ETV Bharat / bharat

ವಿಮಾನದಲ್ಲಿ ನಟಿಯೊಂದಿಗೆ ಅಸಭ್ಯ ವರ್ತನೆ: ಉದ್ಯಮಿ ಬಂಧನ - ಮುಂಬೈ ಪೊಲೀಸ್

ಗಾಜಿಯಾಬಾದ್ ಮೂಲದ ಉದ್ಯಮಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದು, ನಟಿಯೋರ್ವಳು ನೀಡಿದ ದೂರಿನ ತನಿಖೆಯನ್ನು ನಡೆಸುತ್ತಿದ್ದಾರೆ.

Ghaziabad businessman sent to custody for molesting actress on flight
ವಿಮಾನದಲ್ಲಿ ನಟಿಯೊಂದಿಗೆ ಅಸಭ್ಯ ವರ್ತನೆ: ಉದ್ಯಮಿ ಬಂಧನ
author img

By

Published : Oct 20, 2021, 2:33 AM IST

ಮುಂಬೈ, ಮಹಾರಾಷ್ಟ್ರ: ನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಗಾಜಿಯಾಬಾದ್ ಮೂಲದ ಉದ್ಯಮಿಯೊಬ್ಬನನ್ನು ಬಂಧಿಸಿ, ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ನಟಿಯು ವಿಮಾನದಲ್ಲಿ ದೆಹಲಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಉದ್ಯಮಿ ಅಸಭ್ಯವಾಗಿ ವರ್ತಿಸಿದ್ದಾನೆ. ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದಾಗ ಮೇಲಿದ್ದ ಬ್ಯಾಗ್ ತೆಗೆದುಕೊಳ್ಳಲು ನಟಿ ಯತ್ನಿಸಿದಾಗ ಉದ್ಯಮಿ ಅಸಭ್ಯವಾಗಿ ವರ್ತಿಸಿದ್ದಾನೆ.

ಈ ವೇಳೆ ನಟಿ ಅಸಮಾಧಾನ ವ್ಯಕ್ತಪಡಿಸಿದ್ದು, ಅಲ್ಲಿಯೇ ಇದ್ದ ವಿಮಾನ ಸಿಬ್ಬಂದಿಗೆ ದೂರು ನೀಡಿದ್ದಾಳೆ. ಸ್ನೇಹಿತನೆಂದು ತಿಳಿದು ತಪ್ಪಾಗಿ ವರ್ತಿಸಿದ್ದಾಗಿ ಉದ್ಯಮಿ ಹೇಳಿದ್ದು, ನಟಿಯ ಕ್ಷಮೆ ಕೇಳಿದ್ದಾನೆ.

ವಿಮಾನ ಸಿಬ್ಬಂದಿ ದೂರನ್ನು ಸಹರಾ ಏರ್​ಪೋರ್ಟ್​ ಪೊಲೀಸ್ ಸ್ಟೇಷನ್​ಗೆ ನೀಡಿದ್ದು, ಪೊಲೀಸರು ಠಾಣೆಯಲ್ಲಿ ದೂರು ದಾಖಲು ಮಾಡಿಕೊಂಡು ಉದ್ಯಮಿಯನ್ನು ಕೋರ್ಟ್​ ಮುಂದೆ ಹಾಜರುಪಡಿಸಿದ್ದಾರೆ.

ನಂತರ ಕೋರ್ಟ್ ಅನುಮತಿಯಂತೆ, ಈಗ ಪೊಲೀಸ್​ ಕಸ್ಟಡಿಯಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹುಷಾರ್​​... 15 - 25 ಸಾವಿರ ರೂಪಾಯಿ ಕೊಟ್ರೆ ಇಲ್ಲಿ ಸಿಗುತ್ತೆ ಕಾಲ್​, ಚಾಟ್​ ಡೀಟೇಲ್ಸ್​.. ನಕಲಿ ಸಂಸ್ಥೆಗಳ ಬೆನ್ನಟ್ಟಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.