ETV Bharat / bharat

ಭಾರತೀಯ ಬ್ಯಾಂಕುಗಳ ಆಸ್ತಿ ಮುಟ್ಟುಗೋಲಿಗೆ ಮುಂದಾದ ಕೇರ್ನ್​; ರಕ್ಷಣೆಗೆ ಧಾವಿಸಿದ ಸರ್ಕಾರ - ವ್ಯಾಜ್ಯ ಪರಿಹಾರ

ಕೇರ್ನ್​ ಎನರ್ಜಿ ಕಂಪನಿಗೆ 1.2 ಬಿಲಿಯನ್ ಡಾಲರುಗಳಿಗೂ ಅಧಿಕ ಮೊತ್ತದ ಬಡ್ಡಿ ಹಾಗೂ ವೆಚ್ಚವನ್ನು ಪಾವತಿಸಬೇಕೆಂದು ಅಂತಾರಾಷ್ಟ್ರೀಯ ವಿವಾದ ಪರಿಹಾರ ವೇದಿಕೆಯೊಂದು ಆದೇಶಿಸಿದೆ. ಹೀಗಾಗಿ ತನಗೆ ಬರಬೇಕಾದ ಹಣ ಬರದಿದ್ದಲ್ಲಿ ಅದರ ಬದಲಾಗಿ ವಿದೇಶಗಳಲ್ಲಿರುವ ಭಾರತೀಯ ಕಂಪನಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಕೇರ್ನ್ ಹೇಳಿತ್ತು.

Govt asks PSU banks to keep high vigil on any attempt to seize funds by Cairn
ಭಾರತೀಯ ಬ್ಯಾಂಕುಗಳ ಆಸ್ತಿ ಮುಟ್ಟುಗೋಲಿಗೆ ಮುಂದಾದ ಕೇರ್ನ್​; ರಕ್ಷಣೆಗೆ ಧಾವಿಸಿದ ಕೇಂದ್ರ ಸರ್ಕಾರ
author img

By

Published : May 8, 2021, 7:19 PM IST

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕುಗಳು ವಿದೇಶದಲ್ಲಿ ತಾವು ಹೂಡಿಕೆ ಮಾಡಿದ ಠೇವಣಿಗಳನ್ನು ವಶಪಡಿಸಿಕೊಳ್ಳುವ ಯತ್ನಗಳಿಂದ ಎಚ್ಚರವಾಗಿರಬೇಕು ಎಂದು ದೇಶದ ಹಣಕಾಸು ಸಚಿವಾಲಯ ಹೇಳಿದೆ. ಪುನರಾವರ್ತಿತ ತೆರಿಗೆಯನ್ನು ವಿರೋಧಿಸಿ ಕೇರ್ನ್ ಎನರ್ಜಿ ಪಿಎಲ್​ಸಿ ಕಂನಿಯ ಪರವಾಗಿ ಬಂದಿರುವ ಆದೇಶದ ಬಗ್ಗೆ ಎಚ್ಚರದಿಂದಿರಬೇಕು ಎಂದು ಸರ್ಕಾರ ತಿಳಿಸಿದೆ.

ಕೇರ್ನ್​ ಎನರ್ಜಿ ಕಂಪನಿಗೆ 1.2 ಬಿಲಿಯನ್ ಡಾಲರುಗಳಿಗೂ ಅಧಿಕ ಮೊತ್ತದ ಬಡ್ಡಿ ಹಾಗೂ ವೆಚ್ಚವನ್ನು ಪಾವತಿಸಬೇಕೆಂದು ಅಂತಾರಾಷ್ಟ್ರೀಯ ವಿವಾದ ಪರಿಹಾರ ವೇದಿಕೆಯೊಂದು ಆದೇಶಿಸಿದೆ. ಹೀಗಾಗಿ ತನಗೆ ಬರಬೇಕಾದ ಹಣ ಬರದಿದ್ದಲ್ಲಿ ಅದರ ಬದಲಾಗಿ ವಿದೇಶಗಳಲ್ಲಿರುವ ಭಾರತೀಯ ಕಂಪನಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಕೇರ್ನ್ ಹೇಳಿತ್ತು.

