ತಿರುಮಲ : ಭಾರೀ ಮಳೆಯಿಂದಾಗಿ ಎರಡು ದಿನಗಳ ಕಾಲ ರಾತ್ರಿ ವೇಳೆ ಕನುಮ ರಸ್ತೆಗಳನ್ನು ಮುಚ್ಚಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ತಿಳಿಸಿದೆ. ನಾಳೆ ರಾತ್ರಿ 8 ರಿಂದ ನಾಡಿದ್ದು 4 ಗಂಟೆಯವರೆಗೆ ವಾಹನಗಳನ್ನು ಅನುಮತಿಸಲಾಗುವುದಿಲ್ಲ ಎಂದು ಟಿಟಿಡಿ(Tirumala Tirupati Temple Board) ತಿಳಿಸಿದೆ.
ತಿರುಮಲ ಬೆಟ್ಟದಲ್ಲಿ ಗಾಳಿ ಸಹಿತ ಭಾರಿ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಅಲಿಪಿರಿ ವಾಕ್‌ವೇ ಜಲಾವೃತಗೊಂಡಿದೆ. ಬೆಟ್ಟಕ್ಕೆ ನಡೆದುಕೊಂಡು ಹೋಗುವ ಭಕ್ತರು ಎಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋಗುತ್ತಾರೋ ಎಂಬ ಭಯ ನಿರ್ಮಾಣ ಆಗಿದೆ. ಗಾಬರಿಗೊಂಡ ಭಕ್ತರು ಮೆಟ್ಟಿಲುಗಳ ಪಕ್ಕದ ಗೋಡೆ ಹತ್ತಿ ರಕ್ಷಣೆ ಪಡೆಯುತ್ತಿದ್ದಾರೆ.
ಇನ್ನು ಚಿತ್ತೂರು ಜಿಲ್ಲೆ ಎರ್ಪೇಡು ವಲಯದ ಶ್ರೀಕಾಳಹಸ್ತಿ-ಪಾಪನಾಯುಡುಪೇಟೆಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇನ್ನೊಂದೆಡೆ ಸ್ವರ್ಣಮುಖಿ ನದಿಯು(Swarnamukhi River) ಗೋವಿಂದವರಂನ ಕಾಲುದಾರಿಯನ್ನು ಆಕ್ರಮಿಸಿದೆ.
ಈ ವೇಳೆ ಚೆಲ್ಲೂರು ಗ್ರಾಮದ ಶಂಕರಯ್ಯ, ಅವರ ಪತ್ನಿ ಕೋಟೇಶ್ವರಮ್ಮ ಹಾಗೂ ಮಗ ಕಾಸ್‌ವೇ ದಾಟುತ್ತಿದ್ದಾಗ ಪ್ರವಾಹದ ನೀರಿಗೆ ಸಿಲುಕಿದ್ದರು. ಸ್ಥಳೀಯರು ಓಡಿ ಬಂದು ರಕ್ಷಣೆ ಮಾಡಿದ್ದಾರೆ.
ಹಾಗೆ ಚಿತ್ತೂರು ಜಿಲ್ಲೆಯ ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಭೈರವಕೋಣ ಜಲಪಾತವು ಭಾರೀ ಮಳೆಯ ಪರಿಣಾಮ ಆಹ್ಲಾದಕರ ನೋಟವನ್ನು ತನ್ನದಾಗಿಸಿಕೊಂಡಿದೆ.
ಈ ದೃಶ್ಯ ನೋಡುಗರನ್ನು ತುಂಬಾ ಆಕರ್ಷಿಸುತ್ತಿದೆ. ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ಬರುವ ಭಕ್ತರು ಭೈರವಕೋಣಕ್ಕೆ ಹೋಗಿ ಜಲಪಾತವನ್ನು ವೀಕ್ಷಿಸಿ ಆನಂದಿಸುತ್ತಿದ್ದಾರೆ.