Hyundai Motor Production: ದಕ್ಷಿಣ ಕೊರಿಯಾ ದೇಶದ ದೈತ್ಯ ವಾಹನ ತಯಾರಕ ಹುಂಡೈ ಜಾಗತಿಕವಾಗಿ 10 ಕೋಟಿ ವಾಹನಗಳನ್ನು ತಯಾರಿಸಿದೆ ಎಂದು ಘೋಷಿಸಿದೆ. ಕಂಪನಿ ಸ್ಥಾಪನೆಯಾಗಿ 57 ವರ್ಷಗಳಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಇದರೊಂದಿಗೆ, ಹ್ಯುಂಡೈ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆಟೋಮೋಟಿವ್ ಕಂಪನಿಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹುಂಡೈ ಮೋಟಾರ್ ಸಿಯೋಲ್‌ನಿಂದ ಆಗ್ನೇಯಕ್ಕೆ ಸುಮಾರು 300 ಕಿ.ಮೀ ದೂರದಲ್ಲಿರುವ ಉಲ್ಸಾನ್‌ನಲ್ಲಿರುವ ತನ್ನ ಘಟಕದಲ್ಲಿ ಈ ಸಾಧನೆಯ ಸಂಭ್ರಮಾಚರಿಸಿತು. ಅಲ್ಲಿ ಕಂಪನಿಯು ದಕ್ಷಿಣ ಕೊರಿಯಾದ ಮೊದಲ ಮಾಸ್-ಪ್ರೊಡ್ಯುಸುಡ್ ಇಂಡಿಪೆಂಡೆಂಟ್ ಮಾಡೆಲ್ ಪೋನಿ ಅನ್ನು 1975ರಲ್ಲಿ ಉತ್ಪಾದಿಸಿತ್ತು. ಇದೀಗ 100 ಮಿಲಿಯನ್ ಮತ್ತು ಮೊದಲ ವಾಹನವಾದ Ioniq 5 ಅನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಿದೆ ಎಂದು ಹೇಳಿದೆ.
ಹುಂಡೈ ತನ್ನ ಮೊದಲ Ioniq 5 ಮಾದರಿಯನ್ನು 10 ಕೋಟಿಯ ವಾಹನವಾಗಿ ಗ್ರಾಹಕರಿಗೆ ಹಸ್ತಾಂತರಿಸಿದೆ. ನಮ್ಮ ಜಾಗತಿಕ ವಾಹನ ಉತ್ಪಾದನೆಯು 100 ಮಿಲಿಯನ್ (10 ಕೋಟಿ) ಗಡಿ ದಾಟಿರುವುದು ಗಮನಾರ್ಹ. ಇದು ಗ್ರಾಹಕರ ಬೆಂಬಲದಿಂದ ಮಾತ್ರ ಸಾಧ್ಯವಾಗಿದೆ. ಪ್ರಪಂಚಾದ್ಯಂತದ ನಮ್ಮ ಗ್ರಾಹಕರಿಗೆ ಧನ್ಯವಾದಗಳು. ಸವಾಲುಗಳನ್ನು ಧೈರ್ಯದಿಂದ ಎದುರಿಸುವುದು ಮತ್ತು ಸೃಜನಶೀಲತೆಯನ್ನು ಉಳಿಸಿಕೊಳ್ಳುವುದೇ ನಮ್ಮ ಬೆಳವಣಿಗೆಗೆ ಕಾರಣ ಎಂದು ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಜೆಹೂನ್ ಚಾಂಗ್ ಹೇಳಿದ್ದಾರೆ.
"ಹುಂಡೈ ಮೋಟಾರ್ಸ್‌ನ ಪ್ರತಿಯೊಬ್ಬ ಉದ್ಯೋಗಿಯೂ ಈ ಮೈಲಿಗಲ್ಲು ತಲುಪಲು ಶ್ರಮಿಸಿದ್ದಾರೆ. ನಮ್ಮ ಎಲೆಕ್ಟ್ರಿಕ್ ಕಾರುಗಳ ಪ್ರಗತಿಗೆ ಇದು ಮೊದಲ ಹೆಜ್ಜೆ'' ಎಂದು ದೇಶೀಯ ಮಾರಾಟ ವಿಭಾಗದ ಮುಖ್ಯಸ್ಥ ಮತ್ತು ಮುಖ್ಯ ಸುರಕ್ಷತಾ ಅಧಿಕಾರಿ ಡಾಂಗ್ ಸಿಯೋಕ್ ತಿಳಿಸಿದ್ದಾರೆ.
ಉಲ್ಸಾನ್ ಸ್ಥಾವರ 1968ರಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದೆ. ಕೊರಿಯನ್ ಆಟೋಮೊಬೈಲ್ ಉದ್ಯಮದ ಜನ್ಮಸ್ಥಳವೆಂದೂ ಇದನ್ನು ಪರಿಗಣಿಸಲಾಗಿದೆ. ದೇಶದ ಮೊದಲ ಬೃಹತ್ ಕಾರು 'ದಿ ಪೋನಿ' ಅನ್ನು 1975ರಲ್ಲಿ ಇಲ್ಲಿಯೇ ತಯಾರಿಸಲಾಗಿದೆ. ಪ್ರಸ್ತುತ, ಉಲ್ಸಾನ್ ಸ್ಥಾವರವು ಎಲೆಕ್ಟ್ರಿಕ್ ಕಾರುಗಳ ಉತ್ಪಾದನಾ ಕೇಂದ್ರವಾಗಿದೆ. ಇದಕ್ಕಾಗಿ ಹ್ಯುಂಡೈ ವಿಶೇಷ ಘಟಕವನ್ನು ಸ್ಥಾಪಿಸಿದೆ. ಕಂಪನಿಯು ಪ್ರೀಮಿಯಂ ಬ್ರ್ಯಾಂಡ್ ಕಾರುಗಳನ್ನು ಜೆನೆಸಿಸ್ ಹೆಸರಿನಲ್ಲಿ ತಯಾರಿಸುತ್ತದೆ. ಹೆಚ್ಚಿನ ಕಾರ್ಯಕ್ಷಮತೆಯ ಬ್ರ್ಯಾಂಡ್-N ಮತ್ತು IONIC 5 ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು e-GMP ಪ್ಲಾಟ್‌ಫಾರ್ಮ್‌ನಲ್ಲಿ ಉತ್ಪಾದಿಸುತ್ತದೆ. ಟರ್ಕಿ, ಭಾರತ, USA ಮತ್ತು ಝೆಕ್ ರಿಪಬ್ಲಿಕ್ನಲ್ಲಿ ಹುಂಡೈನ ಉತ್ಪಾದನಾ ಘಟಕಗಳಿವೆ.
ಇದನ್ನೂ ಓದಿ: ವೋಡಾಫೋನ್-ಐಡಿಯಾ ಜೊತೆ ಮತ್ತೆ ಕೈಜೋಡಿಸಿದ ನೋಕಿಯಾ - Vodafone Idea Nokia Deal