ನವದೆಹಲಿ: ಅಂತಾರಾಷ್ಟ್ರೀಯ ಬೆಲೆಬಾಳುವ ಲೋಹದ ಬೆಲೆ ಮತ್ತು ರೂಪಾಯಿ ಮೌಲ್ಯದ ಕುಸಿತದ ನಡುವೆ ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ 10 ಗ್ರಾಂ ಚಿನ್ನಕ್ಕೆ 124 ರೂಪಾಯಿ ಇಳಿಕೆಯಾಗಿ 46,917 ರೂಪಾಯಿಗಳಿಗೆ ತಲುಪಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟಿಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಬೆಲೆಬಾಳುವ ಲೋಹವು 10 ಗ್ರಾಂಗೆ 47,041 ರೂ ಹಾಗೂ ಬೆಳ್ಳಿ ಪ್ರತಿ ಕಿಲೋಗ್ರಾಂಗೆ ರೂ. 66,491 ರಿಂದ ರೂ. 18 ರಷ್ಟು ಕಡಿಮೆಯಾಗಿ ರೂ. 66,473 ಕ್ಕೆ ತಲುಪಿದೆ.
ರೂಪಾಯಿ ಮೌಲ್ಯದ ಕುಸಿತದಿಂದ ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ರೂ. 124 ರಷ್ಟು ಕುಸಿದಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ತಿಳಿಸಿದ್ದಾರೆ.
ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ 9 ಪೈಸೆ ಗಳಿಕೆ ಮತ್ತು ಯುಎಸ್ ಡಾಲರ್ ಎದುರು 74.33 ಕ್ಕೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ 1,808 ಡಾಲರ್‌ಗಳಷ್ಟು ಚಿನ್ನದ ವಹಿವಾಟು ಮತ್ತು ಪ್ರತಿ ಔನ್ಸ್‌ಗೆ 25.47 ಡಾಲರ್ ಬೆಳ್ಳಿ ತಲುಪಿದೆ.
ಓದಿ: Pegasus raw... ನಾಳೆ ಪ್ರತಿಪಕ್ಷಗಳ ಸಭೆ: ಆ.4ಕ್ಕೆ ಕೇಂದ್ರ ಕ್ಯಾಬಿನೆಟ್ ಮೀಟ್ ನಿಗದಿ