ನವದೆಹಲಿ: ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದಾಗಿ 27 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು (ಮಂಗಳವಾರ) ಲೋಕಸಭೆಯಲ್ಲಿ ಮಂಡಿಸಿತು. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ವಿಧೇಯಕವನ್ನು ಸದನಕ್ಕೆ ಪರಿಚಯಿಸಿದರು. ಇದು ಅಂಗೀಕಾರವಾದಲ್ಲಿ ಲೋಸಕಭೆಯಲ್ಲಿ ಮಹಿಳೆಯರ ಸಂಕ್ಯೆ 181ಕ್ಕೆ ಏರಲಿದೆ.
ಹೊಸ ಸಂಸತ್ ಭವನದಲ್ಲಿ ಕಲಾಪ ಆರಂಭವಾದ ಮೊದಲ ದಿನವೇ ಮಹತ್ವದ ಮಸೂದೆಯನ್ನು ಸರ್ಕಾರ ಮಂಡನೆ ಮಾಡಿದೆ. ಇದಕ್ಕೆ 'ನಾರಿ ಶಕ್ತಿ ವಂದನ್ ಅಧಿನಿಯಂ' ಎಂದು ಹೆಸರಿಡಲಾಗಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಅಂದರೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆ ಇದಾಗಿದೆ. 2010 ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ಎಲ್ಲ ಪಕ್ಷಗಳು ಸರ್ವಸಮ್ಮತದಿಂದ ವಿಧೇಯಕಕ್ಕೆ ಒಪ್ಪಿಗೆ ನೀಡಲಿದ್ದು, ಸುಗಮವಾಗಿ ಬಿಲ್ ಪಾಸ್ ಆಗಲಿದೆ.
-
#WATCH | In the Lok Sabha of the new Parliament building, Union Law Minister Arjun Ram Meghwal tables the Women's Reservation Bill in Lok Sabha. pic.twitter.com/cRQMhbDdzI
— ANI (@ANI) September 19, 2023 " class="align-text-top noRightClick twitterSection" data="
">#WATCH | In the Lok Sabha of the new Parliament building, Union Law Minister Arjun Ram Meghwal tables the Women's Reservation Bill in Lok Sabha. pic.twitter.com/cRQMhbDdzI
— ANI (@ANI) September 19, 2023#WATCH | In the Lok Sabha of the new Parliament building, Union Law Minister Arjun Ram Meghwal tables the Women's Reservation Bill in Lok Sabha. pic.twitter.com/cRQMhbDdzI
— ANI (@ANI) September 19, 2023
ಹೊಸ ಸಂಸತ್ತಿನಲ್ಲಿ ಮಂಡಿಸಿದ ಮೊದಲ ಮಸೂದೆ: ಹಳೆಯ ಸಂಸತ್ತಿನಿಂದ ಹೊಸ ಸಂಸತ್ ಭವನಕ್ಕೆ ಕಲಾಪವನ್ನು ಇಂದು ವರ್ಗ ಮಾಡಲಾಗಿದೆ. ಇಲ್ಲಿ ನಡೆದ ಮೊದಲ ಕಲಾಪದಲ್ಲೇ ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಚಯಿಸಲಾಗಿದ್ದು, ಹೊಸ ಸಂಸತ್ ಕಟ್ಟಡದಲ್ಲಿ ಮಂಡಿಸಿದ ಮೊದಲ ಬಿಲ್ ಇದಾಗಿದೆ.
ರಾಜ್ಯ ಮತ್ತು ರಾಷ್ಟ್ರಮಟ್ಟದ ನೀತಿ ನಿರೂಪಣೆಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಗೆ ಇದು ಅವಕಾಶ ನೀಡಲಿದೆ. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯನ್ನು ಸಾಧಿಸಲು ನಾರಿ ಶಕ್ತಿ ವಂದನ್ ಅಧಿನಿಯಂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸರ್ಕಾರ ಹೇಳಿದೆ.
-
#WATCH | In the Rajya Sabha of the new Parliament building, PM Narendra Modi says..." Federal structure presented India's power in front of the world and the world was impressed...during G 20 summit, various meetings took place across different states. Every state with great… pic.twitter.com/IgQoHNldJo
— ANI (@ANI) September 19, 2023 " class="align-text-top noRightClick twitterSection" data="
">#WATCH | In the Rajya Sabha of the new Parliament building, PM Narendra Modi says..." Federal structure presented India's power in front of the world and the world was impressed...during G 20 summit, various meetings took place across different states. Every state with great… pic.twitter.com/IgQoHNldJo
— ANI (@ANI) September 19, 2023#WATCH | In the Rajya Sabha of the new Parliament building, PM Narendra Modi says..." Federal structure presented India's power in front of the world and the world was impressed...during G 20 summit, various meetings took place across different states. Every state with great… pic.twitter.com/IgQoHNldJo
— ANI (@ANI) September 19, 2023
ಅಂಗೀಕಾರಕ್ಕಿಲ್ಲ ಅಡ್ಡಿ: ಹಳೆಯ ಮಸೂದೆಯಲ್ಲಿ ಕೆಲವೊಂದು ಮಾರ್ಪಾಡು ಮಾಡಿ ಮಂಡಿಸಲಾಗಿರುವ ಈ ವಿಧೇಯಕದ ಅಂಗೀಕಾರಕ್ಕೆ ಯಾವುದೇ ಅಡ್ಡಿಗಳಿಲ್ಲ. ಕಾರಣ ಆಡಳಿತ ಮತ್ತು ವಿಪಕ್ಷಗಳೂ ವಿಧೇಯಕ ಮಂಡನೆಯ ಪರವಾಗಿವೆ. ಹೀಗಾಗಿ ಸರ್ಕಾರ ಚರ್ಚೆಯ ಬಳಿಕ ಯಾವುದೇ ಪ್ರತಿರೋಧವಿಲ್ಲದೇ ಸಲೀಸಾಗಿ ಮಸೂದೆಗೆ ಒಪ್ಪಿಗೆ ಪಡೆಯಲಿದೆ.
