ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ದರ ಸತತ ಮೂರು ದಿನಗಳ ಕಾಲ ಏರಿಕೆ ಕಂಡ ಬಳಿಕ ಇಂದು ಮತ್ತೆ ಬೆಲೆ ಏರಿಕೆಯಾಗಿದೆ. ಪೆಟ್ರೋಲ್, ಡೀಸೆಲ್ ದರ ಕ್ರಮವಾಗಿ 29 ಪೈಸೆ ಮತ್ತು 35 ಪೈಸೆ ಹೆಚ್ಚಳವಾಗಿದೆ.
ದೆಹಲಿಯಲ್ಲಿ, ಪೆಟ್ರೋಲ್ ಲೀಟರ್‌ಗೆ 92.34 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 82.95ಕ್ಕೆ ಏರಿಕೆ ಕಂಡಿದೆ. ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶುಕ್ರವಾರ ಹೆಚ್ಚಾಗಿದೆ. ಆದರೆ ಆಯಾ ರಾಜ್ಯಗಳಲ್ಲಿನ ಸ್ಥಳೀಯ ಸುಂಕದ ಮಟ್ಟವನ್ನು ಅವಲಂಬಿಸಿ ಅದರ ಪ್ರಮಾಣವು ಬದಲಾಗುತ್ತದೆ.
ಮುಂಬೈನಲ್ಲಿ, ತೈಲ ಮಾರುಕಟ್ಟೆ ಕಂಪನಿಗಳ ಬೆಲೆ ಅಧಿಸೂಚನೆಯ ಪ್ರಕಾರ ಪೆಟ್ರೋಲ್ ಈಗ ಲೀಟರ್‌ಗೆ ಸುಮಾರು 98.65 ರೂ. ಮತ್ತು ಡೀಸೆಲ್ ಲೀಟರ್ 90.11 ರೂ.ಆಗಿದೆ.
ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವು ಸ್ಥಳಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 100 ರೂ. ದಾಟಿದೆ.
ಸ್ಥಳ | ಪೆಟ್ರೋಲ್ (ಲೀ.ಬೆಲೆ) | ಡೀಸೆಲ್ |
ಬೆಂಗಳೂರು | 95.41 | 87.94 |
ಕೊಲ್ಕತ್ತಾ | 92.44 | 85.79 |
ಹೈದರಾಬಾದ್ | 95.97 | 90.43 |
ಮುಂಬೈ | 98.65 | 90.11 |
ನವದೆಹಲಿ | 92.34 | 82.95 |