ETV Bharat / bharat

ಬಿಜೆಪಿ ಕಾರ್ಯಕರ್ತರ ದೊಣ್ಣೆಯಿಂದ ಥಳಿಸಿದ ಟಿಎಂಸಿ ಶಾಸಕ: ವಿಡಿಯೋ - ಬಿಜೆಪಿಗರ ಮೇಲೆ ಹಲ್ಲೆ ಮಾಡಿದ ಟಿಎಂಸಿ ಶಾಸಕ

ಪಶ್ಚಿಮಬಂಗಾಳದಲ್ಲಿ ಟಿಎಂಸಿ, ಬಿಜೆಪಿ ಮಧ್ಯೆ ಕಾದಾಟ ಸಹಜವಾಗಿದೆ. ಬಿಜೆಪಿ ಮೆರವಣಿಗೆ ರ‍್ಯಾಲಿಯ ಮೇಲೆ ಟಿಎಂಸಿ ಶಾಸಕ, ಕಾರ್ಯಕರ್ತರು ದಾಳಿ ಮಾಡಿ ಕೋಲಿನಿಂದ ಥಳಿಸಿದ ಘಟನೆ ನಡೆದಿದೆ.

fight-between-bjp-and-tmc-in-west-bengal
ಬಿಜೆಪಿ ಕಾರ್ಯಕರ್ತರ ದೊಣ್ಣೆಯಿಂದ ಥಳಿಸಿದ ಟಿಎಂಸಿ ಶಾಸಕ
author img

By

Published : Aug 6, 2022, 10:15 AM IST

ಚಿನ್ಸುರಾ(ಪಶ್ಚಿಮಬಂಗಾಳ): ಮೆರವಣಿಗೆಯಲ್ಲಿ ಕೂಗಿದ ಘೋಷಣೆಗಳಿಂದ ಕ್ರೋಧಗೊಂಡ ಟಿಎಂಸಿ ಶಾಸಕ ಮತ್ತು ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಶಾಸಕರು ಬಿಜೆಪಿ ಬಾವುಟ ಅಳವಡಿಸಿದ್ದ ಕೋಲಿನಿಂದಲೇ ಅವರನ್ನು ಥಳಿಸಿದ್ದಾರೆ.

ತೃಣಮೂಲ ಕಾಂಗ್ರೆಸ್​ ಶಾಸಕ ಅಸಿತ್ ಮಜುಂದಾರ್ ಹಲ್ಲೆ ನಡೆಸಿದ್ದಲ್ಲದೇ, ಹಲ್ಲೆ ಪ್ರೇರೇಪಣೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಆಗಿದ್ದೇನು?: ಬಿಜೆಪಿ ಕಾರ್ಯಕರ್ತರು ಆಡಳಿತ ಪಕ್ಷದ ವಿರುದ್ಧ ಪ್ರತಿಭಟನಾ ರ‍್ಯಾಲಿ ನಡೆಸುತ್ತಿದ್ದರು. ಈ ವೇಳೆ, ಅದು ಟಿಎಂಸಿ ಕಚೇರಿ ಮುಂದೆ ಹೋಗುತ್ತಿದ್ದಾಗ, ಅಲ್ಲಿಯೇ ಇದ್ದ ಶಾಸಕ ಅಸಿತ್​ ಮುಜುಂದಾರ್​ ಮತ್ತು ಅವರ ಕಾರ್ಯಕರ್ತರು ಬಿಜೆಪಿ ವಾಹನದ ಮೇಲೆ ಏಕಾಏಕಿ ದಾಳಿ ನಡೆಸಿದರು.

ಬಿಜೆಪಿ ಕಾರ್ಯಕರ್ತರ ದೊಣ್ಣೆಯಿಂದ ಥಳಿಸಿದ ಟಿಎಂಸಿ ಶಾಸಕ

ಕಾರ್ಯಕರ್ತರಿಗೆ ಬಿಜೆಪಿ ಸಹವರ್ತಿಗಳನ್ನು ಥಳಿಸುವಂತೆ ಆದೇಶಿಸಿದರು. ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು ಬಿಜೆಪಿಗರ ಮೇಲೆ ಮುಗಿಬಿದ್ದಿದ್ದಾರೆ. ಮಹಿಳೆಯರು ಬಿಜೆಪಿಗರ ಕೊರಳುಪಟ್ಟಿ ಹಿಡಿದು ಹೊಡೆದಿದ್ದಾರೆ.

ಕೋಲಿನಿಂದ ಹೊಡೆದ ಶಾಸಕ: ಬಿಜೆಪಿಗರು ಬಾವುಟ ಅಳವಡಿಸಿದ್ದ ಕೋಲನ್ನೇ ಕಿತ್ತುಕೊಂಡ ಟಿಎಂಸಿ ಶಾಸಕ ಅಸಿತ್​ ಮುಜುಂದಾರ್​ ಅವರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಟಿಎಂಸಿ ಕಾರ್ಯಕರ್ತರ ದಾಳಿಯಿಂದಾಗಿ ಬಿಜೆಪಿಗರು ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ.

ಬಿಜೆಪಿಗರ ಮೇಲೆ ನಡೆದ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬಳಿಕ ಇದು ಬಿಜೆಪಿ ಮತ್ತು ಟಿಎಂಸಿ ನಡುವಿನ ಕಿತ್ತಾಟಕ್ಕೂ ಕಾರಣವಾಗಿದೆ. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಕೆಲ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಕೊಲೆಗೆ ಯತ್ನ ಆರೋಪ: ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡಿದ ಬಳಿಕ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಟಿಎಂಸಿ ಶಾಸಕ ಅಸಿತ್ ಮಜುಂದಾರ್, ತಮ್ಮ ಕಾರನ್ನು ತಡೆದ ಬಿಜೆಪಿಗರು ನನ್ನ ಹತ್ಯೆಗೆ ಯತ್ನಿಸಿದ್ದರು. ಶಾಸಕಾಂಗ ಸಭೆಯ ಸಭೆ ಮುಗಿಸಿ ವಾಪಸ್​ ಆಗುವಾಗ ಕಾರು ತಡೆದು ಕಿರುಕುಳ ನೀಡಿದರು. ಹೀಗಾಗಿ ಗಲಾಟೆ ನಡೆಯಿತು ಎಂದಿದ್ದಾರೆ.

ಓದಿ; ಇಸ್ರೇಲ್​ - ಗಾಜಾ ನಡುವೆ ದಾಳಿ - ಪ್ರತಿದಾಳಿ.. ಹಮಾಸ್ ಕಮಾಂಡರ್ ಸೇರಿ 10 ಜನರ ಸಾವು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.