ತಿರುವನಂತಪುರಂ(ಕೇರಳ): ವಿಧಾನಸಭಾ ಚುನಾವಣೆಗೂ (ಏಪ್ರಿಲ್ 6) ಮುನ್ನ ನಡೆದಿರುವ ಹವಾಲಾ ಹಣದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಜುಲೈ 6 ರಂದು ತ್ರಿಶೂರ್ ಪೊಲೀಸ್ ಕ್ಲಬ್ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಸುರೇಂದ್ರನ್ ಕಾರು ಚಾಲಕ ಹಾಗೂ ಸಹಾಯಕರನ್ನು ಪೊಲೀಸರು ಈಗಾಗಲೇ ವಿಚಾರಣೆಗೆ ಒಳಪಡಿಸಿದ್ದಾರೆ.
ಮತದಾನದ ಮರುದಿನ ತ್ರಿಶೂರ್ ರಸ್ತೆಯಲ್ಲಿ ಗ್ಯಾಂಗ್ವೊಂದು 25 ಲಕ್ಷ ರೂಪಾಯಿಯನ್ನು ದರೋಡೆ ಮಾಡಿದ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಈ ಹಣ ಸುಮಾರು ಮೂರೂವರೆ ಕೋಟಿ ರೂಪಾಯಿ ಹವಾಲಾ ಹಣದ ಭಾಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಬಿಜೆಪಿ ಈ ಆರೋಪವನ್ನು ತಳ್ಳಿಹಾಕಿದೆ.
ಇದನ್ನೂ ಓದಿ:ವಂಚಕನಿಂದ ಲಂಚ ಕೇಳಿದ ಆರೋಪ: ಗುಜರಾತ್‌ನ ಇಬ್ಬರು ಅಧಿಕಾರಿಗಳು ಸಿಬಿಐ ಬಲೆಗೆ
ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಸಿಪಿಐ-ಎಂನ ಕಾರ್ಯಕಾರಿ ಕಾರ್ಯದರ್ಶಿ ಕನ್ವೀನರ್ ಎ.ವಿಜಯರಾಘವನ್, ಬಿಜೆಪಿಯು ಚುನಾವಣಾ ಪ್ರಚಾರಕ್ಕಾಗಿ ಬಳಸಲಾಗುತ್ತಿರುವ ಹವಾಲಾ ಹಣವಿದು. ರಾಜ್ಯದಲ್ಲಿ ಇಂಥ ದೊಡ್ಡ ಮೊತ್ತದ ಹಣದ ವರ್ಗಾವಣೆ ನಡೆದಿರೋದು ಇದೇ ಮೊದಲು ಎಂದಿದ್ದಾರೆ.