ಹೈದರಬಾದ್ : ಸುಪ್ರೀಂಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ತಾಯಿ ಶಾಂತಿ ಗೊಗೊಯ್ ಅವರು ನಿಧನರಾಗಿದ್ದಾರೆ.
ಇವರು ಅಸ್ಸೋಂನ ಮಾಜಿ ಮುಖ್ಯಮಂತ್ರಿ ಕೇಶವ್ ಚಂದ್ರ ಗೊಗೊಯ್ ಅವರ ಪತ್ನಿಯಾಗಿದ್ದಾರೆ. ದೆಹಲಿಯ ಆಸ್ಪತ್ರೆಯಲ್ಲಿ ಶಾಂತಿ ಗೊಗೊಯ್ ಅವರು ಕಣ್ಣಿನ ಶಸ್ತ್ರಚಿಕಿತ್ಸೆ ಪಡೆಯುತ್ತಿದ್ದರು. ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.