ಕೋಲ್ಕತಾ: ಕಾಳಿಮಾತೆ ದೇವತೆಯ ಕುರಿತಾಗಿ ಸಂಸದೆ ಮಹುವಾ ಮೊಯಿತ್ರಾ ನೀಡಿದ ಹೇಳಿಕೆಯನ್ನು ಅವರದೇ ಪಕ್ಷ ತೃಣಮೂಲ ಕಾಂಗ್ರೆಸ್ ಖಂಡಿಸಿದ ನಂತರ, ಮೊಯಿತ್ರಾ ಪಕ್ಷದ ಟ್ವಿಟರ್ ಹ್ಯಾಂಡಲ್ ಅನ್ನು ಅನ್ ಫಾಲೋ ಮಾಡಿದ್ದಾರೆ.
ಆದರೆ, ಸದ್ಯ ಮಹುವಾ ಟ್ವಿಟರ್ನಲ್ಲಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಫಾಲೋ ಮಾಡುತ್ತಿದ್ದು, ಪಕ್ಷದ ಹ್ಯಾಂಡಲ್ ಅನ್ನು ಅನ್ ಫಾಲೋ ಮಾಡಿದ್ದಾರೆ.
'ಕಾಲಿ' ಸಾಕ್ಷ್ಯಚಿತ್ರದ ಪೋಸ್ಟರ್ ಬಗ್ಗೆ ದೇಶಾದ್ಯಂತ ಸದ್ಯ ವಿವಾದ ಏರ್ಪಟ್ಟಿದೆ. ಈ ಬಗ್ಗೆ ತಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದ ಪ್ರಶ್ನೆಗೆ, "ಕಾಳಿಮಾತೆ ನನ್ನ ಪಾಲಿಗೆ ಮಾಂಸ ತಿನ್ನುವ, ಅಲ್ಕೊಹಾಲ್ ಸ್ವೀಕರಿಸುವ ದೇವತೆ. ನಿಮ್ಮ ದೇವರನ್ನು ಕಲ್ಪನೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಿಮಗಿದೆ." ಎಂದು ಹೇಳಿದ್ದರು. ಈ ಹೇಳಿಕೆಯು ಈಗ ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದೆ.
ಇದನ್ನು ಓದಿ:ಕಾಳಿ' ಚಿತ್ರದ ವಿವಾದಾತ್ಮಕ ಪೋಸ್ಟರ್: ಲಖನೌದಲ್ಲಿ ನಿರ್ದೇಶಕಿ ವಿರುದ್ಧ ಎಫ್‌ಐಆರ್
ಮಹುವಾ ಮೊಯಿತ್ರಾ ಅವರ ಹೇಳಿಕೆಯನ್ನು ಅವರ ಸ್ವಂತ ಪಕ್ಷವೇ ಅನುಮೋದಿಸಲಿಲ್ಲ. ಟಿಎಂಸಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ, "ದೇವತೆ ಕಾಳಿಮಾತೆಯ ಬಗ್ಗೆ ಸಂಸದೆ ಮಹುವಾ ಮೊಯಿತ್ರಾ ಅವರ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿವೆ. ಆ ಹೇಳಿಕೆಗಳನ್ನು ಪಕ್ಷವು ಯಾವುದೇ ರೀತಿಯಲ್ಲಿಯೂ ಅನುಮೋದಿಸುವುದಿಲ್ಲ." ಎಂದು ಪಕ್ಷ ಸ್ಪಷ್ಟಪಡಿಸಿದೆ.
ಇದನ್ನು ಓದಿ:LPG ಬೆಲೆ ಏರಿಕೆ: ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