ಪುದುಚೇರಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳು ಅದೆಷ್ಟೋ ಜನರ ಬೆಳಕನ್ನೇ ಕಸಿದುಕೊಳ್ಳುತ್ತದೆ. ಆದ್ದರೆ ಇಲ್ಲಿ ಪಟಾಕಿ ಇಬ್ಬರ ಜೀವವನ್ನೇ ಕಸಿದುಕೊಂಡು ಬಿಟ್ಟಿದೆ. ದೀಪಾವಳಿ ಹಬ್ಬಕ್ಕೆ ಪಟಾಕಿಗಳನ್ನು ಖರೀದಿಸಿ ಸ್ಕೂಟರ್ನಲ್ಲಿ ಮನೆ ಕಡೆ ಹೊರಟ್ಟಿದ್ದ ಅಪ್ಪ- ಮಗ ನಡು ರಸ್ತೆಯಲ್ಲಿ ಸುಟ್ಟು ಕರಕಲಾಗಿದ್ದಾರೆ.
-
A man & his son were charred to death after the firecrackers they were carrying on a scooter exploded. The incident occurred near the Puducherry-Villupuram border on Thursday when Diwali was being celebrated across the country.#puducherry #diwali pic.twitter.com/Pq7qZp4JVB
— Arvind Chauhan (@Arv_Ind_Chauhan) November 5, 2021 " class="align-text-top noRightClick twitterSection" data="
">A man & his son were charred to death after the firecrackers they were carrying on a scooter exploded. The incident occurred near the Puducherry-Villupuram border on Thursday when Diwali was being celebrated across the country.#puducherry #diwali pic.twitter.com/Pq7qZp4JVB
— Arvind Chauhan (@Arv_Ind_Chauhan) November 5, 2021A man & his son were charred to death after the firecrackers they were carrying on a scooter exploded. The incident occurred near the Puducherry-Villupuram border on Thursday when Diwali was being celebrated across the country.#puducherry #diwali pic.twitter.com/Pq7qZp4JVB
— Arvind Chauhan (@Arv_Ind_Chauhan) November 5, 2021
ಪುದುಚೇರಿಯಲ್ಲಿ ಅಪ್ಪ- ಮಗ ಪಟಾಕಿಗಳನ್ನು ತೆಗೆದುಕೊಂಡು ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಈ ವೇಳೆ ನಡುರಸ್ತೆಯಲ್ಲಿ ಇದ್ದಕ್ಕಿದ್ದ ಹಾಗೇ ಪಟಾಕಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸ್ಕೂಟರ್ನಲ್ಲಿದ್ದ ಅಪ್ಪ- ಮಗನ ದೇಹ ಛಿದ್ರ ಛಿದ್ರವಾಗಿ ಬಿದ್ದಿತ್ತು. ಈ ಘಟನೆ ಸಂಪೂರ್ಣ ದೃಶ್ಯ ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು. ಎದೆ ಝಲ್ ಎನ್ನಿಸುವಂತಿದೆ.
ಮೂವರಿಗೆ ಗಾಯ : ಇನ್ನೂ ಈ ಘಟನೆಯಲ್ಲಿ ಸ್ಫೋಟಗೊಂಡ ಸ್ಕೂಟರ್ ಪಕ್ಕದಲ್ಲಿ ಬರುತ್ತಿದ್ದ ಇನ್ನೂ ಮೂವರಿಗೆ ತೀವ್ರಗಾಯಗಳಾಗಿವೆ. ಕೂಡಲೇ ಅವರನ್ನು ಪುದುಚೇರಿಯ ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ ಗೆ ಕರೆದುಕೊಂಡು ಹೋಗಲಾಗಿದೆ. ಜೊತೆಗೆ ಸ್ಫೋಟದ ತೀವ್ರತೆಗೆ ಒಂದು ಲಾರಿ ಹಾಗೂ 2 ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಘಟನೆ ನಡೆದ ಕೂಡಲೇ ವಿಲ್ಲುಪುರಂ ಜಿಲ್ಲಾ ಡಿಐಜಿ ಪಾಂಡಿಯನ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.