ನಾಸಿಕ್(ಮಹಾರಾಷ್ಟ್ರ): ನಕಲಿ ಅಪಘಾತ ಮಾಡಿ ಆ ವ್ಯಕ್ತಿಯ ವಿಮೆ ಹಣವನ್ನು ಸ್ನೇಹಿತರು ಪಡೆದು ವಂಚಿಸಿರುವ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದೆ. ಮೃತ ವ್ಯಕ್ತಿಯ ಹೆಸರಿನಲ್ಲಿ ನಾಲ್ಕು ಕೋಟಿ ರೂಪಾಯಿ ವಿಮೆ ಮಾಡಿಸಲಾಗಿತ್ತು.
ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರು ತಮ್ಮ ಹೆಂಡತಿ ಹೆಸರಿನಲ್ಲಿ 4 ಕೋಟಿ ರೂಪಾಯಿ ವಿಮೆ ಮಾಡಿಸಿದ್ದರು ಎಂದು ಹೇಳಿ ಹಣ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಆ ವ್ಯಕ್ತಿಗೆ ನಕಲಿ ಪತ್ನಿಯನ್ನು ಸಹ ಸೃಷ್ಟಿಸಿದ್ದಾರೆ. ಸದ್ಯ ಮುಂಬೈ ನಾಕಾ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗೇಶ್ ಸಾವ್ಕರ್, ರಜನಿ ಉಕೆಪ್ರಣವ್ ಸಾಲ್ವಿ ಮತ್ತು ಇತರ ಇಬ್ಬರು ಬಂಧಿತ ಆರೋಪಿಗಳಾಗಿದ್ದಾರೆ.
ತನಿಖೆ ಆರಂಭಿಸಿದ ಪೊಲೀಸರು: ಪೊಲೀಸರ ಪ್ರಕಾರ, ಸೆಪ್ಟೆಂಬರ್ 2, 2019 ರ ರಾತ್ರಿ ಇಲ್ಲಿನ ಇಂದಿರಾನಗರ ಜಾಗಿಂಗ್ ಟ್ರ್ಯಾಕ್‌ನ ರಸ್ತೆಬದಿಯ ಪೊದೆಯೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಬೈಕ್ ಅಲ್ಲಿಯೇ ಪಕ್ಕದಲ್ಲಿ ಬಿದ್ದಿತ್ತು. ಬಳಿಕ ಪೊಲೀಸರಿಗೆ ಅನುಮಾನ ಬಂದು ಅಪಘಾತ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ನಂತರ ಪೊಲೀಸ್ ತನಿಖೆಯಿಂದ ಮೃತವ್ಯಕ್ತಿ ಅಶೋಕ್ ರಮೇಶ್ ಭಲೇರಾವ್ ಎಂದು ತಿಳಿದುಬಂದಿದೆ. ಪೊಲೀಸರು ಅಪರಿಚಿತ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಮಹಿಳೆ ಹೆಸರಿನಲ್ಲಿ ಹಣ ಜಮೆ: ಮೃತನ ಸಹೋದರ ಅಪಘಾತದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೂಲಂಕಷವಾಗಿ ತನಿಖೆ ನಡೆಸುವಂತೆ ಪೊಲೀಸರಿಗೆ ಪತ್ರ ಬರೆದಿದ್ದರು. ಪೊಲೀಸ್ ಠಾಣೆಗೆ ಬಂದು ಇದು ಅಪಘಾತವಲ್ಲ ಕೊಲೆ ಎಂದು ಆರೋಪಿಸಿದ್ದರು. ಈ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದಾದ ನಂತರ ರಚನಿ ಎಂಬ ಎಂಬ ಮಹಿಳೆಯ ಹೆಸರಿನಲ್ಲಿ ನಾಲ್ಕು ಕೋಟಿ ರೂ ವಿಮೆ ಜಮೆ ಆಗಿರುವ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಸಿಗರೇಟ್ ಹಣ ಕೇಳಿದಕ್ಕೆ ಕೊಲೆ ಬೆದರಿಕೆ ಹಾಕಿ ಹಲ್ಲೆ: ಮೂವರ ಬಂಧನ
ಪೊಲೀಸರು ಶಂಕಿತ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ಮಂಗೇಶ್ ಸಾವ್ಕರ್ ಸೇರಿದಂತೆ ಐವರು ಶಂಕಿತರ ಹೆಸರನ್ನು ಹೇಳಿದ್ದಾಳೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ಮಾಡಿ ಅಪಘಾತ ಎಂಬ ರೀತಿ ಬಿಂಬಿಸಿ ವಿಮೆಯ ಹಣ ಪಡೆದು ಎಲ್ಲರೂ ಹಂಚಿಕೊಂಡಿರುವುದಾಗಿ ಹೇಳಿದ್ದಾನೆ.
ಮೊದಲು ಅಪಘಾತದ ನಾಟಕ, ಬಳಿಕ ಕೊಲೆ: ಪೊಲೀಸರ ಪ್ರಕಾರ, 2019ರಲ್ಲಿ ಮೃತ ಅಶೋಕ್ ಭಲೇರಾವ್ ಮತ್ತು ಶಂಕಿತ ಸ್ನೇಹಿತರು ಒಟ್ಟಾಗಿ ಸೇರಿ ಹಣವನ್ನು ಪಡೆಯಲು ಯೋಜನೆ ರೂಪಿಸಿದ್ದರು. ಎಲ್ಲರೂ ಸೇರಿ ಅಶೋಕ್ ಹೆಸರಿನಲ್ಲಿದ್ದ 4 ಕೋಟಿ ರೂ ಪಡೆಯಲು ಅಪರಿಚಿತ ವ್ಯಕ್ತಿಯನ್ನು ಕೊಂದು ಅಶೋಕ್ ಎಂದು ಬಿಂಬಿಸಲು ತಯಾರಿ ನಡೆಸಿದ್ದರು. ಅಲ್ಲದೇ ಅಶೋಕ್ ಹೆಂಡತಿ ಎಂದು ಆಗಲೇ ಮಹಿಳೆ ಹೆಸರು ಸರ್ಕಾರಿ ದಾಖಲೆಯಲ್ಲಿ ನಮೂದಿಸಿದ್ದರು. ಆದ್ರೆ ಈ ಪ್ಲ್ಯಾನ್ ವರ್ಕ್ ಆಗಿಲ್ಲ. ಆದರೆ, ಮೂರು ವರ್ಷ ಕಳೆದರೂ ಹಣ ಸಿಕ್ಕಿರಲಿಲ್ಲ. ಹಾಗಾಗಿ ಗೆಳೆಯರು ಅಶೋಕ್‌ನನ್ನೇ ಕೊಲೆ ಮಾಡಿ ಹಣ ಪಡೆದಿದ್ದಾರೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ್ ರೋಹೊಕ್ಲೆ ಮಾಹಿತಿ ನೀಡಿದ್ದಾರೆ.