ETV Bharat / bharat

FIR Against Zuckerberg: ಅಖಿಲೇಶ್​ ಯಾದವ್​ ವಿರುದ್ಧ ವಿವಾದಿತ ಪೋಸ್ಟ್​​​​​, ಜುಕರ್​ಬರ್ಗ್​ ವಿರುದ್ಧ​ ದೂರು - ಮಾರ್ಕ್​​​ ಜುಕರ್​ಬರ್ಗ್​ ವಿರುದ್ಧ ಪ್ರಕರಣ

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ವಿರುದ್ಧ ವಿವಾದಿತ ಪೋಸ್ಟ್​ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಕನೌಜ್​​ನಲ್ಲಿ ಮಾರ್ಕ್​ ಜುಕರ್​ಬರ್ಗ್​ ಹಾಗೂ ಇತರ 49 ಜನರ ವಿರುದ್ಧ ದೂರು ದಾಖಲಾಗಿದೆ.

FIR against Zukerberg
FIR against Zukerberg
author img

By

Published : Dec 1, 2021, 4:42 PM IST

ಕನೌಜ್​​(ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್​​ ವಿರುದ್ಧ ವಿವಾದಿತ ಪೋಸ್ಟ್ ಮಾಡಿರುವ ಆರೋಪದ ಮೇಲೆ ಫೇಸ್​ಬುಕ್​ ಸಿಇಒ ಮಾರ್ಕ್​​​ ಜುಕರ್​ಬರ್ಗ್​ ವಿರುದ್ಧ ಪ್ರಕರಣ ದಾಖಲಾಗಿದೆ.

ಉತ್ತರ ಪ್ರದೇಶದ ಕನೌಜ್​​ ಜಿಲ್ಲೆಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಜುಕರ್​ಬರ್ಗ್​​ ಜೊತೆಗೆ ಇತರ 49 ಜನರ ಹೆಸರು ಇದರಲ್ಲಿ ಸೇರ್ಪಡೆಯಾಗಿದೆ. ವಿಶೇಷವೆಂದರೆ ಅಖಿಲೇಶ್​ ಯಾದವ್​​ ವಿರುದ್ಧ ಖುದ್ದಾಗಿ ಜುಕರ್​ಬರ್ಗ್​ ಯಾವುದೇ ರೀತಿಯ ವಿವಾದಿತ ಪೋಸ್ಟ್​ ಹಾಕಿಲ್ಲ. ಆದರೆ, ಅವಹೇಳನಕಾರಿ ಕಾಮೆಂಟ್​​ ಹಾಕಲು ಕೆಲವರು ಸಾಮಾಜಿಕ ಜಾಲತಾಣ ಫೇಸ್​​ಬುಕ್​ ಬಳಕೆ ಮಾಡಿರುವ ಕಾರಣ ಎಫ್​​ಐಆರ್​ ದಾಖಲಾಗಿದೆ.

ಉತ್ತರ ಪ್ರದೇಶದ ಕನೌಜ್​ ಜಿಲ್ಲೆಯ ಸರಹತಿ ಗ್ರಾಮದ ನಿವಾಸಿ ಅಮಿತ್ ಕುಮಾರ್​​ ಈ ಪ್ರಕರಣ ದಾಖಲು ಮಾಡಿದ್ದು, ಅಖಲೇಶ್ ಯಾದವ್ ವಿರುದ್ಧ ಅವಹೇಳನಕಾರಿ ಕಮೆಂಟ್​ ಪೋಸ್ಟ್​ ಮಾಡಿದ್ದಕ್ಕಾಗಿ ಜುಕರ್​ಬರ್ಗ್​ ಮತ್ತು ಇತರ 49 ಜನರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಬುವಾ ಬಾಬುವಾ ಎಂಬ ಶೀರ್ಷಕೆಯಡಿ ಫೇಸ್​​ಬುಕ್​​ನಲ್ಲಿ ಪೋಸ್ಟ್ ಮಾಡಿ ಅಖಿಲೇಶ್​ ಯಾದವ್​​​ ಇಮೇಜ್​ಗೆ ದಕ್ಕೆ ತರಲಾಗಿದೆ ಎಂದು ದೂರಿನಲ್ಲಿ ದಾಖಲು ಮಾಡಲಾಗಿದೆ.

ಇದನ್ನೂ ಓದಿರಿ: '83' trailer : 24 ಗಂಟೆಯಲ್ಲೇ 50 ಮಿಲಿಯನ್​ ವೀಕ್ಷಣೆಗೊಳಗಾದ ಮೊದಲ ಹಿಂದಿ ಟ್ರೇಲರ್​​!

ಏನಿದು ಬುವಾ ಬಾಬುವಾ!

2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಅಖಿಲೇಶ್​ ಯಾದವ್​​​ ಮೈತ್ರಿ ಮಾಡಿಕೊಂಡಿದ್ದರು. ಹೀಗಾಗಿ ಬುವಾ ಬಾಬುವಾ ಎಂಬ ಹೆಸರು ಇಡಲಾಗಿತ್ತು. ಫೇಸ್​ಬುಕ್​​ನಲ್ಲೂ ಓ ಹೆಸರಿನೊಂದಿಗೆ ಪೋಸ್ಟ್​ ಮಾಡಲಾಗಿತ್ತು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಅಧಿಕಾರಿಗಳು ಮಾರ್ಕ್​​ ಜುಕರ್​ಬರ್ಗ್​ ಹೆಸರು ಕೈಬಿಟ್ಟಿದ್ದಾರೆಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.