ETV Bharat / bharat

ಜಮ್ಮು ಕಾಶ್ಮೀರಕ್ಕೆ ಆದಷ್ಟು ಬೇಗ 4ಜಿ: ಲೆಫ್ಟಿನೆಂಟ್ ಗವರ್ನರ್ - ಜಮ್ಮು ಕಾಶ್ಮೀರದಲ್ಲಿ ಅಂತರ್ಜಾಲ ಸೇವೆಯ ಸುದ್ದಿ

ಜಮ್ಮು ಕಾಶ್ಮೀರದಲ್ಲಿ ಪ್ರಸ್ತುತ ಉಧಾಂಪುರ್ ಮತ್ತು ಗಂದೇರ್​ಬಾಲ್ ಸೇರಿದಂತೆ ಎರಡು ಜಿಲ್ಲೆಗಳಲ್ಲಿ ಮಾತ್ರ 4ಜಿ ಇಂಟರ್ನೆಟ್ ಸೇವೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ.

'Good news' soon on 4G internet services in J&K
ಲೆಫ್ಟಿನೆಂಟ್ ಗವರ್ನರ್
author img

By

Published : Jan 7, 2021, 7:54 PM IST

ಶ್ರೀನಗರ (ಜಮ್ಮು ಕಾಶ್ಮೀರ): ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಮತ್ತೆ 4ಜಿ ಅಂತರ್ಜಾಲ ಸೇವೆಗಳನ್ನು ಪುನರ್​ ಸ್ಥಾಪನೆ ಮಾಡಲು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಗುರುವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಮನೋಜ್ ಸಿನ್ಹಾ, ಇಲ್ಲಿ 4ಜಿ ಸೇವೆಗಳನ್ನು ಮತ್ತೆ ಆರಂಭಿಸಲು ಸಮಿತಿ ಪರಿಶೀಲನೆ ನಡೆಸುತ್ತಿದೆ. ಪ್ರಸ್ತುತ, ಉಧಾಂಪುರ್ ಮತ್ತು ಗಂದೇರ್​ಬಾಲ್ ಸೇರಿದಂತೆ ಎರಡು ಜಿಲ್ಲೆಗಳಲ್ಲಿ ಮಾತ್ರ 4ಜಿ ಇಂಟರ್ನೆಟ್ ಸೇವೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜೀವಿಸುವ ಹಕ್ಕಿಗಿಂತ ಧಾರ್ಮಿಕ ಹಕ್ಕು ದೊಡ್ಡದಲ್ಲ: ಮದ್ರಾಸ್‌ ಹೈಕೋರ್ಟ್‌

ಈಗ 2ಜಿ ಸೇವೆಗಳನ್ನು ಮಾತ್ರ ನೀಡಲಾಗುತ್ತಿದೆ. ಇದರಿಂದಾಗುವ ಸಮಸ್ಯೆಯನ್ನು ಪರಿಶೀಲನೆ ನಡೆಸಲು ಸಮಿತಿಯಿದ್ದು, ಸಮಿತಿ ವರದಿ ನೀಡಿದ ನಂತರ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಬರಲಿದೆ ಎಂದು ನಾನು ಆಶಿಸುತ್ತೇನೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಲು ಸಂವಿಧಾನಕ್ಕೆ ತಿದ್ದುಪಡಿ ಮಾಡುವ ವೇಳೆ ಮುಂಜಾಗ್ರತಾ ಕ್ರಮವಾಗಿ ಇಂಟರ್​​​ನೆಟ್​​ ಸೇವೆಗಳನ್ನು ರದ್ದು ಮಾಡಲಾಗಿತ್ತು. ಜನವರಿ 2020ರಲ್ಲಿ 2ಜಿ ಸೇವೆಗಳನ್ನು ನೀಡಲಾಗಿದ್ದು, ಕೇವಲ ಎರಡು ಜಿಲ್ಲೆಗಳಲ್ಲಿ 4ಜಿ ಇಂಟರ್​ನೆಟ್​ ಸೇವೆ ಒದಗಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.