ವಿಜಯವಾಡ (ಆಂಧ್ರ ಪ್ರದೇಶ): ಕೋವಿಡ್-19ನಿಂದಾಗಿ ಜನರು ತಮ್ಮ ಪ್ರೀತಿಪಾತ್ರರ ಸಾವಿಗೆ ದುಃಖಿಸುತ್ತಿರುವ ದೃಶ್ಯಗಳು ವಿಜಯವಾಡದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಕಂಡು ಬರುತ್ತಿದೆ.
ಕೊರೊನಾ ರೋಗಲಕ್ಷಣಗಳಿದ್ದ ವಿಜಯವಾಡದ ಪಯಕಪುರಂ ನಿವಾಸಿ ಜಗದೀಶ್ ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಇದ್ದ ಕಾರಣ ಮನೆಯಲ್ಲಿಯೇ ಐಸೊಲೇಷನ್ನಲ್ಲಿರಲು ಸೂಚಿಸಲಾಗಿತ್ತು. ಆದರೆ, ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವರ ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ಕರೆತಂದರು. ಆದರೆ, ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು.
ಮತ್ತೊಂದು ಘಟನೆಯಲ್ಲಿ, ಮಹಿಳೆಯೊಬ್ಬಳು ತನ್ನ ಪತಿ ಕೋವಿಡ್‌ನಿಂದ ಮರಣಹೊಂದಿದ ನಂತರ ತನ್ನ ಮಕ್ಕಳಿಗೆ ಪಿಪಿಇ ಕಿಟ್ ತೊಡಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ದೃಶ್ಯ ಕಂಡು ಬಂತು.