ಮಾಜಿ ಶಾಸಕ ಮುಖ್ತಾರ್ ಅನ್ಸಾರಿಗೆ 10 ವರ್ಷ, ಅಫ್ಜಲ್ ಅನ್ಸಾರಿಗೆ 4 ವರ್ಷ ಜೈಲು ಶಿಕ್ಷೆ - Afzal Ansari
ಮಾಫಿಯಾ ಮುಖ್ತಾರ್ ಅನ್ಸಾರಿಗೆ ದರೋಡೆಕೋರರ ಕಾಯ್ದೆಯಡಿ ಜನಪ್ರತಿನಿಧಿಗಳ ಕೋರ್ಟ್ 10 ವರ್ಷಗಳ ಶಿಕ್ಷೆ ವಿಧಿಸಿದೆ. ಅದೇ ವೇಳೆ ಕೋರ್ಟ್ ಆತನ ಸಹೋದರ ಅಫ್ಜಲ್ ಅನ್ಸಾರಿಗೂ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ದರೋಡೆಕೋರರ ಕಾಯ್ದೆಯಡಿ ಈ ಶಿಕ್ಷೆಯನ್ನು ನ್ಯಾಯಾಲಯ ಶನಿವಾರ ಪ್ರಕಟಿಸಿದೆ.
ಘಾಜಿಪುರ (ಉತ್ತರ ಪ್ರದೇಶ): ಬಂದಾ ಜೈಲಿನಲ್ಲಿರುವ ಮಾಫಿಯಾ ಮುಖ್ತಾರ್ ಅನ್ಸಾರಿಗೆ ದರೋಡೆಕೋರರ ಕಾಯ್ದೆಯಡಿ ಜನಪ್ರತಿನಿಧಿಗಳ ನ್ಯಾಯಾಲಯ 10 ವರ್ಷ ಶಿಕ್ಷೆ ವಿಧಿಸಿದೆ. ಮತ್ತು ಐದು ಲಕ್ಷ ದಂಡವನ್ನೂ ವಿಧಿಸಲಾಗಿದೆ. ಅದೇ ಸಮಯದಲ್ಲಿ ನ್ಯಾಯಾಲಯವು ಅವರ ಸಹೋದರ ಅಫ್ಜಲ್ ಅನ್ಸಾರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ, ಒಂದು ಲಕ್ಷ ದಂಡ ವಿಧಿಸಿದೆ. ಈ ಶಿಕ್ಷೆಯನ್ನು ನ್ಯಾಯಾಲಯ ಶನಿವಾರ ಪ್ರಕಟಿಸಿದೆ. ಭೀಮ್ ಸಿಂಗ್, ಮುಖ್ತಾರ್ ಅನ್ಸಾರಿಯ ಮಿತ್ರರಾಗಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ತಾರ್‌ನನ್ನು ಹಾಜರುಪಡಿಸಿದರೆ, ಭೀಮ್ ಸಿಂಗ್ ನೇರವಾಗಿ ಕೋರ್ಟ್ಗೆ ಬಂದಿದ್ದರು.
ಇದನ್ನೂ ಓದಿ: ಕಲ್ಲಿನಿಂದ ಹೊಡೆದು ಯುವಕನ ಹತ್ಯೆ : ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಕ್ಕೆ ಕೊಲೆ ಶಂಕೆ
ಎಂಪಿ ಎಂಎಲ್ಎ ನ್ಯಾಯಾಲಯದಿಂದ ತೀರ್ಪು ಪ್ರಕಟ: ಇಂದು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದರೋಡೆಕೋರ ಪ್ರಕರಣದಲ್ಲಿ ಬಿಎಸ್ಪಿ ಸಂಸದ ಅಫ್ಜಲ್ ಅನ್ಸಾರಿ ಮತ್ತು ಗಾಜಿಪುರದ ಮುಖ್ತಾರ್ ಅನ್ಸಾರಿ ವಿರುದ್ಧ ಕೋರ್ಟ್ ತೀರ್ಪು ನೀಡಿದೆ. ಮುಖ್ತಾರ್ ಅನ್ಸಾರಿ ಮೇಲಿನ ಮತ್ತೊಂದು ದರೋಡೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಚಂದೌಲಿಯಲ್ಲಿ 1996ರ ಕಲ್ಲಿದ್ದಲು ಉದ್ಯಮಿ ನಂದಕಿಶೋರ್ ರುಂಗ್ಟಾ ಅಪಹರಣ ಮತ್ತು ಕೊಲೆ ಪ್ರಕರಣ ಮತ್ತು ಕೃಷ್ಣಾನಂದ ರೈ ಕೊಲೆ ಪ್ರಕರಣದ ಹಿನ್ನೆಲೆ ಗ್ಯಾಂಗ್ ಚಾರ್ಟ್ ಅನ್ನು ತಯಾರಿಸಲಾಯಿತು. ಅದೇ ಸಮಯದಲ್ಲಿ ಕೃಷ್ಣಾನಂದ ರೈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ಜಲ್ ಅನ್ಸಾರಿ ಮೇಲೆ ಗ್ಯಾಂಗ್ ಚಾರ್ಟ್ ಸಿದ್ಧಪಡಿಸಲಾಗಿತ್ತು.
