ETV Bharat / bharat

ಒಮ್ಮೆ ಗಮನಿಸಿ.. ಪೆಟ್ರೋಲ್​ ಬಂಕ್​ನಲ್ಲಿ ನಿಮಗೆ ಸಿಗುವ ಉಚಿತಗಳು..

ಪೆಟ್ರೋಲ್​ ಬಂಕ್​ಗಳಿಗೆ ಕೆಲವೊಂದು ಷರತ್ತುಗಳ ಆಧಾರದ ಮೇಲೆ ಲೈಸೆನ್ಸ್ ನೀಡಲಾಗುತ್ತದೆ. ಆ ಷರತ್ತುಗಳನ್ನು ಪೂರೈಸದಿದ್ದರೆ, ಅಂಥಹ ಪೆಟ್ರೋಲ್ ಬಂಕ್ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಆ ಷರತ್ತುಗಳಲ್ಲಿ ಸಾಮಾನ್ಯ ನಾಗರಿಕರಿಗೆ ಹಲವು ಉಚಿತ ಸೇವೆಗಳನ್ನೂ ಸಹ ಸೇರಿಸಲಾಗಿದೆ. ಅವುಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ..

free of cost facilities at petrol pump
ಒಮ್ಮೆ ಗಮನಿಸಿ.. ಪೆಟ್ರೋಲ್​ ಬಂಕ್​ನಲ್ಲಿ ನಿಮಗೆ ಸಿಗುವ ಉಚಿತಗಳು..!
author img

By

Published : Mar 15, 2022, 4:34 PM IST

ನವದೆಹಲಿ : ಈಗ ಎಲ್ಲರ ಬಳಿ ಬೈಕ್ ಅಥವಾ ಕಾರುಗಳು ಇದ್ದೇ ಇರುತ್ತವೆ. ತೈಲ ಬೆಲೆಗಳು ಏರುತ್ತಿರುವ ಈ ವೇಳೆ ಅವುಗಳ ನಿರ್ವಹಣೆ ಕಷ್ಟವಾಗಿದೆ. ಪೆಟ್ರೋಲ್ ಬಂಕ್​ಗಳ ಬಳಿ ತೆರಳಿದರೆ ಜೇಬು ಖಾಲಿಯಾಗೋದಂತೂ ಗ್ಯಾರಂಟಿ. ಆದರೆ, ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್​ ಮಾತ್ರ ದುಬಾರಿ. ಆದರೆ, ಕೆಲ ಸೇವೆಗಳು ಸಂಪೂರ್ಣ ಉಚಿತವಾಗಿರುತ್ತವೆ. ಕೆಲವೊಮ್ಮೆ ಇದರ ಬಗ್ಗೆ ಅರಿವಿರದಿದ್ದರೆ, ಅವುಗಳಿಗೂ ಹಣ ನೀಡಬೇಕಾಗುತ್ತದೆ.

ಯಾವುದೇ ಒಂದು ಪೆಟ್ರೋಲ್ ಬಂಕ್​ಗೆ ಲೈಸೆನ್ಸ್ ನೀಡುವ ಮೊದಲು ಕೆಲ ಷರತ್ತುಗಳನ್ನು ಹಾಕಲಾಗುತ್ತದೆ. ಈ ಹಕ್ಕುಗಳನ್ನು ಪಡೆಯುವುದು ಸಾಮಾನ್ಯ ನಾಗರಿಕರ ಹಕ್ಕು ಕೂಡ ಹೌದು. ಒಂದು ಈ ಸೇವೆಗಳನ್ನು ಒದಗಿಸದಿದ್ದರೆ, ಅಂತಹ ಪೆಟ್ರೋಲ್ ಬಂಕ್​ಗಳ ಲೈಸೆನ್ಸ್ ಅನ್ನು ರದ್ದು ಮಾಡಬಹುದು ಎಂಬ ಷರತ್ತೂ ಕೂಡ ಇದೆ. ಪೆಟ್ರೋಲ್ ಬಂಕ್ ನೀಡಲೇಬೇಕಾದ ಉಚಿತ ಸೌಲಭ್ಯಗಳ ಕುರಿತು ನೋಡೋಣ ಬನ್ನಿ..

