ETV Bharat / bharat

ಹಳಿ ತಪ್ಪಿದ ರಾಜಧಾನಿ ಎಕ್ಸ್​ಪ್ರೆಸ್​​​​: ರತ್ನಗಿರಿಯಲ್ಲಿ ಅವಘಡ

author img

By

Published : Jun 26, 2021, 9:35 AM IST

Updated : Jun 26, 2021, 9:52 AM IST

ರಾಜಧಾನಿ ಎಕ್ಸ್​ಪ್ರೆಸ್​ ಸುರಂಗವೊಂದರ ಬಳಿ ಹಳಿ ತಪ್ಪಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Goa-bound Rajdhani Express derails inside tunnel near Ratnagiri; no casualties
ಹಳಿ ತಪ್ಪಿದ ರಾಜಧಾನಿ ಎಕ್ಸ್​ಪ್ರೆಸ್​​​​: ಮಹಾರಾಷ್ಟ್ರದ ರತ್ನಗಿರಿಯಲ್ಲಿ ಅವಘಡ

ಮುಂಬೈ(ಮಹಾರಾಷ್ಟ್ರ): ನವದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಗೋವಾ ಕಡೆಗೆ ಹೊರಟಿದ್ದ ರಾಜಧಾನಿ ಎಕ್ಸ್​ಪ್ರೆಸ್ ಮಹಾರಾಷ್ಟ್ರದ ರತ್ನಗಿರಿ ಬಳಿಯ ಸುರಂಗವೊಂದರ ಸಮೀಪ ಹಳಿ ತಪ್ಪಿದೆ.

ಹಳಿಯ ಮೇಲೆ ಬಂಡೆಗಳು ಉರುಳಿದ್ದ ಪರಿಣಾಮ ರೈಲು ಹಳಿ ತಪ್ಪಿ, ಹಳಿಯಿಂದ ಹೊರಗೆ ಚಲಿಸಿದೆ. ಕರ್ಬುಡೆ ಸುರಂಗದ ಬಳಿ ರೈಲು ಹಳಿ ತಪ್ಪಿದೆ ಎಂದು ಪಿಟಿಐಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಳಿ ತಪ್ಪಿದ ರಾಜಧಾನಿ ಎಕ್ಸ್​ಪ್ರೆಸ್

ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಅಪಘಾತ ನಡೆದ ಸ್ಥಳ ಮುಂಬೈನಿಂದ 325 ಕಿಲೋಮೀಟರ್ ದೂರದಲ್ಲಿದೆ.

ಇದನ್ನೂ ಓದಿ: ಮಾಸ್ಕ್​​ ಹಾಕದ ಗ್ರಾಹಕನ ಮೇಲೆ ಗುಂಡು ಹಾರಿಸಿದ ಬ್ಯಾಂಕ್ ಭದ್ರತಾ ಸಿಬ್ಬಂದಿ!

Last Updated : Jun 26, 2021, 9:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.