ETV Bharat / bharat

ಗೋರಿಗೆ ಬೀಗ ಹಾಕಿದ ಚಿತ್ರ ಪಾಕಿಸ್ತಾನದ್ದಲ್ಲ, ಅದಿರೋದು ಹೈದರಾಬಾದ್​​ನ ಸ್ಮಶಾನದಲ್ಲಿ! - ಗೋರಿಗೆ ಬೀಗ ಹಾಕಿದ ಚಿತ್ರ

ಪಾಕಿಸ್ತಾನದಲ್ಲಿ ಗೋರಿಗಳಿಗೆ ಬೀಗ ಹಾಕಲಾಗುತ್ತಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ವೈರಲ್​ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಚಿತ್ರ ತೆಲಂಗಾಣದ ಹೈದರಾಬಾದ್​ನಲ್ಲಿನ ಸ್ಮಶಾನಕ್ಕೆ ಸೇರಿದ್ದು ಎಂಬುದು ಬೆಳಕಿಗೆ ಬಂದಿದೆ.

ಗೋರಿಗೆ ಬೀಗ ಹಾಕಿದ ಚಿತ್ರ
ಗೋರಿಗೆ ಬೀಗ ಹಾಕಿದ ಚಿತ್ರ
author img

By

Published : May 1, 2023, 8:26 PM IST

ಹೈದರಾಬಾದ್ (ತೆಲಂಗಾಣ): ಶವ ಸಂಭೋಗವನ್ನು ತಡೆಯಲು ಪಾಕಿಸ್ತಾನದಲ್ಲಿ ಸಮಾಧಿಗಳಿಗೆ ಸರಳುಗಳನ್ನು ಬಳಸಿ ಬೀಗ ಹಾಕಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವೊಂದು ಭಾರೀ ವೈರಲ್​ ಆಗಿತ್ತು. ಆದರೆ, ಅದು ಪಾಕಿಸ್ತಾನದ್ದಲ್ಲ, ತೆಲಂಗಾಣದ ಹೈದರಾಬಾದ್‌ನಲ್ಲಿರುವ ಸ್ಮಶಾನದ ಚಿತ್ರವಾಗಿದೆ.

ಮಾಧ್ಯಮಗಳಲ್ಲಿ ಈ ಚಿತ್ರ ಬಳಸಿ ಪಾಕಿಸ್ತಾನದಲ್ಲಿ ಮೃತಪಟ್ಟ ಹೆಣ್ಣುಮಕ್ಕಳನ್ನು ಸಮಾಧಿ ಮಾಡಿದ ಬಳಿಕ ಅತ್ಯಾಚಾರ ಮಾಡಲಾಗುತ್ತಿದೆ. ಈ ಪೈಶಾಚಿಕ ಕೃತ್ಯವನ್ನು ತಡೆಯಲು ಅಲ್ಲಿನ ಪೋಷಕರು ಸರಳುಗಳನ್ನು ಜೋಡಿಸಿ ಬೀಗ ಹಾಕುತ್ತಿದ್ದಾರೆ ಎಂದು ವರದಿಯಾಗಿತ್ತು. ಇದನ್ನು ಆ ದೇಶದ ಮಾಜಿ ಧರ್ಮ ಪ್ರಚಾರಕರೊಬ್ಬರು ಚಿತ್ರದ ಸಮೇತ ಟ್ವೀಟ್​ ಮಾಡಿ, ಪಾಕಿಸ್ತಾನದಲ್ಲಿ ಸಮಾಧಿಯಾದ ಹೆಣ್ಣುಮಕ್ಕಳ ಶವಗಳನ್ನು ಸಂಭೋಗಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಬರೆದುಕೊಂಡಿದ್ದರು.

  • This Grave is in India not from Pakistan.

    It is in DarabJung Colony, Madannapet, Hyderabad, Telangana

    And a lock has been put on this grave so that no one should bury someone else in this grave. pic.twitter.com/p1WaUlwDcf

    — زماں (@Delhiite_) April 30, 2023 " class="align-text-top noRightClick twitterSection" data=" ">

ಚಿತ್ರದಲ್ಲಿರುವಂತೆ, ಸರಳುಗಳಿಂದ ಮಾಡಿದ ಬಾಗಿಲನ್ನು ಸಮಾಧಿಗೆ ಹೊಂದಿಕೆಯಾಗುವಂತೆ ಜೋಡಿಸಲಾಗಿದೆ. ಅದಕ್ಕೆ ಬೀಗವನ್ನೂ ಜಡಿಯಲಾಗಿದೆ. ಪಾಕಿಸ್ತಾನಿ ಪೋಷಕರು ತಮ್ಮ ಹೆಣ್ಣುಮಕ್ಕಳ ಅವಶೇಷಗಳನ್ನು ರಕ್ಷಿಸಲು ಈ ವಿಧಾನವನ್ನು ಬಳಸುತ್ತಾರೆ ಎಂದು ಶೀರ್ಷಿಕೆ ನೀಡಲಾಗಿದೆ.