1. ಟೈರ್‌ಗಳಿಗೆ ಉಚಿತ ಗಾಳಿ : ನಾವು ಬೈಕ್ ಅಥವಾ ಕಾರುಗಳಲ್ಲಿ ಹೊರಗೆ ಹೋಗುವಾಗ ಟೈರ್​ಗಳಲ್ಲಿ ಅಗತ್ಯವಾದಷ್ಟು ಗಾಳಿ ಇರಬೇಕಾದುದು ಅನಿವಾರ್ಯ. ನಾವು ಬೇರೆ ಶಾಪ್​ಗಳಲ್ಲಿ ಟೈರ್​ಗಳಿಗೆ ಗಾಳಿಯನ್ನು ತುಂಬಿಸಿಕೊಂಡರೆ, ಹಣ ನೀಡಬೇಕಾಗುತ್ತದೆ. ಆದರೆ, ಪೆಟ್ರೋಲ್ ಬಂಕ್​ಗಳಲ್ಲಿ ಗಾಳಿಯನ್ನು ಉಚಿತವಾಗಿ ಟೈರ್​ಗಳಿಗೆ ತುಂಬಿಸಿಕೊಳ್ಳಬಹುದು. ಇದಕ್ಕಾಗಿಯೇ ಅಲ್ಲೊಬ್ಬ ಸಿಬ್ಬಂದಿಯನ್ನು ನೇಮಿಸಲಾಗಿರುತ್ತದೆ. ನೀವು ಆ ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್​ ಅನ್ನು ತುಂಬಿಸಿಕೊಳ್ಳದಿದ್ದರೂ, ನೀವು ಈ ಉಚಿತ ಸೇವೆ ಪಡೆಯಬಹುದು.

2. ಉಚಿತ ಶುದ್ಧ ಕುಡಿಯುವ ನೀರು : ಯಾವುದೇ ಸ್ಥಳಕ್ಕೆ ಪ್ರಯಾಣ ಬೆಳೆಸುವಾಗ ಒಮ್ಮೊಮ್ಮೆ ನೀರಿನ ಅವಶ್ಯಕತೆ ಉಂಟಾಗುತ್ತದೆ. ಒಮ್ಮೊಮ್ಮೆ ಮನೆಯಿಂದ ನೀರನ್ನು ತರುವುದನ್ನು ಮರೆತುಬಿಡುತ್ತೇವೆ. ಈ ವೇಳೆ ನಾವು ಸಾಮಾನ್ಯವಾಗಿ ಅಂಗಡಿಗಳು ಅಥವಾ ಹೋಟೆಲ್​ಗಳಲ್ಲಿ ಮಿನರಲ್ ಯುಕ್ತ ನೀರನ್ನು ಖರೀದಿಸುತ್ತೇವೆ. ನಿಮ್ಮ ಸಮೀಪದಲ್ಲಿ ಪೆಟ್ರೋಲ್ ಬಂಕ್ ಇದ್ದರೆ, ನೀರಿಗಾಗಿ ಹಣ ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಅಲ್ಲಿ ಕುಡಿಯುವ ನೀರನ್ನು ಉಚಿತವಾಗಿ ಒದಗಿಸಲಾಗುತ್ತದೆ. ಲೈಸೆನ್ಸ್ ನೀಡುವಾಗ ಈ ಷರತ್ತಿಗೆ ಪೆಟ್ರೋಲ್ ಬಂಕ್ ಮಾಲೀಕರು ಒಪ್ಪಿರುತ್ತಾರೆ.

