ETV Bharat / bharat

Jallianwala Bagh: ಶಾಹೀದ್​​ ಬಾವಿಗೆ ನಾಣ್ಯ ಹಾಕುವುದನ್ನು ನಿಷೇಧಿಸಿದ ಸರ್ಕಾರ - Etv bharat kannada

ಜಲಿಯನ್‌ವಾಲಾ ಬಾಗ್​ನಲ್ಲಿರುವ ಶಾಹೀದ್​ ಹುತಾತ್ಮರ ಬಾವಿ- ಈ ಬಾವಿಗೆ ನಾಣ್ಯಗಳನ್ನು ಹಾಕುವುದಕ್ಕೆ ಬ್ರೇಕ್​- ಕೇಂದ್ರ ಸರ್ಕಾರದಿಂದ ನಿಷೇಧ

government has banned to throw coins in the Jallianwala Bagh historic martyr well
ಶಾಹೀದ್​​ ಬಾವಿಗೆ ಹಣ ಹಾಕುವುದನ್ನು ನಿಷೇಧಿಸಿದ ಸರ್ಕಾರ
author img

By

Published : Jul 26, 2022, 6:47 PM IST

ಚಂಡೀಗಢ: ಪಂಜಾಬ್‌ನ ಅಮೃತಸರದಲ್ಲಿರುವ ಐತಿಹಾಸಿಕ ಜಲಿಯನ್‌ವಾಲಾ ಬಾಗ್​ ನೋಡಲು ಅನೇಕ ಜನರು ಬರುತ್ತಿದ್ದರು. ಹೀಗೆ ಬಂದವರು ಅಲ್ಲಿರುವ ಹುತಾತ್ಮರ ಬಾವಿಗೆ ನಾಣ್ಯಗಳನ್ನು ಎಸೆಯುತ್ತಿದ್ದರು. ಇದೀಗ ಕೇಂದ್ರ ಸಂಸ್ಕೃತಿ ಸಚಿವಾಲಯವು ಜಲಿಯನ್ ವಾಲಾಬಾಗ್‌ನ ಶಾಹೀದ್​ ಬಾವಿಗೆ ಹಣ ಹಾಕುವುದನ್ನು ನಿಷೇಧಿಸಿದೆ. ಅಲ್ಲದೇ ಐತಿಹಾಸಿಕ ಬಾವಿಯ ಮೇಲ್ಭಾಗವನ್ನು ಮುಚ್ಚಲು ಆದೇಶಿಸಿದೆ. ಈ ಹಿಂದೆ ಬಾವಿಯ ಹೊರಗೆ ಸೂಚನಾ ಫಲಕವನ್ನೂ ಹಾಕಲಾಗಿತ್ತು. ಇದರಲ್ಲಿ ನಾಣ್ಯಗಳನ್ನು ಬಾವಿಗೆ ಹಾಕದಂತೆ ಮನವಿ ಮಾಡಲಾಗಿದ್ರೂ, ಪ್ರವಾಸಿಗರು ಹಣ ಹಾಕುತ್ತಿದ್ದರು.

ಭಾರತ ಮತ್ತು ವಿದೇಶಗಳಿಂದ ಬರುವ ಪ್ರವಾಸಿಗರು ಜಲಿಯನ್‌ವಾಲಾ ಬಾಗ್‌ನಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸುವಾಗ ಬಾವಿಯನ್ನು ವೀಕ್ಷಿಸುತ್ತಿದ್ದರು ಮತ್ತು ಗೌರವಾರ್ಥವಾಗಿ ನಾಣ್ಯಗಳನ್ನು ಹಾಕುತ್ತಿದ್ದರು. 2019 ರಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಶತಮಾನೋತ್ಸವದ ಸಂದರ್ಭದಲ್ಲಿ, ಅದನ್ನು ಕೇಂದ್ರ ಸರ್ಕಾರ ನವೀಕರಿಸಿತ್ತು. ಬಳಿಕ ಅದನ್ನು ತೆರೆಯಲಾಯಿತು.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಫಾರೂಖ್​​ ಅಬ್ದುಲ್ಲಾ ವಿರುದ್ಧ ಚಾರ್ಜ್​ಶೀಟ್​​

ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರದ ಆದೇಶದ ಮೇರೆಗೆ ತನಿಖೆ ನಡೆಸಿದಾಗ, ಆಗಸ್ಟ್ 28, 2021ರಂದು ಜಲಿಯನ್ ವಾಲಾಬಾಗ್‌ನ ಬಾವಿಯಿಂದ ಸುಮಾರು 8.5 ಲಕ್ಷ ರೂಪಾಯಿಯನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ. ಈ ಹಣವನ್ನು ಜಲಿಯನ್​​ವಾಲಾ ಬಾಗ್ ಸ್ಮಾರಕ ಟ್ರಸ್ಟ್‌ನ ಖಾತೆಗೆ ಜಮೆ ಮಾಡಲಾಗಿದೆ. ಇದೀಗ ಕೇಂದ್ರ ಸಂಸ್ಕೃತಿ ಸಚಿವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಬಾವಿಯನ್ನು ಮುಚ್ಚುವಂತೆ ಆದೇಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.