ಮುಂಬೈ : ಕೇಂದ್ರ ಮತ್ತು ರಾಜ್ಯಗಳು ಪೆಟ್ರೋಲ್ ಮೇಲೆ ಪ್ರತ್ಯೇಕ ತೆರಿಗೆ ಹೊಂದಿದ್ದು, ಅದು ಅದರ ಮೂಲ ಬೆಲೆಗಿಂತ ಹೆಚ್ಚಾಗಿದೆ. ಇದೇ ವೇಳೆ ಮುಂಬೈನಲ್ಲಿ ಪೆಟ್ರೋಲ್ ಚಿಲ್ಲರೆ ದರ 100 ರೂಪಾಯಿ ಗಡಿ ದಾಟಿದೆ.
ಪೆಟ್ರೋಲ್ ಮೂಲ ಬೆಲೆ 35.67 ರೂಪಾಯಿ ಆಗಿದ್ದು, ಉಳಿದ ಮೊತ್ತ ತೆರಿಗೆ, ಹೆಚ್ಚುವರಿ ಶುಲ್ಕ ಮತ್ತು ವಿತರಕರ ಕಮಿಷನ್ ಒಳಗೊಂಡಿರುತ್ತದೆ. ಪೆಟ್ರೋಲ್ನ ಸಾಗಾಣೆ ವೆಚ್ಚ ಮತ್ತು ವ್ಯಾಪಾರಿ ಕಮಿಷನ್ ಸೇರಿಸಿದರೆ ಸುಮಾರು 40 ರೂ.ಯಷ್ಟು ವೆಚ್ಚವಾಗಬಹುದು.
ಲೀಟರ್ ಪೆಟ್ರೋಲ್ ಮೂಲ ಬೆಲೆ 35.67 ರೂಪಾಯಿ. ಕೇಂದ್ರಗಳ ಅಬಕಾರಿ ಸುಂಕ 32.90 ರೂ., ಸಾರಿಗೆ ಶುಲ್ಕ 19 ಪೈಸೆ, ರಾಜ್ಯಗಳ ವ್ಯಾಟ್ 17.88 ರೂ., ರಾಜ್ಯಗಳ ವಿಧಿಸುವ ಹೆಚ್ಚುವರಿ ಶುಲ್ಕ 10.12 ರೂ., ಮಾರಾಟಗಾರರ ಕಮಿಷನ್ 3.76 ರೂ. ಸೇರಿ ಮುಂಬೈನಲ್ಲಿ 100 ರೂಪಾಯಿ ದಾಟಿದೆ.
ನಿತ್ಯ ಬಳಕೆಯ ಪೆಟ್ರೋಲ್ ದರ ನೂರರ ಗಡಿ ದಾಟಿದ್ದು, ಮುಂಬೈನಲ್ಲಿ ಶನಿವಾರ ಶಿವಸೇನೆ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಉದ್ವಿಗ್ನತೆಗೆ ಕಾರಣವಾಗಿದೆ.
ಶಿವಸೇನಾ ಕಾರ್ಯಕರ್ತರು ಇಂಧನ ಬೆಲೆ ಏರಿಕೆ ವಿರುದ್ಧ ಪೋಸ್ಟರ್ ಮುದ್ರಿಸಿ, ಮುಂಬೈನ ಬಿಜೆಪಿ ರಾಜ್ಯ ಕೇಂದ್ರ ಕಚೇರಿಯ ಮುಂದೆ ನೇತು ಹಾಕಿದ್ದಾರೆ.
'ಪೆಟ್ರೋಲ್ ಬೆಲೆಯನ್ನು 100 ರೂಪಾಯಿಗೆ ತಂದ ಮೊದಲ ಪ್ರಧಾನಿ ಮೋದಿ'. ಈಗ ಸಾಕು, ನಾವು ಮತ್ತೆ ನಿಮ್ಮನ್ನು ತರುವುದಿಲ್ಲ'. ಇಂತಹ ವಾಕ್ಯಗಳು ಪ್ರಧಾನಿ ಮೋದಿ ಫೋಟೋದೊಂದಿಗೆ ಪೋಸ್ಟರ್‌ನಲ್ಲಿ ಪ್ರಕಟಿಸಲಾಗಿದೆ.
ಪೆಟ್ರೋಲ್ ಪಂಪ್‌ನಲ್ಲಿರುವ ವ್ಯಕ್ತಿಯು ತನ್ನ ಕಾರು, ಬಿಲ್ಲು ಮತ್ತು ಪ್ರಧಾನಿ ಮೋದಿಗೆ ಫೋಟೋವನ್ನು ಪಂಪ್‌ನಲ್ಲಿ ಕೈ ಜೋಡಿಸಿ ನಮಸ್ಕರಿಸುತ್ತಿರುವುದು ಪೋಸ್ಟರ್‌ನಲ್ಲಿ ಕಾಣಬಹುದು.
ಅಬ್ ಕಿ ಬಾರ್, ಲಂಬುನ್ ನಮಸ್ಕರ್" ಅದರ ಕೆಳಗೆ ಬರೆಯಲಾಗಿದೆ. ಈ ಪೋಸ್ಟರ್ ಬಿಜೆಪಿ ಕಾರ್ಯಕರ್ತರಲ್ಲಿ ಕೋಪ ತರಿಸಿದೆ. ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಉದ್ವಿಗ್ನತೆ ಉಂಟುಮಾಡಿತು.
ಆ ನಂತರ ಪೊಲೀಸರು ಮಧ್ಯಪ್ರವೇಶಿಸಿ ಪೋಸ್ಟರ್ ತೆರವುಗೊಳಿಸಿ, ನಾಲ್ವರು ಶಿವಸೇನಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.