ETV Bharat / bharat

ಜಾತಿ ನಿಂದನೆ, ವಿದ್ಯಾರ್ಥಿನಿಗೆ ಥಳಿಸಿದ್ದ ಶಿಕ್ಷಕಿಗೆ 1 ಲಕ್ಷ ರೂ. ದಂಡ - ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

4ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಅಮಾನುಷವಾಗಿ ಥಳಿಸಿದ್ದಲ್ಲೇ ಜಾತಿ ನಿಂದನೆ ಮಾಡಿದ್ದ ಶಿಕ್ಷಕಿಗೆ ಕೋರ್ಟ್​ 1 ಲಕ್ಷ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಆರು ತಿಂಗಳವರೆಗೆ ಸರಳ ಜೈಲು ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

Hamirpur court
Hamirpur court
author img

By

Published : Feb 6, 2022, 4:21 PM IST

ಹಮೀರ್‌ಪುರ (ಹಿಮಾಚಲ ಪ್ರದೇಶ): ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜ್ಯೂನಿಯರ್​ ಬೇಸಿಕ್​ ಟ್ರೈನಿಂಗ್​ (ಜೆಬಿಟಿ) ಶಿಕ್ಷಕಿಯೊಬ್ಬರಿಗೆ ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 1 ಲಕ್ಷ ರೂ. ದಂಡ ಪಾವತಿಸಲು ಸೂಚಿಸಿದೆ.

2019ರ ಪ್ರಕರಣ ಇದಾಗಿದ್ದು, ಅಮ್ನೆಧ್‌ನ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕಿ ರಜನಿ ಕುಮಾರಿ ಅವರು 4ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಅಮಾನುಷವಾಗಿ ಥಳಿಸಿದ್ದಲ್ಲೇ ಜಾತಿ ನಿಂದನೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ದೂರು ಸ್ವೀಕರಿಸಿದ ರಾಜ್ಯ ಶಿಕ್ಷಣ ಇಲಾಖೆಯು ಆರೋಪಿ ಶಿಕ್ಷಕಿಯನ್ನು ಅಮಾನತುಗೊಳಿಸಿ, ಕೆಲ ತಿಂಗಳ ಬಳಿಕ ಬೇರೆ ಶಾಲೆಗೆ ನೇಮಕ ಮಾಡಿತ್ತು.

ಇದನ್ನೂ ಓದಿ: ಮಂಗಳೂರು ವೇಶ್ಯಾವಾಟಿಕೆ ಕೇಸ್​​​ : 3 ಗಿರಾಕಿಗಳ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಲು ಚಿಂತನೆ

ಘಟನೆ ಸಂಬಂಧ ದೂರಿನ ಆಧಾರದ ಮೇಲೆ ಶಿಕ್ಷಕಿ ವಿರುದ್ಧ ಸೆಕ್ಷನ್ 323, ಎಸ್‌ಸಿ/ಎಸ್‌ಟಿ ಕಾಯ್ದೆ ಮತ್ತು ಬಾಲಾಪರಾಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಧೀಶರಾದ ಜೆಕೆ ಶರ್ಮಾ ಅವರು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಶಿಕ್ಷಕಿಯನ್ನು ತಪ್ಪಿತಸ್ಥರೆಂದು ಪರಿಗಣಿಸಿ, 1 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ಆರು ತಿಂಗಳವರೆಗೆ ಸರಳ ಜೈಲು ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.