3. ಉಚಿತ ಶೌಚಾಲಯ ಸೌಲಭ್ಯ : ಪ್ರಯಾಣದ ಸಮಯದಲ್ಲಿ ನೀವು ಶೌಚಾಲಯವನ್ನು ಬಳಸಬೇಕಾದ ಅವಶ್ಯಕತೆ ಇದ್ದರೆ, ನೀವು ಪೆಟ್ರೋಲ್ ಬಂಕ್​ಗಳಲ್ಲಿ ಉಚಿತ ಸೇವೆ ಪಡೆಯಬಹುದಾಗಿದೆ. ಅಂದರೆ ಪೆಟ್ರೋಲ್ ಬಂಕ್​ಗಳ ಬಳಿ ಶೌಚಾಲಯ ನಿರ್ಮಿಸುವುದು ಮಾತ್ರವಲ್ಲದೇ, ಉಚಿತ ಬಳಕೆಗೆ ನೀಡುವುದು ಪೆಟ್ರೋಲ್ ಬಂಕ್ ಮಾಲೀಕರ ಕರ್ತವ್ಯವಾಗಿರುತ್ತದೆ. ಪೆಟ್ರೋಲ್ ಬಂಕ್ ಮಾಲೀಕರು ನಿಮಗೆ ಶೌಚಾಲಯವನ್ನು ಬಳಸಲು ಅನುಮತಿ ನೀಡದಿದ್ದರೆ ಅಥವಾ ಪೆಟ್ರೋಲ್ ಬಂಕ್​​ನಲ್ಲಿರುವ ಶೌಚಾಲಯವು ಸ್ವಚ್ಛತೆಯಿಂದ ಇರದಿದ್ದರೆ, ಅವರ ವಿರುದ್ಧ ದೂರು ದಾಖಲಿಸಬಹುದು. ಈ ವೇಳೆ ಅಧಿಕಾರಿಗಳು ಪೆಟ್ರೋಲ್ ಬಂಕ್​ನ ಪರವಾನಿಗೆ ರದ್ದುಗೊಳಿಸಬಹುದು.

4. ಉಚಿತ ಫೋನ್ ಕರೆ : ದೂರದ ಪ್ರಯಾಣದ ಸಮಯದಲ್ಲಿ ನಿಮ್ಮ ಮೊಬೈಲ್ ಬ್ಯಾಟರಿ ಅನೇಕ ಬಾರಿ ಡೆಡ್​ ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಯಾರೊಂದಿಗಾದರೂ ಮಾತನಾಡುವ ಅನಿವಾರ್ಯತೆ ಇದ್ದರೆ, ನೀವು ಪೆಟ್ರೋಲ್ ಬಂಕ್​ಗೆ ಹೋಗಿ ಅಲ್ಲಿನ ಫೋನ್​ನಿಂದ ಉಚಿತ ಕರೆ ಮಾಡಬಹುದು. ಇವು ಕೂಡ ನಿಮ್ಮ ಹಕ್ಕುಗಳ ಭಾಗವಾಗಿದೆ.

5. ಪ್ರಾಥಮಿಕ ಚಿಕಿತ್ಸಾ ಸೌಲಭ್ಯ : ರಸ್ತೆ ಅಪಘಾತಗಳಾದಾಗ ಚಿಕಿತ್ಸೆಗಾಗಿ ನೀವು ಆ್ಯಂಬುಲೆನ್ಸ್ ಅಥವಾ ವೈದ್ಯರಿಗಾಗಿ ಕಾಯದೇ, ಗಾಯಾಳುಗಳಿಗೆ ಪೆಟ್ರೋಲ್ ಬಂಕ್​ನಲ್ಲಿ ಚಿಕಿತ್ಸೆ ನೀಡಬಹುದು. ಅಲ್ಲಿ ಪ್ರಥಮ ಚಿಕಿತ್ಸೆಗೆ ಬೇಕಾದ ಸಾಮಗ್ರಿಗಳನ್ನ ಇಡಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ಪ್ರಥಮ ಚಿಕಿತ್ಸಾ ಪೆಟ್ಟಿಗೆ ಯಾವಾಗಲೂ ಲಭ್ಯವಿದ್ದು, ಇದಕ್ಕಾಗಿ ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

6. ಅಗ್ನಿ ನಿಯಂತ್ರಣ ಸಾಧನಗಳು : ಪೆಟ್ರೋಲ್ ಬಂಕ್​ನಲ್ಲಿ ಮಾತ್ರವಲ್ಲದೇ, ಪೆಟ್ರೋಲ್ ಬಂಕ್ ಹತ್ತಿರದ ಪ್ರದೇಶದಲ್ಲಿ ಅಗ್ನಿ ಅವಘಡಗಳು ನಡೆದರೆ, ಪೆಟ್ರೋಲ್ ಬಂಕ್​ನಲ್ಲಿರುವ ಅಗ್ನಿ ನಿಯಂತ್ರಣ ಸಾಧನಗಳನ್ನು ಬಳಸಬಹುದು. ಇದೂ ಉಚಿತವಾಗಿರುತ್ತವೆ.

