಬೆಂಗಾವಲು ವಾಹನ ಪಡೆ ತೆರಳುತ್ತಿದ್ದ ರಸ್ತೆಯಲ್ಲಿ ಹೋಗದಂತೆ ನಿರ್ಬಂಧ ಹೇರಿದ್ದಾರೆ. ಹೀಗಾಗಿ, ನಗರದ ಹಬ್ಸಿಗುಡನಿಂದ ಯಾದಾದ್ರಿ ಜಿಲ್ಲೆಯ ಚೌಟುಪ್ಪಲ್ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಇದನ್ನೂ ಓದಿ: ಟಿಆರ್ಎಸ್ ರಾಷ್ಟ್ರೀಯ ಪಕ್ಷವಾದರೆ ತಪ್ಪೇನು? ಸಿಎಂ ಕೆಸಿಆರ್
ಮುಖ್ಯವಾಗಿ ಎಲ್ ಬಿ ನಗರದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವ ಕಾರಣ ಸುಮಾರು 40 ನಿಮಿಷಗಳ ಕಾಲ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಮಧ್ಯಾಹ್ನದ ಮೇಲೆ ಕಚೇರಿಗೆ ಹೋಗುವವವರು, ಕಚೇರಿಯಿಂದ ಮನೆಗೆ ಬರುವವರು ರಸ್ತೆ ದಟ್ಟಣಿಗೆ ಸಿಲುಕಿ ತೊಂದರೆ ಅನುಭವಿಸಿದ್ದಾರೆ.