ETV Bharat / bharat

'ಕಸದ ಜೊತೆಗೆ ನವಜಾತ ಶಿಶುವಿನ ಶವವನ್ನೂ ಸುಟ್ಟುಹಾಕಿದ ಆಸ್ಪತ್ರೆ ಸಿಬ್ಬಂದಿ': ಸಂಬಂಧಿಕರ ಆಕ್ರೋಶ - ಜಾರ್ಖಂಡ್​​ ನ್ಯೂಸ್​

ಜಾರ್ಖಂಡ್​​ನ ಗರ್ಹ್ವಾ ಜಿಲ್ಲೆಯ ಆಸ್ಪತ್ರೆಯೊಂದರ ಸಿಬ್ಬಂದಿ ನವಜಾತ ಶಿಶುವಿನ ಶವವನ್ನು ಕಸ ಸುಡುವ ಗುಂಡಿಗೆ ಹಾಕಿದ್ದಾರೆ. ಶವ ಸುಟ್ಟು ಕರಕಲಾಗಿದೆ. ಸಿಬ್ಬಂದಿಯ ನಡೆಗೆ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Health workers burn newborn with garbage in Garhwa
'ಕಸದ ಜೊತೆಗೆ ನವಜಾತ ಶಿಶುವಿನ ಶವವನ್ನು ಸುಟ್ಟುಹಾಕಿದ ಆಸ್ಪತ್ರೆಯ ಸಿಬ್ಬಂದಿ
author img

By

Published : Jun 11, 2023, 11:24 AM IST

ಗರ್ಹ್ವಾ (ಜಾರ್ಖಂಡ್‌): ಇಲ್ಲಿನ ಗರ್ಹ್ವಾ ಜಿಲ್ಲೆಯ ಮಝಿಯಾನ್ ರೆಫರಲ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಆಸ್ಪತ್ರೆ ಸಿಬ್ಬಂದಿ ಮರಣ ಹೊಂದಿದ ಶಿಶುವಿನ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸದೆ ಸುಟ್ಟು ಹಾಕಿದ್ದಾರೆ. ಆಸ್ಪತ್ರೆಯಲ್ಲಿ ನಿಯೋಜನೆಗೊಂಡಿರುವ ಎಎನ್‌ಎಂ (Assistant Nursing Midwifery) ಹಾಗೂ ಶುಶ್ರೂಷಕಿಯ ವಿರುದ್ಧ ಈ ಆರೋಪ ಕೇಳಿ ಬಂದಿದೆ.

ಮೃತ ಮಗುವಿನ ಸಂಬಂಧಿಕರ ಪ್ರಕಾರ, ಎಎನ್‌ಎಂ ಮತ್ತು ಸೂಲಗಿತ್ತಿ ಶಿಶುವಿನ ಮೃತದೇಹವನ್ನು ಕಸ ಸುಡುವ ಗುಂಡಿಯಲ್ಲಿ (ಗಾಲ್ಫ್) ಎಸೆದಿದ್ದಾರೆ. ಇದರಿಂದ ನವಜಾತ ಶಿಶುವಿನ ಶವ ಸುಟ್ಟು ಕರಕಲಾಗಿದೆ. ಶನಿವಾರ ಸಂಜೆ 5 ಗಂಟೆಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಘಟನೆಯ ನಂತರ ಬಾಣಂತಿಯ ಸಂಬಂಧಿಕರು ಗಲಾಟೆ ಮಾಡಿದ್ದಾರೆ. ಮಗುವಿನ ತಂದೆ ಹರಿ ಕಿಶೋರ್, ಅವರ ತಾಯಿ ರಾಜಮತಿ ದೇವಿ ಮತ್ತು ಇತರ ಕುಟುಂಬ ಸದಸ್ಯರು ತಮ್ಮಗೆ ಅರಿವಿಲ್ಲದೆ ಎಎನ್‌ಎಂ ಮೃತ ಮಗುವಿನ ದೇಹವನ್ನು ಗಾಲ್ಫ್‌ನಲ್ಲಿ ಹಾಕಿ ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಖಾಲಿ ಜಮೀನಿನಲ್ಲಿ ನವಜಾತ ಶಿಶು ಪತ್ತೆ:ಪೊಲೀಸರಿಂದ ಶಿಶು ರಕ್ಷಣೆ

