ತಿರುವನಂತಪುರಂ(ಕೇರಳ): ಝಿಕಾ ವೈರಸ್ ಹಾವಳಿ ಕೇರಳದಲ್ಲಿ ಹೆಚ್ಚಾಗುತ್ತಿದೆ. ಈಗ ಮತ್ತೆ ಐದು ಮಂದಿಯಲ್ಲಿ ಈ ವೈರಸ್ ಪತ್ತೆಯಾಗಿದ್ದು, ಒಟ್ಟು ಝಿಕಾ ರೋಗಿಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.
ತಿರುವನಂತರಪುರಂ ಬಳಿಯ ಅನಯಾರದಲ್ಲಿ ಇಬ್ಬರಿಗೆ ಮತ್ತು ಕುನ್ನುಕುಝಿ, ಪಟ್ಟೋಂ ಮತ್ತು ಈಸ್ಟ್ ಪೋರ್ಟ್ನಲ್ಲಿ ತಲಾ ಒಬ್ಬರಲ್ಲಿ ಝಿಕಾ ವೈರಸ್ ಕಾಣಿಸಿಕೊಂಡಿದೆ ಎಂಬ ಮಾಹಿತಿ ದೊರಕಿದೆ. ಸೊಳ್ಳೆಯಿಂದ ಹರಡುವ ಈ ಝಿಕಾ ವೈರಸ್ ಅನ್ನು ತಡೆಯಲು ತಿರುವನಂತಪುರಂ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಹಲವು ಜಿಲ್ಲೆಗಳು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿವೆ.
ಅನಯಾರ ಪ್ರದೇಶದ ಮೂರು ಕಿಲೋಮೀಟರ್ ಸುತ್ತಳತೆಯ ಪ್ರದೇಶವನ್ನು ಝಿಕಾ ವೈರಸ್ ಕ್ಲಸ್ಟರ್ ಎಂದು ಗುರುತಿಸಲಾಗಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
ಕೇರಳದಲ್ಲಿ ಮೊದಲ ಝಿಕಾ ವೈರಸ್ ಕೇಸ್ ಜುಲೈ 9ರಂದು ಪತ್ತೆಯಾಗಿತ್ತು. ಝಿಕಾ ವೈರಸ್ ಪತ್ತೆಯಾದ ಕ್ಷಣದಿಂದಲೇ ಎಲ್ಲಾ ಜಿಲ್ಲೆಗಳಲ್ಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಘೋಷಣೆ ಮಾಡಲಾಯಿತು.
ಇದನ್ನೂ ಓದಿ: ಕೆ.ಆರ್ ಮಾರ್ಕೆಟ್-ಕಲಾಸಿಪಾಳ್ಯ ಮಾರುಕಟ್ಟೆ ವ್ಯಾಪಾರ ಪುನರಾರಂಭ: ಷರತ್ತುಗಳು ಅನ್ವಯ