ಇದನ್ನೂ ಓದಿ: ಮುಂಬೈ ಷೇರುಪೇಟೆಯಲ್ಲಿ ಗೂಳಿ ಓಟಕ್ಕೆ ಮತ್ತೆ ಕರಡಿ ಅಡ್ಡಿ; ಸೆನ್ಸೆಕ್ಸ್‌ 500 ಅಂಕಗಳ ಇಳಿಕೆ

7. ಮಗುವಿಗೆ ಹಾಲುಣಿಸುವ ಕೊಠಡಿ : ಮಹಿಳೆಯೋರ್ವಳು ತನ್ನ ಮಗುವಿಗೆ ಹಾಲುಣಿಸಲು ಬಯಸಿದರೆ, ಆಕೆ ಪೆಟ್ರೋಲ್ ಬಂಕ್​ನಲ್ಲಿರುವ ಬೇಬಿ ಫೀಡಿಂಗ್ ರೂಮ್​ಗೆ ತೆರಳಿ ಮಗುವಿಗೆ ಹಾಲುಣಿಸಬಹುದಾಗಿದೆ. ಇದೂ ಉಚಿತವಾಗಿದ್ದು, ಈ ಕೊಠಡಿ ಒದಗಿಸದ ಪೆಟ್ರೋಲ್ ಬಂಕ್​ಗಳ ವಿರುದ್ಧ ದೂರು ದಾಖಲಿಸಬಹುದು.

ಪೆಟ್ರೋಲ್ ಬಂಕ್​ಗಳಿಗೆ ತೆರೆಳಿದಾಗ ನಮ್ಮ ಸೇವೆಗಳನ್ನು ಪಡೆಯುವುದು ಎಷ್ಟು ಮುಖ್ಯವೋ..? ಕೆಲವೊಂದು ಜವಾಬ್ದಾರಿಗಳನ್ನು ಹೊರುವುದೂ ಕೂಡಾ ಅಷ್ಟೇ ಮುಖ್ಯ. ಅಂಥಹ ಜವಾಬಾಬ್ದಾರಿಗಳೆಂದರೆ..

  1. ವಾಹನಕ್ಕೆ ಡೀಸೆಲ್ ಅಥವಾ ಪೆಟ್ರೋಲ್ ತುಂಬಿಸುವಾಗ ನಿಮ್ಮ ವಾಹನದ ಇಂಜಿನ್ ಅನ್ನು ಸ್ವಿಚ್ ಆಫ್ ಮಾಡಿ
  2. ಪೆಟ್ರೋಲ್ ಬಂಕ್ ಆವರಣದಲ್ಲಿ ಎಂದಿಗೂ ಸಿಗರೇಟ್ ಅಥವಾ ಬೆಂಕಿ ಉಂಟುಮಾಡಬಾರದು
  3. ಪೆಟ್ರೋಲ್ ಬಂಕ್ ಆವರಣದಲ್ಲಿ ಮೊಬೈಲ್ ಕರೆಯಲ್ಲಿ ಮಾತನಾಡಬೇಡಿ, ಸಾಧ್ಯವಾದರೆ ಫೋನ್ ಸ್ವಿಚ್ ಆಫ್ ಮಾಡಿ.
  4. ಡೀಸೆಲ್ ಅಥವಾ ಪೆಟ್ರೋಲ್ ಹಾಕುವಾಗ ವಾಹನದಿಂದ ಕೆಳಗೆ ಇಳಿಯಿರಿ
  5. ಪ್ಲಾಸ್ಟಿಕ್ ಅಥವಾ ಗಾಜಿನ ಬಾಟಲಿಗಳಲ್ಲಿ ಡೀಸೆಲ್ ಅಥವಾ ಪೆಟ್ರೋಲ್ ತುಂಬಿಸಿಕೊಳ್ಳುವುದನ್ನು ಕಡಿಮೆ ಮಾಡಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.