ಪ್ರಕಾಶಂ ಜಿಲ್ಲೆ(ಆಂಧ್ರ) : ಕೊಳೆತ ಸ್ಥಿತಿಯಲ್ಲಿದ್ದ ಪತ್ತೆಯಾದ ಶವ ಪರಿಶೀಲನೆಗೆ ಬಂದ ಮಹಿಳಾ ಪೊಲೀಸ್ ಓರ್ವರು ಅದನ್ನು ಹೆಗಲ ಮೇಲೆ ಹೊತ್ತು ರಸ್ತೆ ಬದಿಗೆ ತಂದಿದ್ದಾರೆ.
ಇಲ್ಲಿನ ಹನುಮಂತುನಿಪಾಡು ವಲಯದ ಹಾಜಿಪುರಂ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ವ್ಯಕ್ತಿಯ ಶವವನ್ನು ಗ್ರಾಮದ ಕುರಿಗಾಹಿಗಳು ಪತ್ತೆ ಮಾಡಿದ್ದಾರೆ. ನಂತರ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿ, ಕನಿಗಿರಿ ಸಿಐ ಪಾಪರಾವ್, ಹನುಮಂತುನಿಪಾಡು ಎಸ್‌ಐ ಕೃಷ್ಣ ಪಾವನಿ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
ಇನ್ನು ಶವ ಸಂಪೂರ್ಣ ಕೊಳೆತು ಹೋಗಿತ್ತು. ದುರ್ವಾಸನೆ ಬರುತ್ತಿತ್ತು. ಈ ವೇಳೆ ಸ್ಥಳೀಯರು ಶವವನ್ನು ಹತ್ತಿರ ಹೋಗಿ ನೋಡಲು ಹರಸಾಹಸ ಪಟ್ಟರು. ಹೀಗಿರುವಾಗ ಶವವನ್ನು ಅರಣ್ಯ ಪ್ರದೇಶದಿಂದ ರಸ್ತೆಗೆ ಸ್ಥಳಾಂತರಿಸಲು ಯಾರೂ ಮುಂದಾಗಲಿಲ್ಲ.
ಇದನ್ನೂ ಓದಿ: ಅಪ್ಪುಗೆ ವಿಶೇಷ ಗೌರವ ಸಲ್ಲಿಸಿದ ಹುಬ್ಬಳ್ಳಿ ಜನ : ಬಣ್ಣದ ಹಬ್ಬದಲ್ಲಿ ಪುನೀತ್ ಸ್ಮರಣೆ
ಪರಿಣಾಮ ಮಹಿಳಾ ಎಸ್‌ಐ ಕೃಷ್ಣ ಪಾವನಿ ಮತ್ತೊಬ್ಬರ ಸಹಾಯದಿಂದ ಶವವನ್ನು ಬಿದಿರಿನ ಡೋಲಿಗೆಗೆ ಕಟ್ಟಿ ಸುಮಾರು 5 ಕಿ.ಮೀ ಸಂಚರಿಸಿ ರಸ್ತೆ ಬದಿಗೆ ತಂದಿದ್ದಾರೆ. ಈ ಕೆಲಸ ಮಾಡಿದ ಮಹಿಳೆ ಎಸ್‌ಐ ಕೃಷ್ಣ ಪಾವನಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.