ಚೆನ್ನೈ(ತಮಿಳುನಾಡು): ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿರುವ ಸ್ಮಿತಾ ಚತುರ್ವೇದಿ ಹೆಚ್ಚೂ ಕಡಿಮೆ ಮೂರು ದಶಕಗಳ ಹಿಂದೆ ಚೆನ್ನೈ ರಕ್ಷಣಾ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಮುಗಿಸಿದ್ದರು. ಇದೀಗ ಇವರ ಪುತ್ರ ಕೂಡಾ ಇದೇ ಅಕಾಡೆಮಿಯಿಂದ ಪದವಿ ಪಡೆದು ಸೇನೆಗೆ ನೇಮಕವಾಗಿದ್ದಾರೆ. ಈ ಮೂಲಕ ತಾಯಿಯ ಹಾದಿ ಅನುಸರಿಸಿರುವ ಮಗನಿಗೆ ವಿಶೇಷ ಕಾರಣಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
-
A rare euphoric moment for a Lady Officer:
— Defence PRO Chennai (@Def_PRO_Chennai) July 30, 2022 " class="align-text-top noRightClick twitterSection" data="
Major Smita Chaturvedi (Retd) Commissioned from Officers Training Academy, Chennai before 27 years in 1995, saw her son getting Commissioned in the same manner in the same Academy today. @artrac_ia @SpokespersonMoD @DefenceMinIndia pic.twitter.com/hGRaAbQS0k
">A rare euphoric moment for a Lady Officer:
— Defence PRO Chennai (@Def_PRO_Chennai) July 30, 2022
Major Smita Chaturvedi (Retd) Commissioned from Officers Training Academy, Chennai before 27 years in 1995, saw her son getting Commissioned in the same manner in the same Academy today. @artrac_ia @SpokespersonMoD @DefenceMinIndia pic.twitter.com/hGRaAbQS0kA rare euphoric moment for a Lady Officer:
— Defence PRO Chennai (@Def_PRO_Chennai) July 30, 2022
Major Smita Chaturvedi (Retd) Commissioned from Officers Training Academy, Chennai before 27 years in 1995, saw her son getting Commissioned in the same manner in the same Academy today. @artrac_ia @SpokespersonMoD @DefenceMinIndia pic.twitter.com/hGRaAbQS0k
ಚೆನ್ನೈನಲ್ಲಿರುವ ಸೇನಾಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ಮಾಲ್ಡೀವ್ಸ್ ರಕ್ಷಣಾ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಅಬ್ದುಲ್ಲಾ ಶಮಾಲ್ ಕೆಡೆಟ್‌ಗಳಿಗೆ ಪದವಿ ಪ್ರದಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಒಟ್ಟು 125 ಪುರುಷ ಮತ್ತು 41 ಮಹಿಳಾ ಕೆಡೆಟ್‌ಗಳನ್ನು ಅಕಾಡೆಮಿಯಿಂದ ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲಾಯಿತು.
ಇದನ್ನೂ ಓದಿ: ಕೊಲೆಯಾಗಿದ್ದ ಮಹಿಳೆ ಜೀವಂತ ಪತ್ತೆ.. 10 ವರ್ಷ ಶಿಕ್ಷೆಗೊಳಗಾಗಿದ್ದ ಪತಿ ಈಗ ನಿಟ್ಟುಸಿರು!
1995ರಲ್ಲಿ ಸ್ಮಿತಾ ಅವರು ಇದೇ ಅಕಾಡೆಮಿಯಲ್ಲಿ ಪದವಿ, ತರಬೇತಿ ಪಡೆದು ಭಾರತೀಯ ಸೇನೆ ಸೇರಿದ್ದರು. ಇದೀಗ ಪುತ್ರನಿಗೂ ಇಲ್ಲಿಂದಲೇ ಸೇನೆ ಸೇರುವ ಸೌಭಾಗ್ಯ ದೊರೆತಿದೆ. ಸಾಧಕರಾದ ಅಮ್ಮ-ಮಗನ ಫೋಟೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದು, ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.