ಈಗಲೇ ಜಾರಿ ಕಷ್ಟ: ಸರ್ಕಾರ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆದಾಗ್ಯೂ ಅನುಷ್ಠಾನಕ್ಕೆ ತರಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. 2024 ರ ಲೋಕಸಭೆ ಚುನಾವಣೆ ವೇಳೆಗೆ ಜಾರಿ ಮಾಡುವುದು ಕಷ್ಟವಾಗಲಿದೆ. ಕಾರಣ ಮೀಸಲಾತಿ ಚರ್ಚೆ ಮತ್ತು ನಿಯಮಗಳು ಪೂರ್ಣಗೊಂಡ ನಂತರವೇ ಕಾನೂನು ಜಾರಿಗೆ ಬರಬೇಕಿದೆ.
ಈ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೇಂದ್ರ ಸಚಿವ ಸಂಪುಟ ಸೋಮವಾರ ಮಸೂದೆಗೆ ಅನುಮೋದನೆ ನೀಡಿತ್ತು. ಇದೀಗ ಲೋಕಸಭೆಯಲ್ಲಿ ಅದನ್ನು ಮಂಡಿಸಲಾಗಿದೆ. ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಪಾಲ್ಗೊಳ್ಳಬೇಕು ಎಂದು ಸರ್ಕಾರ ಬಯಸುತ್ತದೆ ಎಂದರು.
ದೇಶ ಸೇರಿದಂತೆ ಜಗತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಕಂಡಿದೆ. ಕ್ರೀಡೆಯಿಂದ ಸ್ಟಾರ್ಟ್‌ಅಪ್‌ಗಳವರೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಭಾರತೀಯ ಮಹಿಳೆಯರು ನೀಡಿದ ಕೊಡುಗೆ ಅಪಾರವಾಗಿದೆ. ಹೀಗಾಗಿ ನಾರಿ ಶಕ್ತಿ ವಂದನ್ ಅಧಿನಿಯಂ ಜಾರಿ ಕಾಲ ಪಕ್ವವಾಗಿದೆ ಎಂದು ಪ್ರಧಾನಿ ಅಭಿಪ್ರಾಯಟ್ಟರು.
15 ವರ್ಷಗಳ ಅವಧಿ: ಮಹಿಳೆಯರಿಗೆ ನೀಡಲಾಗುತ್ತಿರುವ ರಾಜಕೀಯ ಮೀಸಲಾತಿಯು 15 ವರ್ಷಗಳ ಅವಧಿಗೆ ಇರುತ್ತದೆ. ಅವರಿಗೆ ಮೀಸಲಾದ ಸ್ಥಾನಗಳಲ್ಲಿ ಕೋಟಾಗಳನ್ನು ಹೊಂದಿರುತ್ತದೆ. ಸಂವಿಧಾನದ 128 ನೇ ತಿದ್ದುಪಡಿ ಮಸೂದೆ 2023 ಲೋಕಸಭೆಯಲ್ಲಿ ಚರ್ಚೆಯ ಬಳಿಕ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು 1996 ರಿಂದ ಹಲವಾರು ಪ್ರಯತ್ನಗಳು ನಡೆದಿವೆ. 2010 ರಲ್ಲಿ ಯುಪಿಎ ಸರ್ಕಾರ ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ಪಡೆದಿತ್ತು. ಲೋಕಸಭೆಯಲ್ಲಿ ಒಪ್ಪಿಗೆ ಸಿಗದೇ ಮಸೂದೆ ನೆನೆಗುದಿಗೆ ಬಿದ್ದಿತ್ತು. ಸದ್ಯ ಮಹಿಳಾ ಸಂಸದರು ಸಂಸತ್ತಿನಲ್ಲಿ ಶೇಕಡಾ 15 ರಷ್ಟು ಪಾಲನ್ನು ಹೊಂದಿದ್ದರೆ, ವಿಧಾನಸಭೆಗಳಲ್ಲಿ ಶೇಕಡಾ 10 ಕ್ಕಿಂತ ಕಡಿಮೆ ಪಾಲು ಹೊಂದಿದ್ದಾರೆ.
ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ 'ಅಪ್ನಾ ಹೈ': ಸೋನಿಯಾ ಗಾಂಧಿ