ETV Bharat / bharat

ದುಬಾರಿ ಲಸಿಕೆ, ಕೇಂದ್ರದಿಂದ ಜನತೆಗೆ ವಂಚನೆ; ರಾಹುಲ್ ವಾಗ್ದಾಳಿ

ಲಸಿಕೆಯನ್ನು ಅಭಿವೃದ್ಧಿಪಡಿಸಲು ಜನರ ಹಣವನ್ನು ಲಸಿಕಾ ಕಂಪನಿಗಳಿಗೆ ನೀಡಲಾಗಿತ್ತು. ಆದರೆ ಈಗ ಅದೇ ಲಸಿಕೆಗಳನ್ನು ಜನತೆ ವಿಶ್ವದಲ್ಲೇ ಅತಿ ದುಬಾರಿ ದರಕ್ಕೆ ಕೊಂಡುಕೊಳ್ಳುವಂತೆ ಮಾಡಲಾಗುತ್ತಿದೆ. ಮತ್ತೊಮ್ಮೆ ಕೇಂದ್ರದ ವಿಫಲ ಸರ್ಕಾರವು ಜನತೆಯನ್ನು ವಂಚಿಸಿದೆ. ಮೋದಿ ಸರ್ಕಾರವು ಕೇವಲ ತನ್ನ ಮಿತ್ರರಿಗಾಗಿ ಕೆಲಸ ಮಾಡುತ್ತಿದೆ." ಎಂದು ರಾಹುಲ್ ಟೀಕಿಸಿದ್ದಾರೆ.

'Failed system' fails our citizens: Rahul Gandhi targets Centre over COVID-19 vaccine prices
ದುಬಾರಿ ಲಸಿಕೆ, ಕೇಂದ್ರದಿಂದ ಜನತೆಗೆ ವಂಚನೆ; ರಾಹುಲ್ ವಾಗ್ದಾಳಿ
author img

By

Published : Apr 28, 2021, 8:08 PM IST

ನವದೆಹಲಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್-19 ಲಸಿಕೆ ನೀಡುವ ಮೂರನೇ ಹಂತದ ಲಸಿಕಾ ಅಭಿಯಾನದ ಆರಂಭಕ್ಕೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ಲಸಿಕೆ ತಯಾರಿಸುವ ಕಂಪನಿಗಳಿಗಾಗಿ ಕೇಂದ್ರ ಸರ್ಕಾರವು ಈಗಾಗಲೇ ಬೃಹತ್ ಪ್ರಮಾಣದ ಸಾರ್ವಜನಿಕರ ಹಣವನ್ನು ವಿನಿಯೋಗಿಸಿದೆ. ಆದರೆ ಈಗ ಅದೇ ಲಸಿಕೆಯನ್ನು ಜನತೆಗೆ ದುಬಾರಿ ಬೆಲೆಯಲ್ಲಿ ಮಾರಲಾಗುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ.

ವಿಶ್ವದ ಬೇರಾವ ದೇಶದಲ್ಲೂ ಲಸಿಕೆ ಇಷ್ಟು ದುಬಾರಿಯಾಗಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಗೆಳೆಯರಿಗಾಗಿ ಜನತೆಯನ್ನು ಲೂಟಿ ಮಾಡುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.

"ಲಸಿಕೆಯನ್ನು ಅಭಿವೃದ್ಧಿಪಡಿಸಲು ಜನರ ಹಣವನ್ನು ಲಸಿಕಾ ಕಂಪನಿಗಳಿಗೆ ನೀಡಲಾಗಿತ್ತು. ಆದರೆ ಈಗ ಅದೇ ಲಸಿಕೆಗಳನ್ನು ಜನತೆ ವಿಶ್ವದಲ್ಲೇ ಅತಿ ದುಬಾರಿ ದರಕ್ಕೆ ಕೊಂಡುಕೊಳ್ಳುವಂತೆ ಮಾಡಲಾಗುತ್ತಿದೆ. ಮತ್ತೊಮ್ಮೆ ಕೇಂದ್ರದ ವಿಫಲ ಸರ್ಕಾರವು ಜನತೆಯನ್ನು ವಂಚಿಸಿದೆ. ಮೋದಿ ಸರ್ಕಾರವು ಕೇವಲ ತನ್ನ ಮಿತ್ರರಿಗಾಗಿ ಕೆಲಸ ಮಾಡುತ್ತಿದೆ." ಎಂದು ರಾಹುಲ್ ಟೀಕಿಸಿದ್ದಾರೆ.

ಕೊರೊನಾ ಕುರಿತಾದ ನಿಜವಾದ ಮಾಹಿತಿಯು ಜನತೆಗೆ ತಲುಪದಂತೆ ಕೇಂದ್ರ ಸರ್ಕಾರ ಕುತಂತ್ರ ಮಾಡುತ್ತಿದೆ. ಮಹಾಮಾರಿಯ ಕುರಿತಾದ ನಿಜವಾದ ಮಾಹಿತಿಯನ್ನು ಸರ್ಕಾರ ನಿರ್ಬಂಧಿಸುತ್ತಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.