ಸೋನಭದ್ರ(ಉತ್ತರಪ್ರದೇಶ): ಉತ್ತರ ಭಾರತದ ರಾಜ್ಯಗಳಲ್ಲಿ ಮದುವೆ ಸೇರಿದಂತೆ ಮತ್ತಿತರ ಸಮಾರಂಭಗಳಲ್ಲಿ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸುವುದು ಸಾಮಾನ್ಯವಾಗಿದೆ. ಇದು ಶೌರ್ಯದ ಸಂಕೇತವಾಗಿ ರೂಢಿಯಾಗಿದೆ. ಈ ರೀತಿ ಗುಂಡು ಹಾರಿಸಲು ಹೋದ ವರನೊಬ್ಬ ತನ್ನ ಮದುವೆಯ ಮೆರವಣಿಗೆಯಲ್ಲಿ ಸ್ನೇಹಿತನನ್ನೇ ಬಲಿ ತೆಗೆದುಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಸೋನಭದ್ರ ಜಿಲ್ಲೆಯ ಬ್ರಹ್ಮನಗರ ಪ್ರದೇಶದಲ್ಲಿ ನಡೆದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮದುವೆಯ ಸಂಭ್ರಮಾಚರಣೆಯಲ್ಲಿದ್ದ ಕುಟುಂಬಸ್ಥರು ಗುಂಡೇಟಿಗೆ ಸ್ನೇಹಿತ ಮೃತಪಟ್ಟ ಬಳಿಕ ಶೋಕದಲ್ಲಿ ಮುಳುಗುವಂತಾಗಿದೆ.
-
दूल्हे ने की हर्ष फायरिंग, आर्मी के जवान की हुई मौत। यूपी के @sonbhadrapolice राबर्ट्सगंज का #ViralVideo #earthquake #breastislife #fearwomen #Afghanistan pic.twitter.com/7laX9OUIqD
— RAHUL PANDEY (@BhokaalRahul) June 23, 2022 " class="align-text-top noRightClick twitterSection" data="
">दूल्हे ने की हर्ष फायरिंग, आर्मी के जवान की हुई मौत। यूपी के @sonbhadrapolice राबर्ट्सगंज का #ViralVideo #earthquake #breastislife #fearwomen #Afghanistan pic.twitter.com/7laX9OUIqD
— RAHUL PANDEY (@BhokaalRahul) June 23, 2022दूल्हे ने की हर्ष फायरिंग, आर्मी के जवान की हुई मौत। यूपी के @sonbhadrapolice राबर्ट्सगंज का #ViralVideo #earthquake #breastislife #fearwomen #Afghanistan pic.twitter.com/7laX9OUIqD
— RAHUL PANDEY (@BhokaalRahul) June 23, 2022
ಘಟನೆ ಏನು?: ಮದುವೆಯ ಬಳಿಕ ವರನನ್ನು ರಥದಲ್ಲಿ ಮೆರವಣಿಗೆ ನಡೆಸಲಾಗುತ್ತಿತ್ತು. ಈ ವೇಳೆ ರಥದ ಮೇಲಿದ್ದ ವರ ಸಂಭ್ರಮದ ಭಾಗವಾಗಿ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಈ ವೇಳೆ ಅದು ಪಕ್ಕದಲ್ಲೇ ಇದ್ದ ತನ್ನ ಸ್ನೇಹಿತನಿಗೆ ಬಡಿದಿದೆ.
ದುರಂತ ಅಂದರೆ ಮೃತಪಟ್ಟ ವ್ಯಕ್ತಿ ಸೇನೆಯಲ್ಲಿ ಯೋಧನಾಗಿದ್ದ. ವರ ಬಳಸಿದ ಬಂದೂಕು ಕೂಡ ಇದೇ ಯೋಧನಿಗೆ ಸೇರಿದ್ದಾಗಿದೆ. ತಾನು ಕೊಟ್ಟ ಬಂದೂಕಿನಿಂದಲೇ ಯೋಧ ತನ್ನ ಸ್ನೇಹಿತನ ಕೈಯಲ್ಲೇ ಸಾವನ್ನಪ್ಪಿದ್ದಾನೆ.
ಗುಂಡು ತಾಕಿದ ಬಳಿಕ ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವ್ಯಕ್ತಿ ಮೃತಪಟ್ಟಿದ್ದನ್ನು ವೈದ್ಯರು ದೃಢಪಡಿಸಿದ್ದಾರೆ. ಮೃತ ವ್ಯಕ್ತಿಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವರನನ್ನು ಬಂಧಿಸಿದ್ದಾರೆ. ಅಲ್ಲದೇ, ಬಂದೂಕನ್ನು ಕೂಡ ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ಉದ್ಧವ್ ಠಾಕ್ರೆಗೆ ರೆಬೆಲ್ಸ್ ಸೆಡ್ಡು: ಹೊಸ ಶಿವಸೇನಾ ನಾಯಕತ್ವ ಹುಟ್ಟುಹಾಕಿದ ಬಂಡಾಯ ಶಾಸಕರು