ETV Bharat / bharat

ನಾಲ್ವರು ಸಹೋದ್ಯೋಗಿಗಳ ಕೊಂದು ತಾನೂ ಸಾವಿಗೀಡಾದ ಬಿಎಸ್​ಎಫ್ ಯೋಧ

author img

By

Published : Mar 6, 2022, 1:25 PM IST

ಪಂಜಾಬ್​ನ ಅಮೃತಸರದ ಬಳಿ ಬಿಎಸ್​ಎಫ್​ನ ಯೋಧನೋರ್ವ​ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ಒಟ್ಟು ಐವರು ಯೋಧರು ಸಾವನ್ನಪ್ಪಿರುವ ಘಟನೆ ನಡೆದಿದೆ.

5 troops incl Ct Satteppa, have lost their lives, one critical. A court of inquiry has been ordered: BSF
ಗುಂಡುಹಾರಿಸಿ ನಾಲ್ವರು ಸಹೋದ್ಯೋಗಿಗಳ ಕೊಂದು ಬಿಎಸ್​ಎಫ್ ಯೋಧ ಮೃತ

ಅಮೃತಸರ(ಪಂಜಾಬ್): ಸಹೋದ್ಯೋಗಿಗಳ ಮೇಲೆ ಬಿಎಸ್​ಎಫ್​ನ ಯೋಧನೋರ್ವ​ ಮನಬಂದಂತೆ ಗುಂಡು ಹಾರಿಸಿದ್ದು ಒಟ್ಟು ಐವರು ಮೃತಪಟ್ಟಿರುವ ಘಟನೆ ಪಂಜಾಬ್​​ನ ಅಮೃತಸರದಲ್ಲಿ ನಡೆದಿದೆ.

ಅಮೃತಸರ ಬಿಎಸ್​ಎಫ್​ ಮುಖ್ಯಕಚೇರಿ 144 ಬಿಎನ್​​ ಖಾಸಾದಲ್ಲಿ ಘಟನೆ ನಡೆದಿದೆ. ಸತ್ತೆಪ್ಪ ಎಸ್​ಕೆ ಎಂಬಾತ ಗುಂಡು ಹಾರಿಸಿದ್ದಾನೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಸತ್ತೆಪ್ಪ ಸೇರಿ ಐವರು ಸಾವನ್ನಪ್ಪಿದ್ದಾರೆ. ಮತ್ತೋರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ.

  • #Breakingnews

    5 troops were injured today due to fratricide committed by Ct Satteppa SK at HQ 144 Bn Khasa, Amritsar. Ct Satteppa S K was also injured. Out of the 6 injured, 5 troops incl Ct Satteppa, have lost their lives, one critical. A court of inquiry has been ordered

    — DD News (@DDNewslive) March 6, 2022 " class="align-text-top noRightClick twitterSection" data=" ">

ಈ ಬಗ್ಗೆ ನ್ಯಾಯಾಲಯದ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಸತ್ತೆಪ್ಪ ಎಸ್​ಕೆ ಕಾನ್ಸ್​ಟೇಬಲ್ ಟ್ರೇಡ್ಸ್​ಮನ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದನು ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.