ETV Bharat / bharat

ಭೂ ಕುಸಿತದಿಂದ ಮಣ್ಣಿನಡಿ ಸಿಲುಕಿದ 40ಕ್ಕೂ ಅಧಿಕ ಜನರು: 10 ಸಾವು, 14 ಮಂದಿಯ ರಕ್ಷಣೆ

ಕಳೆದ ಕೆಲ ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಭೂಕುಸಿತವಾಗಿದ್ದು, ಇದರಿಂದ 40ಕ್ಕೂ ಅಧಿಕ ಜನರು ಮಣ್ಣಿನಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ 14 ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಲಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.

heavy landslide
heavy landslide
author img

By

Published : Aug 11, 2021, 2:58 PM IST

Updated : Aug 11, 2021, 10:53 PM IST

ಶಿಮ್ಲಾ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಕಿನ್ನೌರ್​​ನಲ್ಲಿ ದೊಡ್ಡ ಪ್ರಮಾಣದ ಭೂ ಕುಸಿತ ಉಂಟಾಗಿದ್ದು, ಸರ್ಕಾರಿ ಬಸ್​ ಸೇರಿದಂತೆ ಅನೇಕ ವಾಹನಗಳ ಮೇಲೆ ಮಣ್ಣು ಹಾಗೂ ಕಲ್ಲಿನ ಅವಶೇಷಗಳು ಬಿದ್ದಿರುವ ಪರಿಣಾಮ 40ಕ್ಕೂ ಹೆಚ್ಚು ಜನರು ಅದರಡಿ ಸಿಲುಕಿಕೊಂಡಿರುವ ಘಟನೆ ನಡೆದಿದೆ. ಸ್ಥಳದಲ್ಲಿ ಇದೀಗ ಭರದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ ಸಾವನ್ನಪ್ಪಿರುವ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

  • #WATCH | ITBP personnel rescue a man trapped in the debris of a landslide on Reckong Peo-Shimla Highway in Nugulsari area of Kinnaur, Himachal Pradesh

    As per the state govt's latest information, nine people have been rescued & one person has died. Search operation is underway pic.twitter.com/NZ46tpg1Se

    — ANI (@ANI) August 11, 2021 " class="align-text-top noRightClick twitterSection" data=" ">

ಭಕ್ತಾಧಿಗಳನ್ನ ಹೊತ್ತು ಸಾಗುತ್ತಿದ್ದ ಸರ್ಕಾರಿ ಬಸ್​ ಹಾಗೂ ಇತರ ವಾಹನಗಳ ಮೇಲೆ ದಿಢೀರ್​​​ ಭೂಕುಸಿತವಾಗಿರುವ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಕಿನ್ನೌರಿನ ನಾಲ್ಕು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಇದರಿಂದ ಅನೇಕ ವಾಹನಗಳು ತೊಂದರೆಗೊಳಗಾಗಿವೆ. ಭೂಕುಸಿತದಿಂದ 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆ ಬಸ್​ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದೆ. ಬಸ್ ಕಿನ್ನೌರಿನ ರೆಕಾಂಗ್ ಪಿಯೊದಿಂದ ಶಿಮ್ಲಾಕ್ಕೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ. ಇದೀಗ ರಸ್ತೆ ಸಂಪೂರ್ಣವಾಗಿ ಬಂದ್​ ಆಗಿದೆ.

  • A total of 10 bodies have been recovered from the landslide site in Nugulsari area of Himachal Pradesh's Kinnaur. 14 people have been rescued so far: ITBP pic.twitter.com/EatSLwVVr2

ಇಲ್ಲಿಯವರೆಗೆ ಡ್ರೈವರ್ ಸೇರಿದಂತೆ ಇಬ್ಬ ರಕ್ಷಣೆ ಮಾಡಲಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. NDRF ಸಿಬ್ಬಂದಿ ಸ್ಥಳಕ್ಕೆ ತೆರಳಿದೆ. ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಈಗಾಗಲೇ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜಯರಾಮ್​ ಠಾಕೂರ್​ ಜೊತೆ ಮಾತನಾಡಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(NDRF) ಹಾಗೂ ಸ್ಥಳೀಯ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.

  • A landslide reported on Reckong Peo- Shimla Highway in #Kinnaur District in Himachal Pradesh today at around 12.45 Hrs. One truck, a HRTC Bus and few vehicles reported came under the rubble. Many people reported trapped. ITBP teams rushed for rescue. More details awaited. pic.twitter.com/ThLYsL2cZK

    — ITBP (@ITBP_official) August 11, 2021 " class="align-text-top noRightClick twitterSection" data=" ">

ಮಾಹಿತಿ ಪಡೆದುಕೊಂಡ ನಮೋ

ಭೂ ಕುಸಿತಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ಕೇಂದ್ರದಿಂದ ಅಗತ್ಯವಾದ ಎಲ್ಲ ರೀತಿಯ ನೆರವು ನೀಡುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆಂದು ವರದಿಯಾಗಿದೆ. ಕೇಂದ್ರ ಗೃಹ ಸಚಿವ ಹಾಗೂ ರಕ್ಷಣಾ ಸಚಿವರು ಕೂಡ ಹಿಮಾಚಲ ಪ್ರದೇಶ ಸಿಎಂ ಜೊತೆ ಮಾತನಾಡಿದ್ದಾಗಿ ತಿಳಿದು ಬಂದಿದೆ.

ಹಿಮಾಚಲ ಪ್ರದೇಶ ಸಿಎಂ ಮಾತು

ಘಟನೆ ಬಗ್ಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿ ಜೈರಾಮ್ ಠಾಕೂರ್​, ಇಲ್ಲಿಯವರೆಗೆ 14 ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಲಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳದಲ್ಲಿ ಎನ್​ಡಿಆರ್​ಎಫ್​, ಐಟಿಆರ್​ಎಫ್​, ಸಿಐಎಸ್​ಎಫ್​,ಪೊಲೀಸ್​ ತಂಡ ರಕ್ಷಣಾ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದು, ಅವಶೇಷಗಳಡಿ 50-60 ಜನರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದಿದ್ದಾರೆ.

ಇದನ್ನೂ ಓದಿರಿ: ಜೀವ ಭಯದಲ್ಲೇ ಹೆಗಲ ಮೇಲೆ ಶವ ಹೊತ್ತು ನದಿ ದಾಟಿದ ಗ್ರಾಮಸ್ಥರು: ವಿಡಿಯೋ

ಕಳೆದ ಕೆಲ ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಭೂಕುಸಿತ ಪ್ರಕರಣ ನಡೆಯುತ್ತಿದ್ದು, ವಾರದ ಹಿಂದೆ ನಡೆದಿದ್ದ ಭೂಕುಸಿತದ ವೇಳೆ ಅನೇಕ ಜನರು ಸಾವನ್ನಪ್ಪಿದ್ದರು.

Last Updated : Aug 11, 2021, 10:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.