ಚಾಮರಾಜನಗರ: ದೇವರ ಮೆರವಣಿಗೆಯ ವೇಳೆ ಡಿಜೆ ಸೌಂಡ್ಸ್ಗೆ ಕುಣಿಯುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಮೂಡ್ನಾಕೂಡು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಮೂಡ್ನಾಕೂಡು ಗ್ರಾಮದಲ್ಲಿ ಬಸವೇಶ್ವರ ದೇವರ ಉತ್ಸವದ ವೇಳೆ ಡಿಜೆಗೆ ಡ್ಯಾನ್ಸ್ ಮಾಡುತ್ತಿದ್ದ ಬಾಬು(42) ಎಂಬವರು ನೋಡನೋಡುತ್ತಲೇ ಕುಸಿದು ಬಿದ್ದರು. ಘಟನೆಯ ದೃಶ್ಯ ಸ್ಥಳದಲ್ಲಿದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ದಾವಣಗೆರೆ: ಸಾಂಬಾರ್ ಮೈಮೇಲೆ ಬಿದ್ದು ಗಾಯಗೊಂಡ ಬಾಲಕ ಸಾವು - Sambar Fell On Boy