ಈ ಚಿತ್ರ ಹೈದರಾಬಾದ್​ನದ್ದು!: ಆದರೆ, ಸಮಾಧಿಗೆ ಬೀಗ ಹಾಕಲಾದ ಚಿತ್ರ ಪಾಕಿಸ್ತಾನದಲ್ಲಿ ಬಳಸಲಾಗಿದೆ ಎಂಬುದು ಸುಳ್ಳು. ಅದು ಮೂಲತಃ ಹೈದರಾಬಾದ್‌ನದು ಎಂಬುದು ಈಗ ಬೆಳಕಿಗೆ ಬಂದಿದೆ. ಇದಾದ ಬಳಿಕ ಪಾಕ್​ನ ಧರ್ಮ ಪ್ರಚಾರಕ ತನ್ನ ಹೇಳಿಕೆಯ ಟ್ವೀಟ್ ಅನ್ನು ಅಳಿಸಿ ಹಾಕಿದ್ದಾರೆ.

ಈ ಸಮಾಧಿ ಚಿತ್ರವು ವಾಸ್ತವವಾಗಿ ಹೈದರಾಬಾದ್‌ನ ಮಾದನ್​ಪೇಟ್‌ನಲ್ಲಿರುವ ದರಾಬ್ ಜಂಗ್ ಕಾಲೋನಿಯಲ್ಲಿರುವ ಸ್ಮಶಾನದದ್ದಾಗಿದೆ. ಈ ಸಮಾಧಿ ಇರುವುದು ಭಾರತದಲ್ಲಿ. ಪಾಕಿಸ್ತಾನ ಸಮಾಧಿಯಲ್ಲ. ಇದೇ ಜಾಗದಲ್ಲಿ ಬೇರೊಂದು ಶವವನ್ನು ಹೂಳಬಾರದು ಎಂಬ ಕಾರಣಕ್ಕಾಗಿ ಸಮಾಧಿಗೆ ಬೀಗ ಹಾಕಲಾಗಿದೆ ಎಂದು ಬಳಕೆದಾರನೊಬ್ಬ ಚಿತ್ರ ಸಮೇತ ಟ್ವೀಟ್ ಮಾಡಿದ್ದಾರೆ.

ಟ್ವಿಟರ್ ಬಳಕೆದಾರರು, ಸ್ಮಶಾನದ ಬಳಿಯ ಮಸೀದಿ ಮತ್ತು ಅದರ ಸುತ್ತಲಿನ ಗೋರಿಗಳನ್ನು ತೋರಿಸುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. "ಸಮಾಧಿಯು ಸುಮಾರು 1.5 ರಿಂದ 2 ವರ್ಷಗಳಷ್ಟು ಹಳೆಯದು ಎಂದು ಅದರಲ್ಲಿ ವಿವರಿಸಲಾಗಿದೆ.

ಈ ಸ್ಮಶಾನದಲ್ಲಿ ಅನೇಕ ಜನರು ಅನುಮತಿಯಿಲ್ಲದೆ ಹಳೆಯ ಸಮಾಧಿಗಳ ಮೇಲೆ ಶವಗಳನ್ನು ಹೂಳುತ್ತಾರೆ. ಮೃತರ ಕುಟುಂಬಸ್ಥರು ಇಲ್ಲಿಗೆ ಭೇಟಿ ನೀಡಿದಾಗ, ಗೋರಿಯೇ ಇರುವುದಿಲ್ಲ. ಇತರರು ಶವಗಳನ್ನು ಹೂಳುವುದನ್ನು ತಡೆಯುವ ಸಲುವಾಗಿ, ಕುಟುಂಬಗಳು ಅದರ ಮೇಲೆ ಗ್ರಿಲ್ ಅಳವಡಿಸಿದ್ದಾರೆ ಎಂದು ಟ್ವಿಟರ್​ ಬಳಕೆದಾರ ಹೇಳಿಕೊಂಡಿದ್ದಾರೆ.

ಈ ಸಮಾಧಿಯು 70 ವರ್ಷದ ವಯಸ್ಸಾದ ಮಹಿಳೆಯದ್ದಾಗಿದೆ. ಆಕೆಯನ್ನು ಸಮಾಧಿ ಮಾಡಿದ ಸುಮಾರು 40 ದಿನಗಳ ನಂತರ ಆಕೆಯ ಮಗ ಸಮಾಧಿಯ ಮೇಲೆ ಕಬ್ಬಿಣದ ಗ್ರಿಲ್ ಅನ್ನು ನಿರ್ಮಿಸಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಓದಿ: ಕೌಟುಂಬಿಕ ಕಲಹ: ತನ್ನ 6 ತಿಂಗಳ ಮಗುವನ್ನೇ ಗಂಗಾನದಿಯಲ್ಲಿ ಎಸೆದ ಮಹಿಳೆ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.