ವ್ಯಾಜ್ಯ ಪರಿಹಾರ ವೇದಿಕೆಯ ಆದೇಶವನ್ನು ಪಾಲಿಸಲು ಅಮೆರಿಕ ಮತ್ತು ಇಂಗ್ಲೆಂಡ್​ನಂಥ ದೇಶಗಳ ಬ್ಯಾಂಕುಗಳಲ್ಲಿನ ಭಾರತೀಯ ಹಣವನ್ನು ಕೇರ್ನ್ ಗುರಿಯಾಗಿಸಿಕೊಳ್ಳಬಹುದು. ಹೀಗಾಗಿ ಇಂಥ ಹಣಕಾಸು ಮುಟ್ಟುಗೋಲಿನ ಸಾಧ್ಯತೆಗಳ ಬಗ್ಗೆ ಸಾರ್ವಜನಿಕ ವಲಯದ ಬ್ಯಾಂಕುಗಳು ತೀರಾ ಎಚ್ಚರವಾಗಿರಬೇಕೆಂದು ಹಾಗೂ ಅಂಥ ಪ್ರಯತ್ನಗಳೇನಾದರೂ ನಡೆದಲ್ಲಿ ಭಾರತ ಸರ್ಕಾರಕ್ಕೆ ಕೂಡಲೇ ತಿಳಿಸಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ.

ಭಾರತೀಯ ಬ್ಯಾಂಕುಗಳ ಆಸ್ತಿ ಮುಟ್ಟುಗೋಲಿನ ಯತ್ನದ ಬಗ್ಗೆ ಆದಷ್ಟು ಬೇಗನೆ ತಿಳಿದಲ್ಲಿ ಅಂಥ ಪ್ರಯತ್ನಗಳನ್ನು ನಿಷ್ಟ್ರಿಯಗೊಳಿಸಲು ಕಾನೂನು ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಸರ್ಕಾರ ಹೇಳಿದೆ.

ಸ್ಕಾಟ್ಲೆಂಡ್ ದೇಶದ ಕಂಪನಿಯಾದ ಕೇರ್ನ್ 1994 ರಲ್ಲಿ ಭಾರತದ ಆಯಿಲ್ ಹಾಗೂ ಗ್ಯಾಸ್ ಕ್ಷೇತ್ರದಲ್ಲಿ ಹೂಡಿಕೆ ಮಾಡಿತ್ತು. ಇದಾಗಿ ದಶಕದ ನಂತರ ಕಂಪನಿಯು ರಾಜಸ್ಥಾನದಲ್ಲಿ ಬಹುದೊಡ್ಡ ತೈಲ ನಿಕ್ಷೇಪವನ್ನು ಪತ್ತೆ ಹಚ್ಚಿತ್ತು. ಅಲ್ಲದೆ 2006 ರಲ್ಲಿ ಭಾರತದ ಬಿಎಸ್​ಇ ಶೇರು ಮಾರುಕಟ್ಟೆಯಲ್ಲಿ ನೋಂದಾಯಿಸಲ್ಪಟ್ಟಿತ್ತು. ಆದರೆ ಇದಾಗಿ ಐದು ವರ್ಷಗಳ ನಂತರ ಸರ್ಕಾರವು ಈ ಕಂಪನಿಯ ರಚನಾ ಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, 10,247 ಕೋಟಿ ರೂಪಾಯಿಗಳಷ್ಟು ಪುನರಾವರ್ತಿತ ತೆರಿಗೆ ವಿಧಿಸಿತ್ತು.

ಇದರ ನಂತರ ಸರ್ಕಾರವು ವಿವಿಧ ಕ್ರಮಗಳ ಮೂಲಕ ಕೇರ್ನ್​ ಕಂಪನಿಯಿಂದ ಕೆಲ ಪ್ರಮಾಣದ ದಂಡವನ್ನು ವಸೂಲಿ ಸಹ ಮಾಡಿಕೊಂಡಿತ್ತು. ಆದರೆ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಕೇರ್ನ್ ಅಂತಾರಾಷ್ಟ್ರೀಯ ವ್ಯಾಜ್ಯ ಪರಿಹಾರ ನ್ಯಾಯಾಲಯದ ಮೊರೆ ಹೋಗಿತ್ತು. 2020ರ ಡಿಸೆಂಬರಿನಲ್ಲಿ ಕೇರ್ನ್ ಪರವಾಗಿ ತೀರ್ಪು ಬಂದಿದ್ದು, ಸುಮಾರು 12,600 ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ಕೇರ್ನ್​ಗೆ ಭಾರತ ಸರ್ಕಾರ ಪಾವತಿಸಬೇಕೆಂದು ಹೇಳಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.