ETV Bharat / bharat

ಕಾರ್ ಸೀಟಿನಡಿ 4 ಕೋಟಿ ರೂ ಪತ್ತೆ; ಹೈದರಾಬಾದ್‌ನಿಂದ ಚೆನ್ನೈಗೆ ಹವಾಲ ಹಣ ರವಾನೆ?

ತೆಲಂಗಾಣದ ನಲ್ಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ 4 ಕೋಟಿ ರೂ ಹವಾಲ ಹಣವೆಂದು ಶಂಕಿಸಲಾದ ನಗದು ವಶಕ್ಕೆ ಪಡೆದಿದ್ದಾರೆ.

four crore rupees seized, four crore rupees seized by nalgonda Police, nalgonda news, nalgonda crime news, ನಾಲ್ಕು ಕೋಟಿ ರೂಪಾಯಿ ವಶ, ನಾಲ್ಕು ಕೋಟಿ ರೂಪಾಯಿ ವಶಕ್ಕೆ ಪಡೆದ ನಲ್ಗೊಂಡ ಪೊಲೀಸ್​, ನಲ್ಗೊಂಡ ಸುದ್ದಿ, ನಲ್ಗೊಂಡ ಅಪರಾಧ ಸುದ್ದಿ,
ಪಕ್ಕಾ ಮಾಹಿತಿ ಹಿನ್ನೆಲೆ ನಾಲ್ಕು ಕೋಟಿ ಹವಾಲ ಹಣ ವಶ
author img

By

Published : Oct 21, 2021, 8:16 AM IST

ನಲ್ಗೊಂಡ: ಇಲ್ಲಿನ ಚಿಟ್ಯಾಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ತಪಾಸಣೆ ನಡೆಸಿದ ಪೊಲೀಸರು ಕಾರಿನಲ್ಲಿ ರಹಸ್ಯವಾಗಿ ಸಾಗಿಸುತ್ತಿದ್ದ ನಾಲ್ಕು ಕೋಟಿಗೂ ಹೆಚ್ಚು ನಗದನ್ನು ವಶಕ್ಕೆ ಪಡೆದರು.

ಹೈದರಾಬಾದ್​ನಿಂದ ಚೆನ್ನೈಗೆ ಈ ಹಣವನ್ನು ಗೌಪ್ಯವಾಗಿ ಸಾಗಿಸುತ್ತಿರುವುದರ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ಚಿಟ್ಯಾಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ.

ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಆರೋಪಿಗಳು ಕಾರಿನ ಸೀಟ್‌ನಡಿ ಬಚ್ಚಿಟ್ಟು ಸಾಗಿಸುತ್ತಿದ್ದರು. ಮಹಾರಾಷ್ಟ್ರದ ನಿವಾಸಿ ವೀರೇಂದ್ರ ಮತ್ತು ರಾಜಸ್ಥಾನ್​ ನಿವಾಸಿ ಕನ್ನಾರಾಂನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.