ಇದನ್ನೂ ಓದಿ: ಸ್ಟಡಿ ಸೆಂಟರ್ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಮಾರಾಟ: ಮೂವರ ಬಂಧನ
ಬಿಜೆಪಿ ಶಾಸಕ ಕೃಷ್ಣಾನಂದ ರೈ ಕೊಲೆ ಪ್ರ 2005ರ ನವೆಂಬರ್ 29ರಂದು ಅಂದಿನ ಬಿಜೆಪಿ ಶಾಸಕ ಕೃಷ್ಣಾನಂದ ರೈ ಅವರನ್ನು ಮಹಮ್ಮದಾಬಾದ್‌ನ ಭವರ್‌ಕೋಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಸನಿಯಾ ಚಟ್ಟಿಯಲ್ಲಿ ಕೊಲೆ ಮಾಡಲಾಗಿತ್ತು. ಅವರೊಂದಿಗೆ ಇನ್ನೂ ಆರು ಜನರನ್ನು ಹತ್ಯೆಗೈಯಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಮುಖ್ತಾರ್ ಅನ್ಸಾರಿ ಮತ್ತು ಅಫ್ಜಲ್ ಅನ್ಸಾರಿ ಪ್ರಮುಖ ಆರೋಪಿಗಳು. ಈ ಪ್ರಕರಣದ ವಿಚಾರಣೆ ಸಿಬಿಐ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.
ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ: ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ದೋಷಿ, 200 ರೂಪಾಯಿ ದಂಡ
ನಂತರ, ಸಹೋದರರಾದ ಮುಖ್ತಾರ್ ಅನ್ಸಾರಿ ಮತ್ತು ಅಫ್ಜಲ್ ಅನ್ಸಾರಿ ಅವರನ್ನು ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿದೆ. ಬಳಿಕ, 2007ರಲ್ಲಿ ಸಂಸದ ಅಫ್ಜಲ್ ಅನ್ಸಾರಿ ಮತ್ತು ಮಾಫಿಯಾ ಮುಕ್ತಾರ್ ಅನ್ಸಾರಿ ವಿರುದ್ಧ ದರೋಡೆಕೋರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಾದಗಳು ಏಪ್ರಿಲ್ 1 ರಂದು ಪೂರ್ಣಗೊಂಡಿತು. ಇದಾದ ಬಳಿಕ ನ್ಯಾಯಾಲಯವು ಇಂದು ತೀರ್ಪು ನೀಡಿದೆ.
ಇದನ್ನೂ ಓದಿ: ಬೈಜುಸ್ ಸಂಸ್ಥಾಪಕರ ನಿವಾಸ, ಕಚೇರಿಗಳ ಮೇಲೆ ಇಡಿ ದಾಳಿ
ಇದನ್ನೂ ಓದಿ: ಸಿಗರೇಟ್ ವಿಚಾರ: 8ನೇ ತರಗತಿ ಸ್ನೇಹಿತನನ್ನು ಕಲ್ಲಿನಿಂದ ಹೊಡೆದು ಕೊಂದ ಸಹಪಾಠಿಗಳು!