ವಲ್ಸಾದ್ (ಗುಜರಾತ್): ಗುಜರಾತ್‌ನ ವಾಲ್ದಾಸ್ ಜಿಲ್ಲೆಯ ವಾಪಿ ಪ್ರದೇಶದಲ್ಲಿನ ಪೇಪರ್ ಮಿಲ್‌ನಲ್ಲಿ ಸಂಭವಿಸಿದ ಬೆಂಕಿ ಇನ್ನೂ ನಂದಿಲ್ಲ. ಸುಮಾರು ನಾಲ್ಕೂವರೆ ಗಂಟೆಗಳಿಂದಲೂ ಉರಿಯುತ್ತಿದೆ ಎಂದು ಅಧಿಕಾರಿ ವಾಪಿ ಅಂಕಿತ್ ಲೌಥೆ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸುಮಾರು 20 ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ದೌಡಾಯಿಸಿದ್ದಾರೆ. ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ, ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಪೇಪರ್ ಮಿಲ್ ಉರಿಯುತ್ತಿದೆ ಎಂದು ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.
ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸದ್ಯಕ್ಕೆ ಯಾವುದೇ ಅನಾಹುತದ ವರದಿಯಾಗಿಲ್ಲ.