ಪ್ರಕರಣದ ವಿವರ: ಮಝಿಯಾನ್​ನ ಲೋಹರ್‌ಪುರ್ವಾ ಗ್ರಾಮದ ನಿವಾಸಿ ರಾಜಮತಿ ದೇವಿ ಅವರ ಪುತ್ರಿ ಮಧುದೇವಿ ಎಂಬವರು ಹೆರಿಗೆ ನೋವಿನಿಂದ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಇಲ್ಲಿನ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಸುಮಾರು ಒಂದೂವರೆ ಗಂಟೆಗಳ ನಂತರ ಮಧುದೇವಿ ಮೃತ ಮಗುವಿಗೆ ಜನ್ಮ ನೀಡಿದ್ದರು. ಸ್ಥಳದಲ್ಲಿದ್ದ ಎಎನ್‌ಎಂ ಹಾಗೂ ಸೂಲಗಿತ್ತಿ ಮೃತ ಮಗು ಹೆರಿಗೆಯಾಗಿದೆ ಎಂದು ಸಂಬಂಧಿಕರಿಗೆ ತಿಳಿಸಿದ್ದಾರೆ. ನವಜಾತ ಶಿಶುವಿನ ಅಂತಿಮ ಸಂಸ್ಕಾರಕ್ಕೆ ಸಂಬಂಧಿಕರು ಹೂವಿನ ಹಾರ ತರಲು ಮಾರುಕಟ್ಟೆಗೆ ತೆರಳಿದ್ದು, ಅಷ್ಟರಲ್ಲಿ ಎಎನ್‌ಎಂ, ಶುಶ್ರೂಷಕಿ ಹಾಗೂ ಇತರೆ ಆರೋಗ್ಯ ಕಾರ್ಯಕರ್ತರು ಕಸದ ಸಮೇತ ನವಜಾತ ಶಿಶುವನ್ನು ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ.

ಮಗು ಜನಿಸಿದ ನಂತರ ಎಎನ್‌ಎಂ ನಿರ್ಮಲಾ ಕುಮಾರಿ ಹಾಗೂ ಮಂಜುಕುಮಾರಿ ಅವರನ್ನು ಬಿಟ್ಟರೆ ಸೂಲಗಿತ್ತಿ ದೌಲತ್‌ದೇವಿ ಸ್ಥಳದಲ್ಲಿದ್ದರು. ಸಂಬಂಧಿಕರಿಗೆ ಶವ ನೀಡದೆ ಕಸ ಸುಡಲು ಸಿದ್ಧಪಡಿಸಿದ್ದ ಗುಂಡಿಗೆ ಹಾಕಿದ್ದರು. ಆಸ್ಪತ್ರೆ ಆವರಣ ಆ ಸಮಯದಲ್ಲಿ ಗಾಲ್ಫ್‌ನಲ್ಲಿ ಕಸವನ್ನು ಸುಡುತ್ತಿದ್ದರು. ಮೃತ ದೇಹ ಸಂಪೂರ್ಣ ಸುಟ್ಟು ಕರಕಲಾಗಿತ್ತು ಎಂದು ಸಂಬಂಧಿಕರು ದೂರಿದ್ದಾರೆ.

ಶವ ಎಸೆದಿರುವುದು ತನಗೆ ತಿಳಿದಿರಲಿಲ್ಲ. ಕರ್ತವ್ಯದಲ್ಲಿದ್ದ ಸೂಲಗಿತ್ತಿ ಹೀಗೆ ಮಾಡಿದ್ದಾಳೆ. ಮೃತದೇಹವನ್ನು ಗಾಲ್ಫ್‌ನಲ್ಲಿ ಹಾಕಿರುವುದು ನಂತರ ತಿಳಿಯಿತು ಎಂದು ಕರ್ತವ್ಯದಲ್ಲಿರುವ ಎಎನ್‌ಎಂ ನಿರ್ಮಲಾ ಕುಮಾರಿ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಮಝಿಯಾನ್ ರೆಫರಲ್ ಆಸ್ಪತ್ರೆಯ ಪ್ರಭಾರಿ ವೈದ್ಯಾಧಿಕಾರಿ ಡಾ.ಗೋವಿಂದ್ ಸೇಠ್ ಮಾತನಾಡಿ "ನವಜಾತ ಶಿಶುವಿನ ಮೃತ ದೇಹವನ್ನು ಸಂಬಂಧಿಕರಿಗೆ ಒಪ್ಪಿಸಬೇಕಿತ್ತು. ಈ ಘಟನೆ ನಾಚಿಕೆಗೇಡಿನ ಸಂಗತಿಯಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಮರ್ಯಾದೆಗಂಜಿ ಹುಟ್ಟಿದ ಕೂಡಲೇ ನವಜಾತ ಶಿಶು ಹತ್ಯೆಗೈದ ವಲಸೆ ಕಾರ್ಮಿಕ ಜೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.