ETV Bharat / bharat

ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಿ ಇಂದಿಗೆ ಒಂದು ವರ್ಷ

ದೇಶದಲ್ಲೇ ಖಂಡನೆಗೆ ಒಳಗಾಗಿದ್ದ ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸಿ ಇಂದಿಗೆ ಒಂದು ವರ್ಷವಾಗಿದೆ. ಆರೋಪಿಗಳನ್ನು 2020ರ ಮಾರ್ಚ್ 20 ರಂದು ಗಲ್ಲಿಗೇರಿಸಲಾಗಿತ್ತು.

ತಿಹಾರ್​ ಜೈಲು
tihar jail
author img

By

Published : Mar 20, 2021, 10:59 AM IST

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸಿ ಇಂದಿಗೆ ಒಂದು ವರ್ಷವಾಗಿದೆ. ಆರೋಪಿಗಳನ್ನು 2020 ಮಾರ್ಚ್ 20 ರಂದು ಗಲ್ಲಿಗೇರಿಸಲಾಗಿತ್ತು.

2012ರ ಡಿಸೆಂಬರ್ 16ರಂದು ದಕ್ಷಿಣ ದೆಹಲಿಯಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಒಂದು ಬಸ್ಸಿನೊಳಗೆ ಆರು ಜನರು ಸೇರಿಕೊಂಡು ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಿದ್ದರು. ಆಕೆಯ ಜೊತೆಗಿದ್ದ ಸ್ನೇಹಿತನನ್ನ ಕೈಕಾಲು ಕಟ್ಟಿ ಪ್ರಜ್ಞೆ ತಪ್ಪುವಂತೆ ಥಳಿಸಲಾಗಿತ್ತು. ನಿರ್ಭಯಾ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಅಮಾನುಷವಾಗಿ ದೈಹಿಕ ಹಲ್ಲೆ ಮಾಡಿ ಚಲಿಸುತ್ತಿದ್ದ ಬಸ್ಸಿನಿಂದಲೇ ಅವರಿಬ್ಬರನ್ನೂ ಹೊರಗೆ ಎಸೆದ ದುಷ್ಕೃತ್ಯ ನಡೆದಿತ್ತು.

ಘಟನೆಯಲ್ಲಿ ತೀರಾ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಕೆಲ ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಸಾವನ್ನಪ್ಪಿದ್ದಳು. ಘಟನೆ ಬೆಳಕಿಗೆ ಬರುತ್ತಿದ್ದಂತೆ ದೇಶವ್ಯಾಪಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಈ ಸಂಬಂಧ ಪ್ರರಕಣ ದಾಖಲಿಸಿಕೊಂಡ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದರು. ಆ ಪೈಕಿ ಓರ್ವ ಅಪ್ರಾಪ್ತ ವಯಸ್ಕನಾಗಿದ್ದನು. ಬಂಧಿಸಲ್ಪಟ್ಟ ಐವರು ಆರೋಪಿಗಳಲ್ಲಿ ರಾಮ್ ಸಿಂಗ್ ತಿಹಾರ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು.

ಓದಿ: ದೆಹಲಿ - ಲಕ್ನೋ ಶತಾಬ್ದಿ ರೈಲಿನಲ್ಲಿ ಭಾರೀ ಬೆಂಕಿ

ಇತರ ನಾಲ್ವರು ಆರೋಪಿಗಳಾದ ಮುಖೇಶ್ ಸಿಂಗ್, ಅಕ್ಷಯ್, ವಿನಯ್ ಮತ್ತು ಪವನ್ ಅವರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ನಂತರ ಅವರ ಕರುಣೆ ಅರ್ಜಿಗಳನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. ಇದರ ನಂತರ, ಮಾರ್ಚ್ 20 ರ ಬೆಳಗ್ಗೆ 5.30 ಕ್ಕೆ ನ್ಯಾಯಾಲಯ ಗಲ್ಲಿಗೇರಿಸುವ ಸಮಯವನ್ನು ನಿಗದಿಪಡಿಸಿತ್ತು. ಅದೇ ಸಮಯದಲ್ಲಿ ನಾಲ್ವರನ್ನು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.

ಸುದೀರ್ಘ ಕಾನೂನು ಹೋರಾಟದಲ್ಲಿ ನಿರ್ಭಯಾಳಿಗೆ ಜಯ ದೊರಕಿತು. ಇದು ಕೇವಲ ನಿರ್ಭಯಾಳ ಜಯ ಅಷ್ಟೇ ಅಲ್ಲ. ಅತ್ಯಾಚಾರಿಗಳಿಂದ ಬದುಕನ್ನು ಕಳೆದುಕೊಂಡವರ ಜಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.