ನವದೆಹಲಿ: ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ರೈತರ ಪ್ರತಿಭಟನೆ 42 ನೇ ದಿನವೂ ಮುಂದುವರೆದಿದೆ. ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಬೆಳೆಗಳನ್ನು ಖರೀದಿಸಬೇಕೆಂದು ಒತ್ತಾಯಿಸಿ, ರೈತ ಸಂಘಗಳ ಮುಖಂಡರು ಕರೆ ನೀಡಿದ್ದ ಟ್ರ್ಯಾಕ್ಟರ್ ಮಾರ್ಚ್ ಪ್ರಾರಂಭವಾಗಿದೆ.
-
#WATCH Farmers protesting against Centre's three farm laws hold tractor rally at Ghazipur border near Delhi
— ANI (@ANI) January 7, 2021 " class="align-text-top noRightClick twitterSection" data="
The next round of talks between farmers and Union Government is scheduled to be held tomorrow. pic.twitter.com/zneC5drOSA
">#WATCH Farmers protesting against Centre's three farm laws hold tractor rally at Ghazipur border near Delhi
— ANI (@ANI) January 7, 2021
The next round of talks between farmers and Union Government is scheduled to be held tomorrow. pic.twitter.com/zneC5drOSA#WATCH Farmers protesting against Centre's three farm laws hold tractor rally at Ghazipur border near Delhi
— ANI (@ANI) January 7, 2021
The next round of talks between farmers and Union Government is scheduled to be held tomorrow. pic.twitter.com/zneC5drOSA
ಇನ್ನು ರೈತರು ಟ್ರ್ಯಾಕ್ಟರ್ ರ‍್ಯಾಲಿಗೆ ಕರೆಕೊಟ್ಟ ಹಿನ್ನೆಲೆ ದೆಹಲಿ-ಸಿಂಘು ಗಡಿಯಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ. ಪೂರ್ವ ಮತ್ತು ಪಶ್ಚಿಮ ವಲಯ ಸೇರಿದಂತೆ ದೆಹಲಿಯ ನಾಲ್ಕು ಗಡಿಗಳಲ್ಲಿ ಇಂದು ಟ್ರಾಕ್ಟರ್ ರ‍್ಯಾಲಿ ನಡೆಸಲು ರೈತರು ಸಜ್ಜಾಗಿದ್ದಾರೆ.
ಆಂದೋಲನವನ್ನು ತೀವ್ರಗೊಳಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಪಂಜಾಬ್‌ನ ರೈತ ಮುಖಂಡ ಮತ್ತು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಪ್ರಧಾನ ಕಾರ್ಯದರ್ಶಿ ಹರಿಂದರ್ ಸಿಂಗ್ ಲಖೋವಾಲ್ ತಿಳಿಸಿದ್ದಾರೆ. ಮೆರವಣಿಗೆಗೆ ಪಂಜಾಬ್‌ನ ರೈತರು ತಮ್ಮ ಟ್ರಾಕ್ಟರುಗಳೊಂದಿಗೆ ಬರುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
![tractor parade](https://etvbharatimages.akamaized.net/etvbharat/prod-images/10147248_mng.jpg)
ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ರೈತರು ಕೂಡ ರ‍್ಯಾಲಿಯಲ್ಲಿ ಸೇರಿಕೊಳ್ಳುತ್ತಿದ್ದಾರೆ. ಈ 'ಟ್ರ್ಯಾಕ್ಟರ್ ಮಾರ್ಚ್' ಜನವರಿ 26 ರಂದು ನಡೆಯಲಿರುವ 'ರಿಪಬ್ಲಿಕ್ ಡೇ ಪರೇಡ್'ನ ಟ್ರೈಲರ್ ಆಗಿರುತ್ತದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಇದನ್ನೂ ಓದಿ: ಸೆರಮ್ ವಿರುದ್ಧ ದಾವೆ ಹೂಡಿದ ಮಹಾರಾಷ್ಟ್ರದ ಕ್ಯೂಟಿಸ್ ಬಯೋಟೆಕ್ ಕಂಪನಿ
ಸೋಮವಾರ ಕೇಂದ್ರ ಸರ್ಕಾರದೊಂದಿಗೆ ಏಳನೇ ಸುತ್ತಿನ ಮಾತುಕತೆ ಅಪೂರ್ಣವಾಗಿತ್ತು. ಹಾಗಾಗಿ ರೈತರು ಇಂದು 'ಟ್ರ್ಯಾಕ್ಟರ್ ಮಾರ್ಚ್' ನಡೆಸಲು ನಿರ್ಧರಿಸಿದ್ದಾರೆ. ಈ ಮೊದಲು ಸಂಯುಕ್ತ ಕಿಸಾನ್ ಮೋರ್ಚಾ ರ‍್ಯಾಲಿಯನ್ನು ಜನವರಿ 6 ಕ್ಕೆ ನಿಗದಿಪಡಿಸಿದ್ದರು. ಆದರೆ ಹವಾಮಾನ ವೈಪರೀತ್ಯದಿಂದಾಗಿ ರ್ಯಾಲಿಯನ್ನು ಇಂದಿಗೆ (ಜನವರಿ 7) ಮುಂದೂಡಲಾಗಿತ್ತು.