ETV Bharat / bharat

ಚಂಡೀಗಢ: ಯುವತಿ ಒತ್ತೆಯಾಳಾಗಿರಿಸಿ ನಾಲ್ಕು ದಿನ ಸಾಮೂಹಿಕ ಅತ್ಯಾಚಾರ! - ಆರೋಪಿಗಳು ಪಂಜಾಬ್ ಮೂಲದವರು

ದುರುಳರ ತಂಡವೊಂದು ಮನೆಯೊಂದರಲ್ಲಿ ಯುವತಿಯನ್ನು ಒತ್ತೆಯಾಳಾಗಿರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

rape case in Chandigarh
ಚಂಡೀಗಢದಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ
author img

By

Published : Dec 27, 2022, 3:48 PM IST

ಚಂಡೀಗಢ(ಪಂಜಾಬ್​): ಹಿಮಾಚಲ ಪ್ರದೇಶದ 26 ವರ್ಷದ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಚಂಡೀಗಢದ ಸೆಕ್ಟರ್ 39ರಲ್ಲಿ ನಡೆದಿದೆ. ಕೆಲಸದ ನಿಮಿತ್ತ ಯುವತಿ ಪಂಜಾಬ್​ನ ಮೊಹಾಲಿಗೆ ಬಂದಿದ್ದು, ಸ್ನೇಹಿತೆಯರೊಂದಿಗೆ ಶಾಹಿಮಾಜ್ರಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಕೆಲ ಸಮಯದ ನಂತರ ಸನ್ನಿ ಎಂಬಾತ ಈಕೆಯನ್ನು ತನ್ನ ಸ್ನೇಹದ ಬಲೆಯಲ್ಲಿ ಬೀಳಿಸಿಕೊಂಡಿದ್ದಾನೆ. ಇವಳೊಂದಿಗೆ ಸಂಪರ್ಕದಲ್ಲಿದ್ದ ಆಕೆಗೆ ನಗರ ತೋರಿಸುವ ನೆಪದಲ್ಲಿ ಸೆಕ್ಟರ್ 39ರ ಮನೆಗೆ ಕರೆದೊಯ್ದಿದ್ದಾನೆ.

ಅಲ್ಲಿಗೆ ತನ್ನ ಗೆಳೆಯ ಪರ್ವಿಂದರ್‌ ಎಂಬಾತನನ್ನು ಕರೆಸಿ ಆಕೆಯ ಮೇಲೆ ಈ ಇಬ್ಬರು ಆರೋಪಿಗಳು ಅತ್ಯಾಚಾರವೆಸಗಿದ್ದಾರೆ. ಇದಾದ ಬಳಿಕ ಕಾಮುಕರು ನಾಲ್ಕು ದಿನ ಸಂತ್ರಸ್ತೆಯನ್ನು ಕೊಠಡಿಯಲ್ಲಿಯೇ ಒತ್ತೆಯಾಳಾಗಿರಿಸಿ ಮತ್ತೆ ಅತ್ಯಾಚಾರವೆಸಗಿದ್ದಾರೆ. ಇದರಿಂದ ಹೇಗೋ ಆರೋಪಿಗಳ ಕಣ್ತಪ್ಪಿಸಿ ಯುವತಿ ಹತ್ತಿರದ ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದಾಳೆ. ಇದರ ಬೆನ್ನಲ್ಲೇ ಪೊಲೀಸರು ದಾಳಿ ನಡೆಸಿ ಪರ್ವಿಂದರ್‌ನನ್ನು ಬಂಧಿಸಿದ್ದಾರೆ. ಮುಖ್ಯ ಆರೋಪಿ ಸನ್ನಿ ತಪ್ಪಿಸಿಕೊಂಡಿದ್ದಾನೆ. ಇಬ್ಬರು ಆರೋಪಿಗಳು ಪಂಜಾಬ್ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆಕೆಯ ಕುಟುಂಬದವರಿಗೂ ನಡೆದಿರುವ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ. ಪೊಲೀಸರು ತಲೆಮರೆಸಿಕೊಂಡಿರುವ ಸನ್ನಿಯ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.