ETV Bharat / bharat

ಶಿವಲಿಂಗಾಪುರಂ ಬಳಿ ಹಳಿ ತಪ್ಪಿದ ಗೂಡ್ಸ್​ ಟ್ರೈನ್​; ರೈಲು ಸಂಚಾರದಲ್ಲಿ ವ್ಯತ್ಯಯ

ಆಂಧ್ರಪ್ರದೇಶದ ಶಿವಲಿಂಗಾಪುರದ ಬಳಿ ಹಳಿ ತಪ್ಪಿದ ರೈಲು- ಯಾವುದೇ ಸಾವು ನೋವಿನ ವರದಿಯಾಗಿಲ್ಲ- ಸ್ಥಳಕ್ಕೆ ಆಗಮಿಸಿದ ರೈಲ್ವೆ ಇಲಾಖೆ ತಂಡದಿಂದ ತನಿಖೆ

ಹಳಿ ತಪ್ಪಿದ ಗೂಡ್ಸ್​ ಟ್ರೈನ್​
ಹಳಿ ತಪ್ಪಿದ ಗೂಡ್ಸ್​ ಟ್ರೈನ್​
author img

By

Published : Feb 2, 2023, 11:09 AM IST

ಕೊರಾಪುಟ್​ (ಒಡಿಶಾ): 11 ಬೋಗಿಗಳ ಗೂಡ್ಸ್​ ರೈಲು ಆಂಧ್ರಪ್ರದೇಶದ ಶಿವಲಿಂಗಾಪುರಂ ಸಮೀಪ ಹಳಿ ತಪ್ಪಿರುವ ಘಟನೆ ನಡೆದಿದೆ. ಗುರುವಾರ ಬೆಳಗಿನಜಾವ ರೈಲು ಹಳಿ ತಪ್ಪಿದ ಪರಿಣಾಮ ಈ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಗೂಡ್ಸ್​ ರೈಲು ಅರಕುನಿಂದ ಕೊಥಾವಲಸ ಕಡೆಗೆ ಸಾಗುತ್ತಿದ್ದಾಗ 2.50ರ ನಸುಕಿನ ಸಮಯದಲ್ಲಿ ಈ ಘಟನೆ ನಡೆದಿದೆ. ರೈಲು ಹಳಿ ತಪ್ಪಿದ ಹಿನ್ನೆಲೆ ಕೊರಾಪುಟ್​ ಮಾರ್ಗವಾಗಿ ತೆರಳುವ ವಿಶಾಖಪಟ್ಟಣ- ಜಗದಲ್ಪುರ್​ ಪ್ಯಾಸೆಂಜರ್​ ರೈಲು ಸಂಚಾರ ರದ್ದುಗೊಂಡಿದೆ.

ಕಿರುಂಡುಲ್​ ನಿಂದ ವಿಶಾಖಪಟ್ಟಣಕ್ಕೆ ಹೋಗುತ್ತಿದ್ದ ಗೂಡ್ಸ್​ ರೈಲು ಅರಕು ಬಳಿಕ ಶಿವಲಿಂಗಾಪುರಂನಲ್ಲಿ ಹಳಿ ತಪ್ಪಿದೆ. ಈ ಅಪಘಾತದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ರಕ್ಷಣಾ ತಂಡ, ತಾಂತ್ರಿಕ ತಂಡ, ಎಲೆಕ್ಟ್ರಿಕಲ್ ವಿಭಾಗ ಮತ್ತು ರೈಲ್ವೆ ಇಲಾಖೆ ತಂಡ ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ್ದು, ಈ ಸಂಬಂಧ ತನಿಖೆ ಶುರು ಮಾಡಿದೆ. ಇನ್ನು, ವಿಶಾಖ ಪಟ್ಟಣಂನಿಂದ ಕೂಡ ರಕ್ಷಣಾ ತಂಡ ಅಪಘಾತದ ಸ್ಥಳಕ್ಕೆ ಧಾವಿಸಿದ್ದು. ಈ ಅಪಘಾತದಿಂದ ಹಾನಿಗೊಳಗಾದ ಹಳಿಗಳನ್ನು ಸರಿಪಡಿಸಿ, ಸಾಧ್ಯವಾದಷ್ಟು ಬೇಗ ರೈಲು ಸೇವೆಗಳನ್ನು ಪುನಾರಂಭಿಸಲು ಪ್ರಯತ್ನಿಸುತ್ತೇವೆ ಎಂದು ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಇದೇ ನಿಲ್ದಾಣದಲ್ಲಿ ಹಳಿ ತಪ್ಪಿದ್ದ ರೈಲು: ಕಳೆದ ತಿಂಗಳು ಕೂಡ ಶಿವಲಿಂಗಪುರಂ ರೈಲು ನಿಲ್ದಾಣದಲ್ಲಿ ಕಿರಂಡುಲ್ ಎಕ್ಸ್‌ಪ್ರೆಸ್ ಹಳಿ ತಪ್ಪಿತ್ತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಜನವರಿ 23ರಂದು ಶಿವಲಿಂಗಪುರಂ ರೈಲು ನಿಲ್ದಾಣದಲ್ಲಿ ವಿಶಾಖಪಟ್ಟಣಂ-ಕಿರಂಡುಲ್ ಎಕ್ಸ್‌ಪ್ರೆಸ್‌ನ ರೈಲು ಹಳಿತಪ್ಪಿತ್ತು. ಘಟನೆ ಕುರಿತು ಮಾತನಾಡಿದ್ದ ರೈಲ್ವೆ ಅಧಿಕಾರಿಗಳು, ಹಳಿ ತಪ್ಪಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದಿದ್ದರು. ಕಳೆದ ಮಾರ್ಚ್​ನಲ್ಲಿಯೂ ಕೂಡ ಕೊರಾಪುಟ್​ ಜಿಲ್ಲೆಯ ಬೆಜಾ ರೈಲ್ವೆ ನಿಲ್ದಾಣದಲ್ಲಿ ಗೂಡ್ಸ್​ ರೈಲಿನ ಆರು ಬೋಗಿಗಳು ಹಳಿ ತಪ್ಪಿದ್ದವು.

