ETV Bharat / bharat

ಅದಾನಿ ಸೇರಿ 447 ಕಂಪನಿಗಳಿಂದ ಪಾವತಿಯಾಗದ ಸರ್ಕಾರಿ ತೆರಿಗೆ..! - MLA Ananth Patel

ಗುಜರಾತ್​ನಲ್ಲಿ ಅದಾನಿ ಸೇರಿದಂತೆ 447 ಕಂಪನಿಗಳಿಂದ ಪಾವತಿಯಾಗದ ಸರ್ಕಾರಿ ತೆರಿಗೆ - 10 ಕೋಟಿ ರೂಪಾಯಿಗಿಂತ ಹೆಚ್ಚು ತೆರಿಗೆ ಕಟ್ಟದ ದೊಡ್ಡ ಕಂಪನಿಗಳು- ಗುಜರಾತ್ ಬಜೆಟ್​ ಅಧಿವೇಶನದ ವೇಳೆ ಮಾಹಿತಿ ಬಹಿರಂಗ.

Gujarat budget session
ಗುಜರಾತ್ ಬಜೆಟ್​ ಅಧಿವೇಶನ
author img

By

Published : Mar 4, 2023, 8:44 PM IST

ಗುಜರಾತ್​: ಗುಜರಾತಿನ ಹಲವು ಖಾಸಗಿ ಕಂಪನಿಗಳಿಗೆ ಸರ್ಕಾರವು ಮೂಲ ಸೌಕರ್ಯ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸುವುದಾಗಿ ಹೇಳುತ್ತಿದೆ. ಆದರೆ, ಕಂಪನಿಗಳು ಸರ್ಕಾರದ ತೆರಿಗೆ ಕಟ್ಟಲು ಸೋಮಾರಿತನ ತೋರುತ್ತಿವೆ ಎಂದು ಗುಜರಾತ್ ವಿಧಾನಸಭೆಯಲ್ಲಿ ಶಾಸಕ ಅನಂತ್ ಪಟೇಲ್ ಪ್ರಶ್ನಿಸಿದರು.

447 ಕಂಪನಿಗಳಿಂದ ಪಾವತಿಯಾಗದ ತೆರಿಗೆ: ಈ ಕಂಪನಿಗಳಿಗೆ ಎಷ್ಟು ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ವಿಧಿಸಲಾಗುತ್ತದೆ. ಇವು ರಾಜ್ಯಕ್ಕೆ ಎಷ್ಟು ತೆರಿಗೆ ಬಾಕಿ ಉಳಿಸಿವೆ ಎಂದು ಪ್ರಶ್ನೆ ಮಾಡಿದ ಅವರು, ಒಟ್ಟು 447 ಕಂಪನಿಗಳಿಂದ ಸರ್ಕಾರ ಇನ್ನೂ 10 ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸಬೇಕಿದೆ ಎಂದು ಅವರು ಸದನದಲ್ಲಿ ಬಹಿರಂಗಪಡಿಸಿದರು. ಯಾವ್ಯಾವ ಕಂಪನಿಗಳು ತೆರಿಗೆ ಪಾವತಿಸಬೇಕು ಎನ್ನುವುದುನ್ನು ತಿಳಿಸಿದರು. ಅದಾನಿ ಸೇರಿದಂತೆ ವಿವಿಧ ಕಂಪನಿಗಳ ಹೆಸರುಗಳನ್ನು ಉಲ್ಲೇಖಿಸಿದರು.

10 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ಬಾಕಿ: ಗುಜರಾತ್‌ನ 447 ಕಂಪನಿಗಳ ಪೈಕಿ, ದೊಡ್ಡ ಕಂಪನಿಗಳು 10 ಕೋಟಿಗಿಂತ ಹೆಚ್ಚು ತೆರಿಗೆ ಬಾಕಿ ಉಳಿಸಿವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಸಿಮ್ಸ್ ಲಿಮಿಟೆಡ್, ಅದಾನಿ ಬಂಕರಿಂಗ್ ಪ್ರೈವೇಟ್ ಲಿಮಿಟೆಡ್, ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಸಾಲ್ ಹಾಸ್ಪಿಟಲ್, ಸಿಮ್ಸ್ ಆಸ್ಪತ್ರೆ, ಮಹೀಂದ್ರ & ಮಹೀಂದ್ರ, ಏಷ್ಯನ್ ಪೇಂಟ್ಸ್, ಏಷ್ಯನ್ ಗ್ರಾನಿಟೊ, ನೋವಾ ಶಿಪ್ಪಿಂಗ್ ಮತ್ತು ವೀನಸ್ ಲೈಫ್ ಕಂಪನಿ ತೆರಿಗೆ ಪಾವತಿಸದ ಪಟ್ಟಿಯಲ್ಲಿ ಸೇರಿವೆ.

