ಝಾಲವಾಡ್ (ರಾಜಸ್ಥಾನ): ಮನೆಯಿಂದ ಒದ್ದು ಹೊರ ಹಾಕಿದ್ದ ಹೆಣ್ಣು ಮಕ್ಕಳೇ ಇಂದು ತಂದೆ ಹಾಗೂ ತಾತನ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕೆಲ ದಿನಗಳ ಹಿಂದೆ ರೂಪನಗರ ಬ್ರಿಜೇಶ್ ಎಂಬುವರು ತಮ್ಮ ತಂದೆಯೊಂದಿಗೆ ಸೇರಿಕೊಂಡು ಇಬ್ಬರು ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದರು.
ಆದರೆ, ಎರಡು ದಿನಗಳ ಹಿಂದೆ ರಮೇಶ್ ಚಂದ್ರ ಮೃತಪಟ್ಟರು. ಕೆಲವೇ ಗಂಟೆಗಳ ಅಂತರದಲ್ಲಿ ಪುತ್ರ ಬ್ರಿಜೇಶ್ ಕೂಡ ನಿಧನರಾಗಿದ್ದು, ಅನಾಥ ಶವವಾಗಿದ್ದರು. ಬಳಿಕ, ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಮಕ್ಕಳು ಇತರರ ಸಹಾಯದಿಂದ ಅಂತ್ಯಕ್ರಿಯೆ ಮಾಡಿದ್ದಾರೆ.
ತೊಂದರೆಯಲ್ಲಿರುವ ಹೆಣ್ಮಕ್ಕಳು?
ಇಬ್ಬರು ಹೆಣ್ಣುಮಕ್ಕಳು ಇನ್ನೂ ಓದುತ್ತಿದ್ದಾರೆ. ತಾಯಿ ನಿಟಿನಾ ಸಣ್ಣ ಪುಟ್ಟ ವಸ್ತುಗಳನ್ನು ಮಾರಿ ಬದುಕು ಸಾಗಿಸುತ್ತಿದ್ದಾರೆ. ಹೀಗಾಗಿ, ಯಾರಾದರೂ ದಾನಿಗಳು ಇವರ ನೆರವಿಗೆ ಬರಬೇಕೆಂದು ರಕ್ತದಾನಿಗಳ ಗುಂಪೊಂದು ಮನವಿ ಮಾಡಿದೆ.