ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಡಿಸೆಂಬರ್ 9ರಿಂದ 14ರವರೆಗೆ ಗಲ್ಫ್ ರಾಷ್ಟ್ರಗಳಿಗೆ ತೆರಳಿದ್ದಾರೆ ಎಂದು ಭಾರತೀಯ ಸೇನೆ ಅಧಿಕೃತ ಮಾಹಿತಿ ನೀಡಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹಾಗೂ ಸೌದಿ ಅರೇಬಿಯಾಗೆ ಎಂ.ಎಂ.ನರವಾಣೆ ತೆರಳಲಿದ್ದು, ಭಾರತ ಮತ್ತು ಆ ರಾಷ್ಟ್ರಗಳ ನಡುವಿನ ರಕ್ಷಣಾ ಸಂಬಂಧಗಳ ಕುರಿತು ಚರ್ಚಿಸಲಾಗುತ್ತದೆ ಎಂದು ರಕ್ಷಣಾ ಇಲಾಖೆ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಇರಾನ್ಗೆ ಭಯಪಟ್ಟಿತಾ ಅಮೆರಿಕ?: ಮಧ್ಯಪ್ರಾಚ್ಯದಿಂದ ಸೇನೆ ಹಿಂಪಡೆತಕ್ಕೆ ಸಿದ್ಧತೆ
ಡಿಸೆಂಬರ್ 9 ಹಾಗೂ 10ರಂದು ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಭೇಟಿ ನೀಡಲಿರುವ ಎಂ.ಎಂ.ನರವಾಣೆ, ಅಲ್ಲಿನ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ವೇಳೆ ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಸಹಕಾರ ಸಂಬಂಧ ಮಾತುಕತೆ ನಡೆಸಲಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನಂತರ ಸೌದಿ ಅರೇಬಿಯಾಗೆ ಡಿಸೆಂಬರ್ 13, 14ರಂದು ಭೇಟಿ ನೀಡಲಿರುವ ಎಂ.ಎಂ.ನರವಾಣೆ, ರಕ್ಷಣಾ ಸಂಬಂಧಿ ಮಾತುಕತೆ ಹಾಗೂ ಇತರ ಸಹಕಾರದ ಬಗ್ಗೆ ಅಲ್ಲಿನ ಉನ್ನತಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.