ವಿಜಯನಗರಂ(ಆಂಧ್ರಪ್ರದೇಶ): ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ದಾರುಣ ಘಟನೆ ಬೆಳಕಿಗೆ ಬಂದಿದೆ. ರೈಲು ಬರುತ್ತಿದ್ದಾಗ ಹಳಿಗಳ ಮೇಲೆ ಓಡುತ್ತಿದ್ದ ಮಗಳನ್ನು ರಕ್ಷಿಸಲು ಹೋದಾಗ ಡಿಕ್ಕಿಯಾಗಿ ತಂದೆ- ಮಗಳು ಇಬ್ಬರೂ ಮೃತಪಟ್ಟಿದ್ದಾರೆ.
ವಿಜಯನಗರ ಜಿಲ್ಲೆಯ ಮಧುಪಾದ ಗ್ರಾಮದಲ್ಲಿ ಈ ಮನಕಲಕುವ ಘಟನೆ ಇತ್ತೀಚೆಗೆ ನಡೆದಿದೆ. ವಿಜಯನಗರದಿಂದ ಬೊಬ್ಬಿಲಿ ಕಡೆಗೆ ಹೋಗುತ್ತಿದ್ದ ರೈಲು ತಂದೆ- ಮಗಳನ್ನು ಬಲಿ ಪಡೆದಿದೆ.
ಏನಾಯ್ತು: ಮೃತರ ಪತ್ನಿ ನೀಡಿದ ಹೇಳಿಕೆಯ ಮೇರೆಗೆ, ಪತಿ, ಮಗಳನ್ನು ಕರೆದುಕೊಂಡ ಸಂಬಂಧಿಕರ ಮನೆಗೆ ಹೋಗಿದ್ದರು. ವಾಪಸ್ ಬರುವಾಗ ರೈಲು ಬರುತ್ತಿರುವ ಕಾರಣ ಹಳಿಯ ಪಕ್ಕದಲ್ಲಿ ಬೈಕ್ ನಿಲ್ಲಿಸಿದ್ದರು. ಈ ವೇಳೆ ಹಿಂದೆ ಕುಳಿತಿದ್ದ ಮಗಳು ಇಳಿದು ಹಳಿಗಳ ಮೇಲೆ ಓಡಿದ್ದಾಳೆ.
ಇದನ್ನು ಕಂಡ ತಂದೆ ಆಕೆಯನ್ನು ರಕ್ಷಿಸಲು ಓಡಿ ಹೋದಾಗ ರೈಲು ಹಿಂಬದಿಯಾಗಿ ಬಂದು ಇಬ್ಬರನ್ನೂ ಗುದ್ದಿಕೊಂಡು ಹೋಗಿದೆ. ಇದರಿಂದ ತಂದೆ- ಮಗಳು ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಮಗಳ ಮಾನಸಿಕವಾಗಿ ಅಸ್ವಸ್ಥೆಯಾಗಿದ್ದಳು ಎಂದು ತಾಯಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓದಿ: ರೈಲ್ವೆ ಹಳಿ ಪಕ್ಕ ಬಾಂಬ್ ಸ್ಫೋಟ; ಬಾಲಕ ಸಾವು, ಇನ್ನಿಬ್ಬರಿಗೆ ಗಾಯ