ETV Bharat / bharat

ಇಂದೋರ್​ನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್​ ಬೆಲೆಯೆಷ್ಟು ಗೊತ್ತೇ?

author img

By

Published : Jan 8, 2021, 8:21 PM IST

ಮಧ್ಯಪ್ರದೇಶದ ಇಂದೋರ್​ನಲ್ಲಿ ಪ್ರತಿ ಲೀಟರ್ ಪೆಟ್ರೋಲ್​ ದರ 92ರ ಗಟಿ ದಾಟಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Madhya Pradesh
Madhya Pradesh

ಇಂದೋರ್​​​​​​: ದೇಶಾದ್ಯಂತ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 80 ರಿಂದ 85ರೂ.ಯ ಒಳಗಿದೆ. ಆದರೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಮಾತ್ರ ಪ್ರತಿ ಲೀಟರ್​ಗೆ 92.10 ರೂ.ಯಲ್ಲಿ ಮಾರಾಟವಾಗುತ್ತಿದೆ.

ಸರ್ಕಾರದ ಸ್ವಾಮ್ಯದ ಚಿಲ್ಲರೆ ಇಂಧನ ವ್ಯಾಪಾರಿಗಳು ಸತತ ಎರಡನೇ ದಿನ ಕೂಡ ದರ ಏರಿಸಿದ್ದರಿಂದ ಈ ಬೆಳವಣಿಗೆ ಕಂಡು ಬಂದಿದೆ. ಹಾಗಾಗಿ ಬೆಲೆ ಸಾರ್ವಕಾಲಿಕ ಗರಿಷ್ಠ 94.10ರೂ. ತಲುಪಿದೆ. ಇದರ ಜತೆಗೆ ಡೀಸೆಲ್​ ಬೆಲೆ 82.62 ರೂ ತಲುಪಿದೆ.

ಮಧ್ಯಪ್ರದೇಶದಲ್ಲಿ ಶಿವರಾಜ್​ ಸಿಂಗ್​ ಚೌಹಾಣ್​ ನೇತೃತ್ವದ ಸರ್ಕಾರ ಶೇ.33ರಷ್ಟು ಮೌಲ್ಯವರ್ಧಿತ ತೆರಿಗೆ ಹಾಗೂ 4.50 ರೂ.ಗಳ ಇತರ ಹೆಚ್ಚುವರಿ ಶುಲ್ಕ ವಿಧಿಸಿದೆ ಎಂದು ಪೆಟ್ರೋಲ್​ ಪಂಪ್​ ನೌಕರರು ತಿಳಿಸಿದ್ದಾರೆ.

​ಕೊರೊನಾ ವೈರಸ್ ಮಧ್ಯೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನಸಾಮಾನ್ಯರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಮಧ್ಯಪ್ರದೇಶ ಸರ್ಕಾರ ಅಬಕಾರಿ ಸುಂಕವನ್ನು ಪೆಟ್ರೋಲ್​ಗೆ ಪ್ರತಿ ಲೀಟರ್​ಗೆ 13 ರೂ. ಮತ್ತು ಡಿಸೇಲ್​ ಮೇಲೆ 15 ರೂ. ಏರಿಕೆ ಮಾಡಿ ಆದೇಶ ಹೊರಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.