ರೈಲು ಹಳಿತಪ್ಪಿದ ಪರುಣಾಮ ಮೂವರ ಸಾವು: ಕಳೆದ ನವೆಂಬರ್​ನಲ್ಲಿ ಒಡಿಶಾದ ಬಾಜ್​ಪುರ್​ ಜಿಲ್ಲೆಯ ಕೋರಯಿ ರೈಲು ನಿಲ್ದಾಣದಲ್ಲಿ ಗೂಡ್ಸ್​​ ರೈಲು ಹಳಿ ತಪ್ಪಿ ಉರುಳಿ ಬಿದ್ದ ಪರಿಣಾಮ ಮೂವರು ಸಾವಪ್ಪಿದ್ದರು. ಡೊಂಗೊಪೋಸೆಯಿಂದ ಛತ್ರಪುರಕ್ಕೆ ಚಲಿಸುತ್ತಿದ್ದ ಗೂಡ್ಸ್​ ರೈಲು ಹಳಿ ತಪ್ಪಿ, ಫ್ಲಾಟ್​ಫಾರ್ಮ್​​ಗೆ ಉರುಳಿ ಬಿದ್ದಿತ್ತು. ಇದರ ಪರಿಣಾಮ ರೈಲಿಗಾಗಿ ಕಾಯುತ್ತಿದ್ದ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದರು. ಇನ್ನು, ಘಟನೆಯಲ್ಲಿ ಹಲವರು ಗಾಯಗೊಂಡ ವರದಿ ಆಗಿತ್ತು. ಈ ಘಟನೆ ಸಂಬಂಧ ಕೂಡ ರೈಲ್ವೆ ಇಲಾಖೆ ತನಿಖೆಗೆ ಮುಂದಾಗಿತ್ತು. ಘಟನೆ ಸಂಬಂಧ ಸಾವನ್ನಪ್ಪಿದವರಿಗೆ ಸಿಎಂ ನವೀನ್​ ಪಟ್ನಾಯಕ್​ ಸಂತಾಪ ಸಲ್ಲಿಸಿದ್ದರು.

ಅಲ್ಲದೇ, ಘಟನೆಯಲ್ಲಿ ಮೃತ ಮೂವರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ನೀಡಲಾಗಿತ್ತು. ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ರೂ ಹಾಗೂ ಸಣ್ಣಪುಟ್ಟದಾಗಿ ಗಾಯಗೊಂಡವರಿಗೆ 25,000 ರೂ. ನೀಡುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ತಿಳಿಸಿದ್ದರು. ಒಡಿಶಾ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಕೂಡ ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು.

ಇದನ್ನೂ ಓದಿ: ಒಡಿಶಾ ಸಚಿವರಿಗೆ ಗುಂಡೇಟು ಪ್ರಕರಣ; ಮರಣೋತ್ತರ ಪರೀಕ್ಷೆ ವರದಿ ಬಹಿರಂಗ, ನಬಾ ಕಿಶೋರ್ ದಾಸ್​ ಹೃದಯಸ್ತಂಭನದಿಂದ ಸಾವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.