ಯಾವುದೇ ಕಂಪನಿಗೆ ಮನ್ನಾ ಮಾಡಿಲ್ಲ: ಈ ಕಂಪನಿಗಳಿಂದ ಎಷ್ಟು ಮೊತ್ತವನ್ನು ಮನ್ನಾ ಮಾಡಲಾಗಿದೆ ಎಂಬ ವಿಷಯಕ್ಕೆ ಲಿಖಿತ ಉತ್ತರ ನೀಡಿದ ರಾಜ್ಯ ಸರ್ಕಾರದ ಹಣಕಾಸು ಸಚಿವರು, ಕಳೆದ 2 ವರ್ಷಗಳಲ್ಲಿ 31 ಜನವರಿ 2023ರಂತೆ 447 ಕಂಪನಿಗಳು ತೆರಿಗೆಯನ್ನು ಬಾಕಿ ಉಳಿಸಿವೆ. 10 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ವ್ಯಾಟ್ ಮರುಪಾವತಿಯಾಗಬೇಕಿದೆ. ಆದ್ರೆ, ಯಾವುದೇ ಕಂಪನಿಗಳ ತೆರಿಗೆ ಮೊತ್ತವನ್ನು ಮನ್ನಾ ಮಾಡಿಲ್ಲ ಎಂದು ಅವರು ಮಾಹಿತಿ ನೀಡಿದರು.

ಶಕ್ತಿಪೀಠದ ಅಂಬಾಜಿ ದೇಗುಲದ ಪ್ರಸಾದ ವಿಚಾರ: ಇತ್ತೀಚೆಗಷ್ಟೇ ಶಕ್ತಿಪೀಠದ ಅಂಬಾಜಿ ದೇಗುಲದಲ್ಲಿ ಮೊಹಂತಾಳ ಪ್ರಸಾದವನ್ನು ನಿಲ್ಲಿಸಲು ದೇವಸ್ಥಾನದ ಟ್ರಸ್ಟ್ ನಿರ್ಧರಿಸಿದೆ. ನಂತರ ಇಂದು ಗುಜರಾತ್ ವಿಧಾನಸಭೆಯಲ್ಲಿ ಈ ವಿಷಯ ಪ್ರತಿಧ್ವನಿಸಿತು. ಈ ಕುರಿತು ಮಾತನಾಡಿದ ಕಾಂಗ್ರೆಸ್ ಶಾಸಕ ಕಾಂತಿ ಖಾರದ್, ಅಂಬಾಜಿ ದೇವಸ್ಥಾನದಲ್ಲಿ ಮೋಹನ್‌ತಾಳ ಅರ್ಪಣೆ ನಿಲ್ಲಿಸಿರುವುದು ಸರಿಯಲ್ಲ. ಇದರೊಂದಿಗೆ ಈ ಬಗ್ಗೆ ಪ್ರತಿಭಟನೆಯನ್ನೂ ನಡೆಸಿದರು. ಇದಲ್ಲದೇ ಇಂದು ಗುಜರಾತ್ ವಿಧಾನಸಭೆಯಲ್ಲಿ ಗುಜರಾತ್ ಮೇಲೆ ಎಷ್ಟು ಸಾಲವಿದೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಗುಜರಾತಿನ ಪ್ರತಿ ಮಗುವಿನ ಮೇಲೆ 50,000 ರೂ. ಸಾಲದ ಹೊರೆ: ಕಾಂಗ್ರೆಸ್​ ಪ್ರಶ್ನೆಗೆ ವಿಧಾನಸಭೆ ಭವನದಲ್ಲಿ ಉತ್ತರಿಸಿದ ಸರ್ಕಾರವು, ಗುಜರಾತ್ ರಾಜ್ಯವು ಪ್ರಸ್ತುತ 3,20,812 ಕೋಟಿ ರೂ. ಸಾಲವನ್ನು ಹೊಂದಿದೆ. ಅಂದರೆ ಗುಜರಾತಿನಲ್ಲಿ ಹುಟ್ಟುವ ಪ್ರತಿ ಮಗು ಕೂಡಾ 50,000 ರೂಪಾಯಿ ಸಾಲದ ಹೊರೆಯನ್ನು ಹೊತ್ತುಕೊಂಡು ಹುಟ್ಟುತ್ತದೆ. ರಾಜ್ಯ ಸರ್ಕಾರವು ಸಾಲವನ್ನು ಹೆಚ್ಚಿಸಲು ಲಿಖಿತವಾಗಿ ಕಾರಣಗಳನ್ನು ನೀಡಿದ್ದರೂ, ರಾಜ್ಯದ ಅಭಿವೃದ್ಧಿ ಯೋಜನಾ ಕಾಮಗಾರಿಗಳಿಗೆ ಮತ್ತು ವಾರ್ಷಿಕ ಅನುಗುಣವಾಗಿ ಸಾರ್ವಜನಿಕ ಸಾಲದ ಮೂಲಕ ಸಂಪನ್ಮೂಲಗಳನ್ನು ಸಂಗ್ರಹಿಸುವ ವಿಧಾನವನ್ನು ಅನುಸರಿಸಿದೆ. ಅಭಿವೃದ್ಧಿ ಯೋಜನಾ ವೆಚ್ಚದ ಬೆಳವಣಿಗೆ ಮತ್ತು ಕಾನೂನಿನಡಿಯಲ್ಲಿ ಸೂಚಿಸಲಾದ ಮಿತಿಗಳಲ್ಲಿ ಸಾಲವನ್ನು ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಅಂಬಾನಿ ಕಾರು ಚಾಲಕರಿಗೆ ಸಿಗುವ ಮಾಸಿಕ ಸಂಬಳ ಎಷ್ಟು ಗೊತ್ತಾ? ಸಾಫ್ಟ್‌ವೇರ್ ಉದ್ಯೋಗಿಗಳಿಗೂ ಇಲ್ಲ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.