ETV Bharat / state

ಸರ್ಕಾರದ ಪತನಕ್ಕೆ 1,200 ಕೋಟಿ ರೆಡಿ ಮಾಡಿರುವ ಆರೋಪದ ಬಗ್ಗೆ ಇಡಿಗೆ ದೂರು ನೀಡಲು ಚರ್ಚೆ: ಡಿಕೆಶಿ - D K Shivakumar - D K SHIVAKUMAR

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವನ್ನು ಬೀಳಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿಂದು ಪ್ರತಿಕ್ರಿಯೆ ನೀಡಿದ್ದಾರೆ.

DCM DK Shivakumar React On Attempt To Topple The Congress Government
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (ETV Bharat)
author img

By ETV Bharat Karnataka Team

Published : Sep 30, 2024, 12:56 PM IST

ಬೆಂಗಳೂರು: ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು 1,200 ಕೋಟಿ ರೂಪಾಯಿ ರೆಡಿ ಮಾಡ್ಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ಇಡಿ ತನಿಖೆಗೆ ದೂರು ನೀಡುವ ಸಂಬಂಧ ಚರ್ಚೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸದಾಶಿವನಗರದಲ್ಲಿ ಇಂದು ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು 1,200 ಕೋಟಿ ರೆಡಿ ಮಾಡ್ಕೊಂಡಿದ್ದಾರೆ ಎಂಬ ಯತ್ನಾಳ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇದರ ಮಾಹಿತಿ ನಮಗೂ ಇದೆ. ಈ ಬಗ್ಗೆ ಇವತ್ತು ಕಾಂಗ್ರೆಸ್ ಲೀಗಲ್ ಟೀಮ್ ಮೀಟಿಂಗ್ ಕರೆದಿದ್ದೇನೆ. ಈ ಮಾಹಿತಿಯನ್ನು ಹೈಕಮಾಂಡ್ ನಾಯಕರಿಗೂ ತಿಳಿಸಿದ್ದೇನೆ. ಇದು ಇಡಿ ತನಿಖೆಯ ವ್ಯಾಪ್ತಿಗೆ ಬರುವ ವಿಚಾರ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (ETV Bharat)

ಎಡಿಜಿಪಿ ಚಂದ್ರಶೇಖರ್ ಕೆಪಿಸಿಸಿ ಕಚೇರಿಯಲ್ಲಿ ಪತ್ರ ಬರೆದಿದ್ದಾರೆ ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಮೋದಿ ಅವರು ಒಳ್ಳೆಯ ಸಚಿವ ಸ್ಥಾನ ಕೊಟ್ಟಿದ್ದಾರೆ. ಯೋಗಕ್ಕಿಂತ ಯೋಗಕ್ಷೇಮ ಇಂಪಾರ್ಟೆಂಟ್. ಅದನ್ನು ಬಿಟ್ಟು ರಾಜಕಾರಣ ಮಾಡಬಾರದು. ಅವರ ಕಾಲದಲ್ಲಿ ರಾಜ್ಯದಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕು‌. ಅದನ್ನು ಬಿಟ್ಟು ಇದನ್ನು ಮಾಡಬಾರದು‌. 136 ಜನ ಶಾಸಕರು ಒಗ್ಗಟ್ಟಾಗಿದ್ದೇವೆ‌. ಯಾವ ಅಧಿಕಾರಿಗಳೂ ಸಹ ಬೇಕಾಗಿಲ್ಲ ಎಂದರು.

ಮಳೆಗಾಲ ಕಡಿಮೆಯಾಗ್ತಿದೆ. ತುಮಕೂರು, ಬೆಂಗಳೂರು, ಗ್ರಾಮಾಂತರ ಹಾಗೂ ರಾಮನಗರದಲ್ಲಿ ನೀರಿನ ಕೊರತೆ ಇದೆ. ತುಮಕೂರು ಹಾಗೂ ಹಾಸನದಲ್ಲಿ ಜಮೀನು ಹ್ಯಾಂಡ್‌ವೋವರ್ ಬಗ್ಗೆ ಚರ್ಚೆ ನಡೆದಿದೆ. ಮುಖ್ಯಮಂತ್ರಿಗಳ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಒಂದು ಪ್ಲಾನ್ ಮಾಡಬೇಕು. ತುಮಕೂರಿಗೆ ನೀರು ಹರಿಸಬೇಕು. ನಾನು ಮತ್ತು ಪರಮೇಶ್ವರ್ ಎತ್ತಿ‌ನಹೊಳೆ ವೈಮಾನಿಕ ಪರಿವೀಕ್ಷಣೆ ಮಾಡಬೇಕು ಅಂತ ತೀರ್ಮಾನಿಸಿದ್ದೇವೆ ಎಂದರು.

ಸ್ಪಾಟ್ ವಿಸಿಟ್ ಮಾಡಬೇಕು. ದಸರಾ ನಂತ್ರ ಹೋಗಬೇಕು ಅಂದುಕೊಂಡಿದ್ದೇವೆ. ಎತ್ತಿನಹೊಳೆ ಬಗ್ಗೆ ಏನು ಮಾತು ಕೊಟ್ಟಿದ್ದೇವೋ ಅದನ್ನು ಮಾಡಬೇಕು. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ರಾಜಕೀಯ ಮಾಡೇ ಮಾಡುತ್ತೇವೆ. ಇದರ ಜೊತೆ ಜನರಿಗೆ ಒಳ್ಳೆಯ ಕೆಲಸವನ್ನೂ ಮಾಡಬೇಕು. ಮೀಟರ್ ಓಡುತ್ತಿರುತ್ತದೆ, ಅಭಿವೃದ್ಧಿ ಕೂಡ ಮಾಡಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ಬಿಜೆಪಿ ಅತೃಪ್ತರ ಸಭೆ: 'ಹೊಸದೇನಲ್ಲ, ಸವಾಲು ನೋಡಿ ಬೆಳೆದಿದ್ದೇನೆ'- ವಿಜಯೇಂದ್ರ - B Y Vijayendra

ETV Bharat Logo

Copyright © 2024 Ushodaya Enterprises Pvt. Ltd., All Rights Reserved.